ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನಿರ್ಮಾಣ ಹಂತದ ಸೇತುವೆ ಮೇಲಿನಿಂದ ಕಾರೊಂದು ಕೆಳಕ್ಕೆ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಕುರಿತಂತೆ ಎಫ್`ಐಆರ್ #FIR ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ.
ಗೂಗಲ್ ಮ್ಯಾಪ್ಸ್ ಅನುಸರಿಸಿಕೊಂಡು ತೆರಳಿದ ಕಾರೊಂದು ನಿರ್ಮಾಣ ಹಂತದ ಸೇತುವೆ ಮೇಲಿಂದ ಕೆಳಕ್ಕೆ ಬಿದ್ದು, ಮೂವರು ಸಾವನ್ನಪ್ಪಿದ್ದರು. ಈ ಕುರಿತಂತೆ ಗೂಗಲ್ ಮ್ಯಾಪ್ಸ್ #GoogleMaps ವಿರುದ್ಧ ಎಫ್’ಐಆರ್ ದಾಖಲಿಸಲಾಗಿದೆ.
Also read: ಬೆಂಗಳೂರು | ನ.28ರಂದು ‘ಹರಿದಾಸ ವೈಭವ’ ಗಾಯನ ಕಾರ್ಯಕ್ರಮ
ಈ ಹಿನ್ನೆಲೆಯಲ್ಲಿ ಗೂಗಲ್ ವಕ್ತಾರರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮೃತರ ಕುಟುಂಬಕ್ಕೆ ನಾನು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ. ನಾವು ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಪ್ರಕರಣದ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಎಂಜಿನಿಯರ್’ಗಳು ಮತ್ತು ಗೂಗಲ್ ಮ್ಯಾಪ್ಸ್ ಅಧಿಕಾರಿ ವಿರುದ್ಧ ಎಫ್’ಐಆರ್ ದಾಖಲಾಗಿದೆ. ಇಬ್ಬರು ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆಯ ಇಬ್ಬರು ಎಂಜಿನಿಯರ್ ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್’ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ತನಿಖೆಯ ಬೆನ್ನಲ್ಲೇ ಗೂಗಲ್ ಮ್ಯಾಪ್ ಈ ಸೇತುವೆಯನ್ನು ತೋರಿಸುವ ಜಾಗದ ರಸ್ತೆ ಮಾರ್ಗವನ್ನು ತನ್ನ ನಕ್ಷೆಯಿಂದ ತೆಗೆದು ಹಾಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post