ಪಾಕಿಸ್ಥಾನದ ಮುಂದಿನ ನಡೆ ಏನು?
ಈಗಾಗಲೇ ಭಾರತ ದೇಶವು ತನ್ನ ಬಲವನ್ನು ಅನೇಕ ಬಾರಿ ಪಾಕಿನ ವಿರುದ್ಧ ತೋರಿಸಿಯಾಗಿದೆ. ಪಾಕ್ ಪ್ರಚೋದಿತ ಭಯೋತ್ಪಾದನೆಗೆ ಪ್ರತೀಕಾರ ಸ್ವರೂಪ ತೋರಿಸಿಯಾಗಿದೆ. ಭಾರತದಲ್ಲಿ ಬೇರೆ ಯಾವ ನೇತೃತ್ವದ ಸರಕಾರಗಳೂ ಈ ದಿಟ್ಟ ಪ್ರತೀಕಾರ ತೋರಿಸದೆ ಇದ್ದುದರಿಂದ, ಪಾಕಿಸ್ಥಾನದ ಬಲ ಹೆಚ್ಚುತ್ತಾ ಹೋಯಿತು.
ಒಂದೊಂದೇ ಹೆಜ್ಜೆ ಮುಂದಿಡುತ್ತಾ ಕಾಶ್ಮೀರದ ಹಿಂದಿನ ಶಾಸನಗಳ ಬಲದಲ್ಲಿ ಒಂದರ್ಥದಲ್ಲಿ ಕಾಶ್ಮೀರವನ್ನು ಕಬಳಿಸಿದಂತಾಗಿತ್ತು. ಈಗಾಗಲೇ POK ರೂಪುಗೊಂಡಿದ್ದು, ಇದು ಅತಿಕ್ರಮಣದ ಫಲ. ಅಲ್ಲಿ ಯಾರ ನೇತೃತ್ವದ ಸರಕಾರ ಬಂದರೂ ಮತಾಂಧ ಭಯೋತ್ಮಾದಕರ ನಿಯಂತ್ರಣದಲ್ಲೇ ಪಾಕ್ ಸೇನೆ ಇರುತ್ತಿತ್ತು. ಅದರ ನಿಯಂತ್ರಣ ಮಾಡುವವರಿಗೆ ಒಂದೋ ಅಧಿಕಾರ ಪಥನ, ಇಲ್ಲವೇ ತಲೆದಂಡ ಕಟ್ಟಿಟ್ಟ ಬುತ್ತಿ ಎಂಬ ಶಾಸನವನ್ನೇ ಭಯೋತ್ಪಾದಕರು ತೋರಿಸಿ ಕೊಟ್ಟಾಗಿದೆ. ಈಗ ಸದ್ಯ ಇಮ್ರಾನ್ ಖಾನ್ ನೇತೃತ್ವದ ಅಲ್ಪ ಮತದ ಸರಕಾರ ಇದೆ. ಆದರೆ ಇಮ್ರಾನ್ ಹೇಗೋ ನಿಭಾಯಿಸುತ್ತಿದ್ದಾನೆ. ಕಾರಣ ಅವನ ಬಲಿಷ್ಠ ಶನಿ ಇರುವ ಜಾತಕ. ಬಡ ರಾಷ್ಟ್ರ ಆಗಿರುವುದರಿಂದ ಇಮ್ರಾನನ ಚಿಂತನೆಗಳು ಎದ್ದು ಕಾಣುತ್ತಿಲ್ಲ. ಅಂದರೆ ಮೋದಿಯವರಷ್ಟೇ ಬಲಿಷ್ಟ ಜಾತಕವಿದು. ಒಂದು ವೇಳೆ ಈತ ಭಾರತದ ಪ್ರಧಾನಿಯಾಗಿರುತ್ತಿದ್ದರೆ ಈತ ಬಹಳ ಪ್ರಖ್ಯಾತಿ ಪಡೆಯುತ್ತಿದ್ದ. ಆದರೇನು, ಮತಾಂಧ ಅಲ್ಪಮತಿಗಳ ದೇಶದಲ್ಲಿದ್ದು ಈತನ ಸಾಧನೆ, ಪರಾಕ್ರಮಗಳಿಗೆ ಬೆಲೆಯೇ ಇಲ್ಲದಂತಾಗಿದೆ.
ಇಮ್ರಾನ್ ಮತಾಂಧರ ಮಾತಿಗೆ ಬೆಲೆ ಕೊಡಲಾರ
ಭಾರತದ ಇತ್ತೀಚೆಗಿನ 370, 35ಎ ಶಾಸನದ ರದ್ಧತಿಯು ಇಡೀ ಮತಾಂಧ ಕೂಟಕ್ಕೆ ಹಿನ್ನಡೆಯಾಗಿದೆ. ಮುಂದೆ ಪಾಕ್ ಆಕ್ರಮಿತ (POK) ಕೈ ತಪ್ಪುವ ದಿನಗಳು ಹತ್ತಿರದಲ್ಲಿದೆ ಎಂಬುದು ನಮಗೆ ಸಂತಸದ ವಿಚಾರವಾದರೆ, ಅವರಿಗೆ ಭಯದ ವಾತಾವರಣ ನಿರ್ಮಿಸಿದೆ. ಇದಕ್ಕಾಗಿ ಮತಾಂಧರು ಇಮ್ರಾನ್ ಖಾನ್’ಗೆ ಒತ್ತಡ ಹೇರುತ್ತಾರೆ. ಆದರೆ ಬುದ್ಧಿವಂತ ಇಮ್ರಾನ್ ತನ್ನ ರಾಷ್ಟ್ರದ ಹಿತಕ್ಕಾಗಿ ಮತಾಂಧರ ಮಾತಿಗೆ ಬೆಲೆ ಕೊಡಲಾರ. ಆದರೆ ಅವರು ಇವನನ್ನು ಬಿಡಲಾರರು!
ವಿಶ್ವಸಂಸ್ಥೆಗೆ Legally Fileಗಳನ್ನು ಹೊತ್ತೊಯ್ದು ನ್ಯಾಯಕ್ಕಾಗಿ ಮೊರೆ ಇಡಬಹುದು. ಅದು ಪ್ರಯೋಜನಕ್ಕೆ ಬರಲಾರದು. ಯಾಕೆಂದರೆ ಪಾಕಿಸ್ಥಾನವು ಹಲವು ಸಲ ವಿಶ್ವಸಂಸ್ಥೆಯಿಂದ ಛೀಮಾರಿ ಹಾಕಿಕೊಂಡ ಭಯೋತ್ಪಾದಕರ ಪೋಷಣೆ ಮಾಡುವ ರಾಷ್ಟ್ರ ಎಂಬ ಅಪವಾದ ಹೊತ್ತಾಗಿದೆ. ಇನ್ನು ಬೆಲೆ ಇಲ್ಲ. ಆದರೆ ಈ ಸಮಸ್ಯೆಯನ್ನು ಮೂರ್ಖ ಮತಾಂಧರು ಒಪ್ಪುವುದಿಲ್ಲ. ಜಗತ್ತನ್ನೇ ಇಸ್ಲಾಮೀಕರಣ ಮಾಡಲು ಹೊರಟ ಮೂರ್ಖ ಸಾಹಸದ ಭಯೋತ್ಪಾದಕರು ಒಪ್ಪಲಾರರು. ಧರ್ಮ ಯುದ್ಧಕ್ಕೆ ಮುಂದಾಗುವುದೂ ಇಲ್ಲ. ಅಧರ್ಮದ ಮೂಲಕವೇ ಇವರು ಭಾರತದತ್ತ ನುಸುಳುತ್ತಾರೆ. ನುಸುಳಿದವರನ್ನು ನೇರ ದೇವರ ಬಳಿಗೆ ಕಳುಹಿಸುತ್ತಾರೆ ನಮ್ಮ ಸೈನ್ಯ. ಆದರೆ ಇಮ್ರಾನ್ ಖಾನನ ಜಾತಕದ ಪ್ರಕಾರ ಅವನ ಗುಣಗಳು ಇದಕ್ಕೆ ಒಪ್ಪಲಾರದು. ಹಾಗೇನಾದರೂ ಇಮ್ರಾನನೂ ಮತಾಂಧನೇ ಆಗಿರುತ್ತಿದ್ದರೆ ಅಂದು ಪೈಲೆಟ್ ಅಭಿನಂದನ್ ಅವರನ್ನು ಭಯೋತ್ಪಾದಕರಿಗೇ ಹಸ್ತಾಂತರ ಮಾಡಿ ಸುಮ್ಮನೆ ಕುಳಿತುಕೊಳ್ಳುತ್ತಿದ್ದ. ಹಾಗೆ ಮಾಡದೆ ಲೀಗಲ್ ದಾರಿ ಹುಡುಕಿದ.ಅದು ವಿಫಲವಾಯ್ತು. ಮತಾಂಧರ ನಿಂದನೆಗೂ ಗುರಿಯಾದ.
ಆ ಶುಭ ದಿನಕ್ಕಾಗಿ ವಿಶ್ವವೇ ಕಾದು ನಿಂತಿದೆ
ಇದರಿಂದ ಕೆರಳಿದ ಭಯೋತ್ಪಾದಕರು ನಾಶ ಆಗುವಲ್ಲಿಯ ವರೆಗೆ ಹೋರಾಟ ನಡೆಸಬಹುದು. ಅಲ್ಲದೆ ಇಡೀ ಜಗತ್ತೇ ಪಾಕನ್ನು ಹೀನವಾಗಿ ನೋಡುತ್ತಿದೆ. ಪಾಕ್ ನಾಶವಾದರೆ ಇಡೀ ಜಗತ್ತಿನ ಭಯೋತ್ಪಾದಕರ ಉತ್ಪಾದನೆಯು ಮುಕ್ಕಾಲುವಾಸಿ ನಿಂತ ಹಾಗಾಗುತ್ತದೆ. ಅದಕ್ಕಾಗಿ ಭಾರತವನ್ನು ಬೆಂಬಲಿಸುವ ಮೂಲಕ ಭಯೋತ್ಪಾದಕರ ನಿಗ್ರಹಕ್ಕೆ ಸಹಕರಿಸುತ್ತದೆ. ಡೋನಾಲ್ಡ್ ಟ್ರಂಪ್, ಪುಟಿನ್, ನೆತಾನ್ಯಾಹು ಈ ಶುಭದಿನವನ್ನು ಇದಿರು ನೋಡುತ್ತಿದ್ದಾರೆ. ಪಾಕಿನಲ್ಲಿ ಇಮ್ರಾನ್ ನೈತಿಕವಾಗಿ ಹೋರಾಡುವ ಮನಸ್ಸಿನಲ್ಲಿ ಇದ್ದರೂ, ಇಡೀ ಪಾಕ್ ಸೈನ್ಯ ಭಯೋತ್ಪಾದಕರಾಗಿ, ಭಯೋತ್ಪಾದಕರ ಪರವಾಗಿ ನಿಂತಿರುವುದರಿಂದ ಇಮ್ರಾನ್ ಖಾನನ ನೈತಿಕ ಹೆಜ್ಜೆಗೆ ಎಳ್ಳಷ್ಟೂ ಬೆಲೆ ಇಲ್ಲದಂತಾಗುತ್ತದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಮ್ರಾನ್ ಖಾನ್ ರಾಜೀನಾಮೆ ನೀಡಬಹುದು ಅಥವಾ ಇವನನ್ನು ಮಿಲಿಟರಿಯು ಇಳಿಸಬಹುದು. ಇದಂತೂ ಖಂಡಿತ.
ಇಮ್ರಾನನ ಪ್ರತಿ ನಡೆಯೂ ಆತನಿಗೆ ಮಾರಕ
ಮುಂದೆ? ಮಿಲಿಟರಿ ಹಿಡಿತದ ಭಯೋತ್ಪಾದಕರು ಕೈ ಹಾಕುವುದು ನ್ಯೂಕ್ಲಿಯರ್ ಅಸ್ತ್ರಗಳಿಗೆ. ಇವರಿಗಿರುವ ದಾರಿ ಇದೊಂದೆ. ಅದಕ್ಕೇ ಹೇಳುವುದು ಮೂರ್ಖರಿಗೆ ಬ್ರಹ್ಮಾಸ್ತ್ರ ಕೊಡಬಾರದು ಎಂದು. ಅಂದು ಅಶ್ವತ್ಥಾಮ ಬ್ರಹ್ಮಾಸ್ತ್ರ ಪ್ರಯೋಗಿಸಿ ಏನಾಯ್ತು? ಈಗಲೂ ಈ ಮತಾಂಧರು ಇದನ್ನು ಪ್ರಯೋಗಿಸಿ ತಮ್ಮನ್ನು ತಾವೇ ಸುಟ್ಟುಕೊಳ್ಳುವುದಂತೂ ನಿಶ್ಚಿತ. ಇಮ್ರಾನ್ ಖಾನನ ಪ್ರತೀ ನಡೆಯೂ ಆತನಿಗೇ ಮಾರಕ. ಯಾಕೆಂದರೆ ಆತನ ಲಗ್ನಾಧಿಪತಿ ಕುಜನೇ ಶತ್ರುಸ್ಥಾನಾಧಿಪತಿ. ಇದು ಸ್ವಯಂಕೃತ ಅಪರಾಧವನ್ನೇ ಮಾಡಿಸುತ್ತದೆ. ಹಾಗೆ ಮಾಡಿಸಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಇಮ್ರಾನನಲ್ಲಿದೆ.
ದುರಾದೃಷ್ಟಕ್ಕೆ ಆತ ರಾಜನಾಗಿರುವುದು ಪಾಪಿಗಳ ಸಾಮ್ರಾಜ್ಯದಲ್ಲಿ. ಒಳ್ಳೆಯ ಫಲವನ್ನು ಕೊಚ್ಚೆ ಕೆಸರಿನ ಮಧ್ಯೆ ನಿಂತು ತಿಂದರೇನಾದೀತು? ಅದೇ ಪರಿಸ್ಥಿತಿ ಇಮ್ರಾನನಿಗಾಗಿದೆ. ಹಾಗಾಗಿ ಭಾರತ ನಡೆಗಳಿಂದ ಪಾಕಿಸ್ಥಾನ ಸರಕಾರ ಘೋಷಿತ ಯುದ್ಧ ಮಾಡುವುದಿಲ್ಲ. ಬದಲಾಗಿ ಮತಾಂಧರೇ ಮುಂಚೂಣಿಯಲ್ಲಿ ಅಘೋಷಿತ ಸಮರಕ್ಕಿಳಿದು ಹತರಾಗುತ್ತಾರೆ. ಅಲ್ಲಿಗೆ ಪಾಕಿಸ್ಥಾನದ ಸರ್ವನಾಶವಾಗಿ, ಜಗತ್ತಿನ ಭೂಪಟದಿಂದ ಪಾಕಿಸ್ಥಾನ ಕಿತ್ತುಹೋಗಲಿದೆ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post