ಕಲ್ಪ ಮೀಡಿಯಾ ಹೌಸ್ | ದಕ್ಷಿಣ ಕನ್ನಡ |
ದ ಕ ಜಿಲ್ಲಾ ಜನತಾ ದಳದ ಹಿರಿಯ ನಾಯಕ, ನಿಯೋಜಿತ ಜಿಲ್ಲಾಪ್ರಧಾನ ಕಾರ್ಯದರ್ಶಿ ಸುಶೀಲ್ ನರೋಹ್ನ ಹೃದಯಘಾತದಿಂದ ನಿಧನರಾಗಿದ್ದಾರೆ.
ಅನೇಕ ವರ್ಷಗಳಿಂದ ಜನತಾ ಪಕ್ಷ ಮತ್ತು ಜನತಾ ದಳಗಳಲ್ಲಿ ತೊಡಗಿಸಿಕೊಂಡಿದ್ದ ಸುಶೀಲ್ ವೃತ್ತಿಯಿಂದ ವಿದ್ಯುತ್ ಗುತ್ತಿಗೆದಾರರಾಗಿದ್ದರು. ಇತ್ತೀಚೆಗೆ ನಡೆದ ಗುತ್ತಿಗೆದಾರರ ರಾಜ್ಯ ಸಮಿತಿ ಚುನಾವಣೆಯಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು.
ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಕನಸು ಹೊಂದಿದ್ದ ಸುಶೀಲ್ ನರೋಹ್ನ ಕುಲಶೇಖರ ಚರ್ಚ್ ಸಮಿತಿಯ ಉಪಾಧ್ಯಕ್ಷರಾಗಿ ಹಲವು ವರ್ಷಗಳಿಂದ ದುಡಿದು ಸಮುದಾಯದ ಅಭಿಮಾನ ಗಳಿಸಿದ್ದರು. ಹಿಂದೆ ನಡೆದ ಚರ್ಚ್ ದಾಳಿಯ ಸಂದರ್ಭದಲ್ಲಿ ಪ್ರಭಲ ಹೋರಾಟ ಮಾಡಿದ್ದರು. ಪಕ್ಷದ ಜಿಲ್ಲಾ ವಕ್ತಾರಾನಾಗಿ ಹೆಸರು ಮಾಡಿದ್ದ ಸುಶೀಲ್, ಬಿಷಪ್ ಹೌಸ್ ಮತ್ತು ಜನತಾ ಪಕ್ಷದ ಕೊಂಡಿಯಾಗಿದ್ದರು. ಅವರ ಸಹೋದರ ಎಂ. ಪಿ. ನರೋನ್ಹ ಖ್ಯಾತ ನ್ಯಾಯವಾದಿಯಾಗಿದ್ದಾರೆ.
ಸಂತಾಪ:
ಜೆಡಿಎಸ್ ರಾಜ್ಯ ವಕ್ತಾರ ಎಮ್.ಬಿ.ಸದಾಶಿವ ಸುಶೀಲ್ ನರೋನ್ಹ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















