ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹೊಳೆಹೊನ್ನೂರು ಸಮೀಪದ ಮೂಡಲವಿಠಲಾಪುರ ಬಳಿ ಸಂಭವಿಸಿದ ಬಸ್ ಹಾಗೂ ಬೈಕ್ ಡಿಕ್ಕಿಯಲ್ಲಿ ಅಪ್ಪ, ಅಮ್ಮ, ಹಾಗೂ ಮಗಸಾವು ಕಂಡ ಧಾರುಣ ಘಟನೆ ನಡೆದಿದೆ.
ಇಂದು ಸಂಜೆ ಈ ಭೀಕರ ಘಟನೆ ನಡೆದಿದ್ದು, ಹನುಮಂತಾಪುರ ಗ್ರಾಮದ ಒಂದೇ ಕುಟುಂಬ ಮೂವರು ಮೃತ ದುರ್ಧೈವಿಗಳು.
ಹನುಮಂತಾಪುರದ ಗೌಡರ ವೀರೇಶ್ ಅವರು ಪತ್ನಿ ಹಾಗೂ ಪುತ್ರನೊಂದಿಗೆ ಬರುವಾಗ ಮದುವೆ ದಿಬ್ಬಣಕ್ಕೆ ಹೋಗಿ ಬರುತ್ತಿದ್ದ ರಿಪಬ್ಲಿಕ್ ಬಸ್ ಡಿಕ್ಕಿ ಹೊಡೆದಿದೆ. ಏಕಕಾಲದಲ್ಲಿ ಮೂವರೂ ಸಾವು ಕಂಡಿದ್ದಾರೆ.
ದುರಂತವೆಂದರೆ ವೀರೇಶ್ ಅವರ ಪತ್ನಿ ಐದು ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ. ಅಲ್ಲಿನ ಸ್ಥಿತಿ ಗಮನಿಸಿದ ತುಂಬಾ ಜನ ಗಾಬರಿಯಿಂದ ನಿತ್ರಾಣರಾಗಿದ್ದಾರೆ.
ಬಸ್ ಚಾಲಕ ನಾಪತ್ತೆಯಾಗಿದ್ದು, ಇಡೀ ಹೊಳೆಹೊನ್ನೂರು ಕೈಮರ ಭಾಗ ತಲ್ಲಣಗೊಂಡಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093

















