No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Saturday, September 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಕಾಲದ ಕಣ್ಣು ತೆರೆಯುವಂತಾದರೆ ಜೀವನ ಸುಗಮ: ರಾಘವೇಶ್ವರ ಶ್ರೀ

kalpa News by kalpa News
July 25, 2024
in ಉತ್ತರ ಕನ್ನಡ
0
ಕಾಲದ ಕಣ್ಣು ತೆರೆಯುವಂತಾದರೆ ಜೀವನ ಸುಗಮ: ರಾಘವೇಶ್ವರ ಶ್ರೀ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಕಾಲಕ್ಕೆ ಜೀವನದಲ್ಲಿ ಮಹತ್ವದ ಸ್ಥಾನವಿದೆ. ಕಾಲದ ಕಣ್ಣನ್ನು ತೆರೆದುಕೊಡುವ ಕೆಲಸವನ್ನು ಭಗವಂತ ಮಾಡಲಿ. ಕಾಲದ ಕಣ್ಣು ತೆರೆದರೆ ನಮ್ಮೆಲ್ಲರ ಜೀವನ ಸುಗಮವಾಗುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಅನಾವರಣ ಚಾತುರ್ಮಾಸ್ಯದ ನಾಲ್ಕನೇ ದಿನವಾದ ಬುಧವಾರ ೫೦ನೇ ಶ್ರೀವರ್ಧಂತಿ ಸಂದರ್ಭದಲ್ಲಿ ‘ಕಾಲ’ ಎಂಬ ವಿಷಯದ ಬಗ್ಗೆ ಆಶೀರ್ವಚನ ನೀಡಿದರು.
ಜನನ ಮರಣದ ಆಚೆಗೆ ಪರಮ ಸುಖದ ಪ್ರಪಂಚವಿದೆ. ಜನನ ಮರಣ ಮತ್ತೆ ಬರದಂಥ ಮುಕ್ತಿಯನ್ನು ಹಲವು ಮಂದಿಗೆ ಕರುಣಿಸುವಂಥ ಅವಕಾಶವನ್ನು ನಮಗೆ ಕಲ್ಪಿಸು ಎಂದು ಪ್ರಾರ್ಥಿಸಿಕೊಳ್ಳೋಣ. ಮತ್ತೆ ಹುಟ್ಟಿ ಬರದಂಥ ಬದುಕನ್ನು ಈ ಜನ್ಮದಲ್ಲಿ ಚೆನ್ನಾಗಿ ಬಾಳುವಂತಾಗಲಿ. ಮತ್ತೆ ಹುಟ್ಟದಂಥ ಬದುಕು ನಮ್ಮದಾಗಲಿ. ಅತಿಶಯ ಬದುಕನ್ನು ಬಾಳೋಣ. ದೋಷರಹಿತ ಬದುಕನ್ನು ಕರುಣಿಸುವಂತಾಗಲಿ ಎಂದು ಆಶಿಸಿದರು.

ದೃಢ ಕರ್ಮ, ಅದೃಢ ಕರ್ಮ ಮತ್ತು ದೃಢಾದೃಢ ಕರ್ಮಗಳು ಪ್ರತಿಯೊಬ್ಬನ ಜೀವನದಲ್ಲೂ ಇವೆ. ಅದೃಢ ಕರ್ಮವನ್ನು ಅಲ್ಪ ಪ್ರಯತ್ನದಿಂದ ಬದಲಾಯಿಸಿಕೊಳ್ಳಬಹುದು. ಆದರೆ ದೃಢಾದೃಢ ಕರ್ಮವನ್ನು ಬದಲಿಸಲು ಹೆಚ್ಚಿನ ಪ್ರಯತ್ನ ಬೇಕು. ದೃಢಕರ್ಮಗಳನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ, ಅದನ್ನು ಎದುರಿಸಲು ನಾವು ಸಜ್ಜಾಗಬಹುದು. ಇದನ್ನು ನಮಗೆ ತಿಳಿಯುವಂತೆ ಮಾಡುವುದೇ ಜ್ಯೋತಿಷ ಎಂದು ವಿವರಿಸಿದರು.
ಕಾಲಕ್ಕೆ ನಮ್ಮ ಸಂಪ್ರದಾಯದಲ್ಲಿ ಕೂಡಾ ವಿಶಿಷ್ಟ ಸ್ಥಾನವಿದೆ. ಇದನ್ನೇ ನಾವು ಮುಹೂರ್ತ ಎನ್ನುತ್ತೇವೆ. ಉದಾಹರಣೆಗೆ ರಾಮ ಶುಭ ಮುಹೂರ್ತದಲ್ಲಿ ಜನಿಸಿದ ಪರಿಣಾಮ ಆತನ ಜೀವನದುದ್ದಕ್ಕೂ ಶುಭಗಳ ಸರಣಿಯೇ ಸಂಭವಿಸಿತು. ಇದಕ್ಕೆ ವಿರುದ್ಧವಾಗಿ ರಾವಣ ಅಶುಭ ಗಳಿಗೆಯಲ್ಲಿ ಜನಿಸಿದ್ದು, ಆತನಿಂದ ಅಶುಭಗಳೇ ಘಟಿಸಲು ಕಾರಣವಾಯಿತು ಎಂದು ವಿಶ್ಲೇಷಿಸಿದರು.

Also read: ಕಂಗನಾ ಸಂಸತ್ ಸದಸ್ಯ ಸ್ಥಾನಕ್ಕೆ ಕುತ್ತು? ಹೈಕೋರ್ಟ್ ನೊಟೀಸ್ ಜಾರಿ | ಕಾರಣವೇನು?

ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾಲ ಘಳಿಗೆಗಳನ್ನು ಲೆಕ್ಕ ಹಾಕಿದ್ದರು. ಅಚಾತುರ್ಯದಿಂದ ಹುಕ್ಕಬುಕ್ಕರು ಸ್ವಲ್ಪಮೊದಲೇ ಅಡಿಗಲ್ಲು ಇಟ್ಟ ಪರಿಣಾಮವಾಗಿ ಸಾವಿರಾರು ವರ್ಷ ಬಾಳಬೇಕಾದ ವಿಜಯನಗರ ಸಾಮ್ರಾಜ್ಯ ಕೆಲವೇ ನೂರು ವರ್ಷಗಳಲ್ಲಿ ಅಳಿಯುವಂತಾಯಿತು ಎಂದರು.

ಈ ಕ್ಷಣಕ್ಕೂ ಆ ಕ್ಷಣಕ್ಕೂ ಇರುವ ಅಂತರ ಅದು. ಕಾಲವಿಧೇಯಕ ಶಾಸ್ತç, ಕಾಲ ನಿರೂಪಕ ಶಾಸ್ತ್ರವೇ ಜ್ಯೋತಿಷ. ಇದನ್ನು ವೇದಪುರುಷನ ಕಣ್ಣು ಎಂದು ಕರೆಯಲಾಗಿದೆ. ಯಾವುದನ್ನು ಯಾವಾಗ, ಎಲ್ಲಿ ಮಾಡಬೇಕು ಎನ್ನುವುದು ಮುಖ್ಯ. ಕಾಲ ದೇಶಗಳ ಪರಿಜ್ಞಾನ ಇರುವವನು ಜೀವನದಲ್ಲಿ ಸೋಲುವುದಿಲ್ಲ. ಮಹತ್ಕಾರ್ಯಗಳನ್ನು ಸಾಧಿಸುತ್ತಾನೆ ಎಂದು ವಿವರಿಸಿದರು.

ಹೊರನಾಡಿನ ಧರ್ಮದರ್ಶಿ ಭೀಮೇಶ್ವರ ಜೋಶಿ ದಂಪತಿ ವರ್ಧಂತಿ ದಿನದ ಭಿಕ್ಷಾಸೇವೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಶ್ರೀಮಠದ ಅವಿಚ್ಛಿನ್ನ ಪರಂಪರೆಯ 33ನೇ ಯತಿಗಳಾದ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿಯವರು ರಚಿಸಿದ ‘ಉತ್ತರ ಸಹ್ಯಾದ್ರಿಯೊಳಗಿನ ಹವ್ಯಕ, ದ್ರಾವಿಡ ಬ್ರಾಹ್ಮಣರ ಉತ್ಪತ್ತಿಯ ಇತಿಹಾಸವು’ ಎಂಬ ಕೃತಿಯ ಅನಾವರಣವನ್ನು ಶ್ರೀಪರಿವಾರದ ಕೆ.ವಿ.ರಮೇಶ್ ನೆರವೇರಿಸಿದರು.
ನಮ್ಮ ಪರಂಪರೆಯ ಪೂರ್ವಾಚಾರ್ಯರು ರಚಿಸಿದ ಗ್ರಂಥಗಳಲ್ಲಿ ಪ್ರಥಮ ಉಪಲಬ್ಧ ಗ್ರಂಥ ಇದಾಗಿದ್ದು, ಮುಂಬೈ ಕರ್ನಾಟಕ ಛಾಪಖಾನೆ ಇದನ್ನು ಮುದ್ರಿಸಿತ್ತು. ಈ ಅಪೂರ್ವ ಕೃತಿ ಇಂದು ಅಲಭ್ಯವಾಗಿದ್ದು, ಶ್ರೀವರ್ಧಂತಿಯ ಸಂದರ್ಭದಲ್ಲಿ ಅದನ್ನು ಅರ್ಥಪೂರ್ಣವಾಗಿ ಅನಾವರಣ ಮಾಡಲಾಯಿತು.

ಶ್ರೀಮಾತೆ ವಿಜಯಲಕ್ಷಿö್ಮ ದೀಪಪ್ರಜ್ವಲನೆ ನೆರವೇರಿಸಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಶ್ರೀಕಾರ್ಯದರ್ಶಿ ಮಧು ಜಿ.ಕೆ. ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತಿçಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ, ಮೋಹನ ಭಟ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaUttara Kannadaಗೋಕರ್ಣ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕಂಗನಾ ಸಂಸತ್ ಸದಸ್ಯ ಸ್ಥಾನಕ್ಕೆ ಕುತ್ತು? ಹೈಕೋರ್ಟ್ ನೊಟೀಸ್ ಜಾರಿ | ಕಾರಣವೇನು?

Next Post

ಗಮನಿಸಿ! ಜುಲೈ 31ರವರೆಗೂ ಚಿಕ್ಕಮಗಳೂರಿನ ಈ ಪ್ರದೇಶಗಳಿಗೆ ಪ್ರವೇಶ ನಿಷಿದ್ಧ

kalpa News

kalpa News

Next Post
ಮಳೆ ಎಂದು ಚಿಕ್ಕಮಗಳೂರು ಜಿಲ್ಲೆಗೆ ಟ್ರಿಪ್ ಪ್ಲಾನ್ ಮಾಡ್ತಿದಿರಾ? ಹಾಗಾದರೆ ಈ ಸುದ್ದಿ ಓದಿ

ಗಮನಿಸಿ! ಜುಲೈ 31ರವರೆಗೂ ಚಿಕ್ಕಮಗಳೂರಿನ ಈ ಪ್ರದೇಶಗಳಿಗೆ ಪ್ರವೇಶ ನಿಷಿದ್ಧ

Leave a Reply Cancel reply

Your email address will not be published. Required fields are marked *

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL