No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Sunday, April 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮಲೆನಾಡಿನ ಮಡಿಲಲ್ಲಿರುವ ಶ್ರೀರಾಮ ದುರ್ಗಾಂಬ ಕ್ಷೇತ್ರದ ಐತಿಹ್ಯ ನಿಮಗೆ ಗೊತ್ತಾ? ಇಲ್ಲಿಗೊಮ್ಮೆ ನೀವು ಭೇಟಿ ನೀಡಲೇಬೇಕು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 26, 2019
in Special Articles
0
ಮಲೆನಾಡಿನ ಮಡಿಲಲ್ಲಿರುವ ಶ್ರೀರಾಮ ದುರ್ಗಾಂಬ ಕ್ಷೇತ್ರದ ಐತಿಹ್ಯ ನಿಮಗೆ ಗೊತ್ತಾ? ಇಲ್ಲಿಗೊಮ್ಮೆ ನೀವು ಭೇಟಿ ನೀಡಲೇಬೇಕು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ


ಅದು ಸುತ್ತಲೂ ಹಚ್ಚ ಹಸಿರಿನ ಬೆಟ್ಟಗುಡ್ಡಗಳ ನಡುವೆ ಸಂಪತ್ಬರಿತವಾಗಿ ಮೈದಳೆದು ನಿಂತಿರುವ ತೋಟಗಳಿಂದ ಆವೃತವಾಗಿರುವ ತಾಣ. ಮಲೆನಾಡಿನ ಸುಂದರ ಪ್ರಾಕೃತಿಕ ಸಂಪತ್ತನ್ನು ಹೊದ್ದುಕೊಂಡಿರುವ ಭೌಗೋಳಿಕ ಪ್ರದೇಶ. ಮಾತ್ರವಲ್ಲ ಆಧ್ಯಾತ್ಮಿಕತೆ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಪವಿತ್ರ ಕ್ಷೇತ್ರ. ಅದುವೇ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಹಳ್ಳಿ.ಸಾಗರ ಸನಿಹದ ವರದಹಳ್ಳಿ ಆಧ್ಯಾತ್ಮಿಕರಿಗೆ ಮನಃಶಾಂತಿ ನೀಡುವ ಸಾತ್ವಿಕ ಕ್ಷೇತ್ರ. ಬಹಳ ಪ್ರವಾಸಿಗರು ವರದಹಳ್ಳಿಗೆ ಭೇಟಿ ನೀಡುತ್ತಾರೆ. ಆದರೆ ಶ್ರೀಧರ ಸ್ವಾಮಿಗಳ ಪೂರ್ವತಪೋಸ್ಥಾನವನ್ನು ನೋಡಲು ಮರೆಯುತ್ತಾರೆ. ವರದಹಳ್ಳಿಯಿಂದ ಒಂದು ಫರ್ಲಾಂಗು ದೂರದಲ್ಲೇ ಇದೆ. ಶ್ರೀರಾಮ ದುರ್ಗಾಂಬ ದೇವಸ್ಥಾನ.
ಸುಮಾರು 6000 ವರ್ಷಗಳ ಪೌರಾಣಿಕ ಹಿನ್ನೆಲೆಯುಳ್ಳ ಕ್ರೇತ್ರ ವರದಹಳ್ಳಿಯಲ್ಲಿರುವ ಶ್ರೀರಾಮ ದುರ್ಗಾಂಬ ದೇವಾಲಯ. ಇಲ್ಲಿ ವ್ಯಾಸರು ಪ್ರತಿಷ್ಠಾಪಿಸಿದ ಶ್ರೀದುರ್ಗಮ್ಮನವರ ದೇವಸ್ಥಾನವಿದೆ. ಅವರು ತಪಗೈದ ಗುಹೆಯೂ ಇದ್ದು, ವ್ಯಾಸಗುಹೆ ಎಂದು ಕರೆಯುವ ಜಾಗವಿದೆ ಎಂದು ಮಾತು ಆರಂಭಿಸಿದರು ದೇವಾಲಯ ಟ್ರಸ್ಟ್‌’ನ ಕಾರ್ಯದರ್ಶಿ ರಮಾನಂದ ಶರ್ಮಾ.ಒಂದು ಹೇಳಿಕೆ ಪ್ರಕಾರ ವ್ಯಾಸರಾಯರು ತಾವು ಸಂಚಾರದಲ್ಲಿದ್ದಾಗ ತಂಗಿರುವ ತಾಣಗಳಲ್ಲಿ ಮುಖ್ಯ್ರಪ್ರಾಣ ದೇವರನ್ನು ಪ್ರತಿಷ್ಠಾಪಿಸಿದ್ದಾರೆ ಎಂದರು.ಇನ್ನು ಇಲ್ಲಿಯ ನಂಬಿಕೆ ಪ್ರಕಾರ ದುರ್ಗಾಂಬ ಸ್ಥಾಪನೆ ಒಂದು ವಿಶೇಷವೆಂದೇ ಹೇಳಬೇಕು. ಅವರು ತಪಗೈದ ಸ್ಥಳವೇ ವ್ಯಾಸಗುಹೆ ಎಂದು ಪ್ರಸಿದ್ಧಿ ಹೊಂದಿದೆ. ಗುಹೆಯನ್ನ ಈಗಲೂ ವೀಕ್ಷಿಸಬಹುದು.ಮಹಿಷಾಸುರನನ್ನು ವಧೆಗೈದ ಸ್ಥಳವೆಂದು ಪ್ರತೀತಿ. ಆರಂಭದಲ್ಲಿ ವಧಹಳ್ಳಿ.. ವಧಹಳ್ಳಿ.. ಎಂದು ಹೆಸರಿತ್ತು. ನಂತರ ಶ್ರೀಧರ ಸ್ವಾಮಿಗಳು ಇಲ್ಲಿ ಸುಮಾರು ಹತ್ತು ವರ್ಷ ನೆಲಸಿದರಂತೆ. ಆಗ ಪಾಳು ಬಿದ್ದ ಸಣ್ಣ ಕಲ್ಲಿನ ಕುಟೀರವಾಗಿತ್ತು ಗರ್ಭಗುಡಿ.ಶ್ರೀದುರ್ಗೆಯನ್ನು ಅರ್ಚಿಸಿ ತಮ್ಮ ತಪೋಬಲದಿಂದ ಅಲ್ಲಿ ದೈವಸಾನ್ನಿಧ್ಯವನ್ನು ಸದಾ ಇರುವಂತೆ ಮಾಡಿದರಂತೆ. ನಂತರ ಅವರ ಕೊನೆಯ ಕಾಲಕ್ಕೆ ಹತ್ತಿರದ ಗುಡ್ಡದಲ್ಲಿ ನೆಲಸಿದರಂತೆ. ಅಲ್ಲಿಯೇ ಸಮಾಧಿಯೂ ಆದರಂತೆ. ಆಮೇಲೆ ಆಶ್ರಮ ಸ್ವರೂಪ ಪಡೆಯಿತು. ನಂತರ ವರದಹಳ್ಳಿ ಆಯಿತು ಎಂದು ಭಕ್ತರಾದ ಮಂಕಾಳೆ ಶ್ರೀಧರ ಹೆಗ್ಡೆ ಅವರು ಮಾಹಿತಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾಗೆ ಮಾಹಿತಿ ನೀಡಿದರು.

ಶ್ರೀದುರ್ಗೆಯು ಮಹಿಷಾಸುರನನ್ನು ವಧಿಸುವಾಗ ಬಾಗಿದಳು. ಹೀಗಾಗಿ ಭಾಗಿದ ಭಂಗಿಯಲ್ಲಿದೆ ಈ ವಿಗ್ರಹ.ಇನ್ನು ವ್ಯಾಸರು ತಪಸ್ಸು ಮಾಡಿದರೆಂಬ ಪ್ರತೀತಿಯಿರುವ ವ್ಯಾಸಗುಹೆಯೂ ಸಹ ಇಲ್ಲಿದ್ದು, ಸನಿಹದಲ್ಲೇ ಶ್ರೀರಾಮ ದೇವಸ್ಥಾನವಿದೆ. ಅಲ್ಲಿ ಶ್ರೀಧರ ಸ್ವಾಮಿಗಳು ಪೂಜೆ ಮಾಡಿದರೆಂದು ಹೇಳುತ್ತಾರೆ.

ಅತ್ಯಂತ ಸುಂದರ ಅಂಬಾ ತೀರ್ಥವು ದುರ್ಗಾಂಬ ದೇವಾಲಯದ ಪಕ್ಕದಲ್ಲೇ ಇದ್ದು, ಅದನ್ನು ಜೀರ್ಣೋದ್ಧಾರಗೊಳಿಸಿ ತಿಳಿ ನೀರಿನ ಸರೋವರವನ್ನಾಗಿ ಮಾಡಲಾಗಿದೆ.ಇನ್ನು ಪೂಜೆಯ ವಿಚಾರದಲ್ಲಿ ನೋಡುವುದಾದರೆ, ದೇವಿಗೆ ನವರಾತ್ರಿಯಲ್ಲಿ ಒಂಭತ್ತೂ ದಿವಸ ವಿಶೇಷ ಪೂಜೆ ಅಲಂಕಾರ ಮಾಡಲಾಗುತ್ತದೆ. ಫಾಲ್ಗುಣ ಮಾಸದಲ್ಲಿ ವಾರ್ಷಿಕೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಾಲಯದ ಆವರಣದಲ್ಲೇ ತುಳಸಿಕಟ್ಟೆಯಿದ್ದು, ಅದರ ಜೊತೆಗೆ ಅಸ್ತ್ರರಾಜ ಎಂದು ಕರೆಯುವ ಶಿಲೆಯಿದೆ. ಸಾಮಾನ್ಯವಾಗಿ ಆವರಣದಲ್ಲಿ ಕ್ಷೇತ್ರಪಾಲನ ವಿಗ್ರಹವಿರುತ್ತದೆ. ಇಲ್ಲಿ ದಕ್ಷಿಣ ದಿಕ್ಕಿಗೆ ಇರಲು ಕ್ಷೇತ್ರಪಾಲ ಒಪ್ಪಲಿಲ್ಲವಂತೆ. ಹಾಗಂತ ಬೇರೆಯೇ ಶಿಲೆಯನ್ನು ಅಸ್ತ್ರರಾಜನೆಂದು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ ರಮಾನಂದ ಶರ್ಮಾ ಅವರು.

ರಮಾನಂದ ಶರ್ಮಾ

ಇನ್ನು, ಇಲ್ಲಿ ನೆಲೆಸಿರುವ ದೇವಿಯ ಶಕ್ತಿ ಅಪಾರವಾಗಿದ್ದು, ಬೇಡಿದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ತಾಯಿ ಕಳೆದ ಸಾವಿರಾರು ಉದಾಹರಣೆಗಳಿವೆ. ಅಲ್ಲದೇ, ಶ್ರೀಕ್ಷೇತ್ರದಲ್ಲಿ ವಿಶೇಷ ಪೂಜೆ ಹಾಗೂ ಹೋಮಗಳನ್ನು ಅತ್ಯಂತ ಶಾಸ್ತ್ರೋಕ್ತವಾಗಿ ನಡೆಸುವ ಪದ್ದತಿ ಇಲ್ಲಿದ್ದು, ದೇವಾಲಯದ ಟ್ರಸ್ಟ್‌ ಸದಸ್ಯರು, ಪುರೋಹಿತರ ಸೌಜನ್ಯದ ರೀತಿ ಮಾದರಿಯಾಗಿದೆ.

ಶ್ರೀರಾಮ ದುರ್ಗಾಂಬ ದೇವಾಲಯ ಎಲ್ಲಿದೆ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಹಳ್ಳಿಯ ಸನಿಹದಲ್ಲಿದೆ.


ತಲುಪುವುದು ಹೇಗೆ: ಸಾಗರದಿಂದ 10 ಕಿಮೀ ದೂರದಲ್ಲಿದೆ. ಸಾಗರದಿಂದ ಸರ್ಕಾರಿ ಹಾಗೂ ಖಾಸಗಿ ಬಸ್’ಗಳು ನಿಗದಿತ ಸಮಯಕ್ಕೆ ಇಲ್ಲಿಗೆ ಸಂಚರಿಸುತ್ತವೆ. ಸಾಗರ ಬಸ್ ನಿಲ್ದಾಣದಿಂದ ಆಟೋಗಳ ಮೂಲಕವೂ ಸಹ ತೆರಳಬಹುದು.

ದೇವಾಲಯ ಸಂಪರ್ಕ ಸಂಖ್ಯೆ: 08183-236145


ಗೂಗಲ್ ಮ್ಯಾಪ್: https://goo.gl/maps/9tP9Mpa8bng27fog6

Get in Touch With Us info@kalpa.news Whatsapp: 9481252093

Tags: Amba ThirthaHindu TempleKannada ArticleMalnad NewsShivamoggaSri Rama Durgamba TempleSri Sridhara SwamijiVaradahalliಅಂಬಾ ತೀರ್ಥಮಹಿಷಾಸುರವರದಹಳ್ಳಿಶಿವಮೊಗ್ಗಶ್ರೀಧರ ಸ್ವಾಮಿಶ್ರೀರಾಮ ದುರ್ಗಾಂಬ ದೇವಾಲಯಶ್ರೀರಾಮ ದೇವಸ್ಥಾನ
Share229Tweet123Send
Previous Post

ಶಿವಮೊಗ್ಗ: ಪ್ರತಿಷ್ಠಿತ ಮಥುರಾ ಗ್ರೂಪ್ ಆಫ್ ಹೊಟೇಲ್ಸ್‌ ಮಾಲೀಕ ನಾಗರಾಜ್ ವಿಧಿವಶ

Next Post

ಮಂಗಳಮುಖಿಯರ ಶ್ರೇಯೋಭಿವೃದ್ಧಿಯ ಸಾಕಾರಮೂರ್ತಿ ಈ ‘ರೇವತಿ’ ಸರ್ವಥಾ ಮಾದರಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮಂಗಳಮುಖಿಯರ ಶ್ರೇಯೋಭಿವೃದ್ಧಿಯ ಸಾಕಾರಮೂರ್ತಿ ಈ ‘ರೇವತಿ’ ಸರ್ವಥಾ ಮಾದರಿ

ಮಂಗಳಮುಖಿಯರ ಶ್ರೇಯೋಭಿವೃದ್ಧಿಯ ಸಾಕಾರಮೂರ್ತಿ ಈ 'ರೇವತಿ' ಸರ್ವಥಾ ಮಾದರಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

April 11, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

April 11, 2026
ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

April 11, 2026
ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

April 11, 2026
ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

April 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL