ಕಲ್ಪ ಮೀಡಿಯಾ ಹೌಸ್ | ಹುಬ್ಭಳ್ಳಿ |
ಹುಬ್ಬಳ್ಳಿ-ರಾಮನಾಥಪುರಂ ಹಾಗೂ ಸೋಲಾಪುರ-ಹಾಸನ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬಿಗ್ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ರೈಲೆ ಮಂಡಳಿಯ ಮಾಹಿತಿ ಪ್ರಕಟಿಸಿದ್ದು, ವಿವರಗಳು ಇಂತಿವೆ.

07355/07356 ಸಂಖ್ಯೆಯ ಹುಬ್ಬಳ್ಳಿ-ರಾಮನಾಥಪುರಂ- ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲುಗಳ ಸಂಚಾರದ ಅವಧಿಯನ್ನು ವಿಸ್ತರಿಸಲು ಅನುಮೋದನೆ ನೀಡಿದೆ.
07355 ಸಂಖ್ಯೆಯ ಎಸ್’ಎಸ್’ಎಸ್ ಹುಬ್ಬಳ್ಳಿ-ರಾಮನಾಥಪುರಂ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು ಮೊದಲು ಅಕ್ಟೋಬರ್ 25ರವರೆಗೆ ಓಡಲು ಸೂಚಿಸಲಾಗಿತ್ತು. ಈಗ, ಇದು ನವೆಂಬರ್ 1ರಿಂದ ನವೆಂಬರ್ 29, ರವರೆಗೆ ತನ್ನ ಸೇವೆಯನ್ನು ಶನಿವಾರದಂದು ಐದು ಟ್ರಿಪ್’ಗಳಿಗೆ ಮುಂದುವರೆಸಲಿದೆ.

ಈ ರೈಲುಗಳು ತಮ್ಮ ಈಗಿರುವ ಸಂಯೋಜನೆ, ಸಮಯ ಮತ್ತು ನಿಲುಗಡೆಗಳೊಂದಿಗೆ ಮುಂದುವರೆಯಲಿವೆ.
ನೆಲಮಂಗಲದಲ್ಲಿ ಸೋಲಾಪುರ-ಹಾಸನ ಎಕ್ಸ್’ಪ್ರೆಸ್ ತಾತ್ಕಾಲಿಕ ನಿಲುಗಡೆ ವಿಸ್ತರಣೆ
ಸುಬ್ರಹ್ಮಣ್ಯ ರೋಡ್ ಮತ್ತು ಸಕಲೇಶಪುರದ ನಡುವೆ ನಡೆಯುತ್ತಿರುವ ರೈಲ್ವೆ ವಿದ್ಯುದೀಕರಣ ಕಾಮಗಾರಿ ಹಿನ್ನಲೆಯಲ್ಲಿ, 16575/16576 ಸಂಖ್ಯೆಯ ಯಶವಂತಪುರ – ಮಂಗಳೂರು ಜಂP್ಷÀನ್ – ಯಶವಂತಪುರ ಎಕ್ಸ್’ಪ್ರೆಸ್ ರz್ದÁದ ನಂತರ, ನೈಋತ್ಯ ರೈಲ್ವೆಯು ನೆಲಮಂಗಲ ನಿಲ್ದಾಣದಲ್ಲಿ 11311/11312 ಸಂಖ್ಯೆಯ ಸೋಲಾಪುರ-ಹಾಸನ-ಸೋಲಾಪುರ ಎಕ್ಸ್’ಪ್ರೆಸ್’ನ ತಾತ್ಕಾಲಿಕ ನಿಲುಗಡೆಯನ್ನು ಡಿಸೆಂಬರ್ 16ರವರೆಗೆ ವಿಸ್ತರಿಸಲು ನಿರ್ಧರಿಸಿದೆ.
- ರೈಲು ಸಂಖ್ಯೆ 11311 ಸೋಲಾಪುರ-ಹಾಸನ ಎಕ್ಸ್’ಪ್ರೆಸ್ ರೈಲಿನ ನಿಲುಗಡೆಯನ್ನು ಮೊದಲು ಅಕ್ಟೋಬರ್ 31, 2025ರವರೆಗೆ ನಿಗದಿಪಡಿಸಲಾಗಿತ್ತು. ಇದೀಗ ಇದನ್ನು ನವೆಂಬರ್ 1 ರಿಂದ ಡಿಸೆಂಬರ್ 15, 2025ರವರೆಗೆ ವಿಸ್ತರಿಸಲಾಗಿದೆ.
- ರೈಲು ಸಂಖ್ಯೆ 11312 ಹಾಸನ-ಸೋಲಾಪುರ ಎಕ್ಸ್’ಪ್ರೆಸ್’ನ ರೈಲಿನ ನಿಲುಗಡೆಯನ್ನು ಮೊದಲು ನವೆಂಬರ್ 1, 2025ರವರೆಗೆ ನಿಗದಿಪಡಿಸಲಾಗಿತ್ತು. ಇದೀಗ ಇದನ್ನು ನವೆಂಬರ್ 2 ರಿಂದ ಡಿಸೆಂಬರ್ 16, 2025ರವರೆಗೆ ವಿಸ್ತರಿಸಲಾಗಿದೆ.
ಈ ರೈಲುಗಳು ನೆಲಮಂಗಲ ನಿಲ್ದಾಣದಲ್ಲಿ ತಮ್ಮ ಪ್ರಸ್ತುತ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿಯಂತೆ ಮುಂದುವರೆಸಲಿವೆ.

16519/16520 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು-ಜೋಲಾರಪೆಟೈ-ಕೆಎಸ್’ಆರ್ ಬೆಂಗಳೂರು ಮೆಮು ರೈಲಿಗೆ ಹೂಡಿ ನಿಲ್ದಾಣದಲ್ಲಿ ನೀಡಿದ್ದ ತಾತ್ಕಾಲಿಕ ನಿಲುಗಡೆಯನ್ನು ಇನ್ನೂ ಆರು ತಿಂಗಳ ಕಾಲ ಮುಂದುವರಿಸಲಾಗಿದೆ. ಈ ವಿಸ್ತರಣೆಯು 01.12.2025 ರಿಂದ 31.05.2026 ರವರೆಗೆ ಜಾರಿಯಲ್ಲಿರುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post