ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಎಸ್’ಆರ್’ಟಿಸಿ ಡಿಪೋ ಸನಿಹದ ಎಕ್ಸಿಬೀಷನ್ ನೋಡಲು ತೆರಳಿದ್ದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ದೊಡ್ಡ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಕಿಯ ತಾಯಿ ಮಲ್ಲಿಗೇನಹಳ್ಳಿಯ ಮಹಿಳೆಯೊಬ್ಬರು ತಮ್ಮ ಮಗಳನ್ನುತಮ್ಮ ಮನೆಯ ಸನಿಹವೇ ಇರುವ ಜೋಶ್ ಎಂಬ ವ್ಯಕ್ತಿ ಅಪಹರಣ ಮಾಡಿದ್ದಾನೆ ಎಂದು ದೂರಿದ್ದಾರೆ.
ಆರೋಪಿ ಜೋಶ್ ತಂದೆ ಮತ್ತು ತಾಯಿ ಸಹ ಅಪಹರಣಕ್ಕೆ ಸಹಾಯ ಮಾಡಿದ್ದು, ಮದುವೆ ಮಾಡಿಸುವುದಾಗಿ ದಮ್ಕಿ ಹಾಕಿದ್ದಾರೆ. ನೀವೇನಾದರೂ ಮದುವೆ ತಡೆಯಲು ಬಂದರೆ ಜೀವಸಹಿತ ಉಳಿಸುವುದಿಲ್ಲವೆಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ನಮೂದಿಸಲಾಗಿದೆ. ಅಪಹರಣವಾದ ಬಾಲಕಿಯನ್ನು ಪತ್ತೆ ಮಾಡಿ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಎಂದು ವರದಿಯಾಗಿದೆ.
ಪ್ರಕರಣ ಸಂಬಂಧ ದೊಡ್ಡ ಪೇಟೆ ಠಾಣೆಯಲ್ಲಿ ಐವರ ವಿರುದ್ಧ ಎಫ್’ಐಆರ್ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















