ನವದೆಹಲಿ: ಅತ್ಯಂತ ಪ್ರಮುಖ ಬೆಳವಣಿಗೆಯೊಂದರಲ್ಲಿ ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏರಿಕೆ ಮಾಡಿದೆ.
ಈ ಕುರಿತಂತೆ ಇಂದು ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಪಿಪಿಎಫ್, ಎನ್‌ಎಸ್‌ಸಿ ಸೇರಿದಂತೆ ಹಲವು ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಶೇ.0.4ರಷ್ಟು ಏರಿಕೆ ಮಾಡಿದೆ.
ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರವು ವಾರ್ಷಿಕವಾಗಿ ಮತ್ತೆ ಶೇ 4ಕ್ಕೆ ಮರಳಿದೆ. ಪಿಪಿಎಫ್ ಮತ್ತು ಎನ್‌ಎಸ್‌ಸಿ ವಾರ್ಷಿಕ ಬಡ್ಡಿ ದರ ಶೇ 7.6 ರಿಂದ ಶೇ 8ಕ್ಕೆ ಏರಿಕೆಯಾಗಿದ್ದು, ಕಿಸಾನ್ ವಿಕಾಸ ಪತ್ರಕ್ಕೆ 7.7 ಬಡ್ಡಿ ಜತೆ ಮೆಚ್ಯೂರಿಟಿ ಅವಧಿಯನ್ನು 118 ತಿಂಗಳಿಂದ 112 ತಿಂಗಳುಗಳಿಗೆ ಇಳಿಸಲಾಗಿದೆ ಎಂದು ವರದಿಯಾಗಿದೆ.
Discussion about this post