ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಯಶವಂತಪುರ |
ಶಿವಮೊಗ್ಗ-ಯಶವಂತಪುರ ಹಾಗೂ ಮೈಸೂರು-ಶಿವಮೊಗ್ಗ #Shivamogga ನಡುವಿನ ಎರಡು ರೈಲುಗಳ ಕುರಿತಾಗಿ ರೈಲ್ವೆ ಇಲಾಖೆ ಮಹತ್ವದ ಮಾಹಿತಿ ನೀಡಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SouthWesternRailway ಪ್ರಕಟಣೆ ಹೊರಡಿಸಿದ್ದು, ಶಿವಮೊಗ್ಗ-ಯಶವಂತಪುರ ಹಾಗೂ #Mysore ಮೈಸೂರು-ಶಿವಮೊಗ್ಗ ನಡುವಿನ ಎರಡು ಎಕ್ಸ್’ಪ್ರೆಸ್ ರೈಲುಗಳ ಕುರಿತಾಗಿ ಅಪ್ಡೇಟ್ ನೀಡಿದೆ.
ಅಪ್ಡೇಡ್-1: 16579/16580 ಸಂಖ್ಯೆಯ #Yashwantapura ಯಶವಂತಪುರ-ಶಿವಮೊಗ್ಗ ಟೌನ್ – ಯಶವಂತಪುರ ದೈನಂದಿನ ಇಂಟರ್’ಸಿಟಿ ಎಕ್ಸ್’ಪ್ರೆಸ್ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯು ಚಿಕ್ಕಬಾಣಾವರ ನಿಲ್ದಾಣದಲ್ಲಿ ಇನ್ನೂ ಆರು ತಿಂಗಳ ಕಾಲ, ಡಿಸೆಂಬರ್ 15, 2025 ರವರೆಗೆ ಮುಂದುವರೆಯಲಿದೆ.ಅಪ್ಡೇಟ್-2: ಸೇಂಟ್ ಆಂಟನಿ ಬೆಸಿಲಿಕಾದ ವಾರ್ಷಿಕ ಉತ್ಸವದ ಹಿನ್ನೆಲೆಯಲ್ಲಿ, ಡೋರ್ನಹಳ್ಳಿ ಹಾಲ್ಟ್ ನಿಲ್ದಾಣದಲ್ಲಿ ಈ ಕೆಳಗಿನ ರೈಲುಗಳಿಗೆ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ, ಜೂನ್ 12, 2025 ರಿಂದ ಜೂನ್ 14, 2025 ರವರೆಗೆ (4 ದಿನಗಳವರೆಗೆ) ಉತ್ಸವದಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ. ವಿವರಗಳು ಈ ಕೆಳಗಿನಂತಿವೆ:
- 16225 ಸಂಖ್ಯೆಯ ಮೈಸೂರು-ಶಿವಮೊಗ್ಗ ಟೌನ್ ಎಕ್ಸ್’ಪ್ರೆಸ್ 10:43 ಗಂಟೆಗೆ ಆಗಮಿಸಿ 10:44 ಕ್ಕೆ ಹೊರಡುತ್ತದೆ.
- 16226 ಸಂಖ್ಯೆಯ ಶಿವಮೊಗ್ಗ ಟೌನ್-ಮೈಸೂರು ಎಕ್ಸ್’ಪ್ರೆಸ್ 15:49 ಗಂಟೆಗೆ ಆಗಮಿಸಿ 15:50 ಕ್ಕೆ ಹೊರಡುತ್ತದೆ.
- 16222 ಸಂಖ್ಯೆಯ ಮೈಸೂರು-ತಾಳಗುಪ್ಪ #Talguppa ಎಕ್ಸ್’ಪ್ರೆಸ್ 14:35 ಗಂಟೆಗೆ ಆಗಮಿಸಿ 14:36 ಕ್ಕೆ ಹೊರಡುತ್ತದೆ.
- 16221 ಸಂಖ್ಯೆಯ ತಾಳಗುಪ್ಪ – ಮೈಸೂರು ಎಕ್ಸ್’ಪ್ರೆಸ್ 14:20 ಗಂಟೆಗೆ ಆಗಮಿಸಿ 14:21 ಕ್ಕೆ ಹೊರಡುತ್ತದೆ.
ಅಪ್ಡೇಟ್-3:
- 2025ರ ಜೂನ್ 5ರಿಂದ ನವೆಂಬರ್ 1, 2025 ರವರೆಗೆ ನೆಲಮಂಗಲ ನಿಲ್ದಾಣದಲ್ಲಿ ರೈಲು ಸಂಖ್ಯೆ 11311/11312 ಸೋಲಾಪುರ-ಹಾಸನ ಎಕ್ಸ್’ಪ್ರೆಸ್’ಗೆ ತಾತ್ಕಾಲಿಕ ನಿಲುಗಡೆ ನೀಡಲಿದೆ.
- 11311 ಸಂಖ್ಯೆಯ ಸೋಲಾಪುರ-ಹಾಸನ ಎಕ್ಸ್’ಪ್ರೆಸ್ (05.06.2025 ರಿಂದ 31.10.2025 ರವರೆಗೆ ಪ್ರಾರಂಭವಾಗುವ ಪ್ರಯಾಣ) ಬೆಳಿಗ್ಗೆ 07:38 ಕ್ಕೆ ನೆಲಮಂಗಲಕ್ಕೆ ಆಗಮಿಸಿ 07:40 ಕ್ಕೆ ಹೊರಡುತ್ತದೆ.
- ರೈಲು ಸಂಖ್ಯೆ 11312 ಹಾಸನ-ಸೋಲಾಪುರ ಎಕ್ಸ್’ಪ್ರೆಸ್ (06.06.2025 ರಿಂದ 01.11.2025 ರವರೆಗೆ ಪ್ರಾರಂಭವಾಗುವ ಪ್ರಯಾಣ) ಸಂಜೆ 5:59 ಕ್ಕೆ ನೆಲಮಂಗಲಕ್ಕೆ ಆಗಮಿಸಿ ಸಂಜೆ 6:01 ಕ್ಕೆ ಹೊರಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post