ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕೊರೋನಾ ವೈರಸ್ ಸೋಂಕು ಮಕ್ಕಳಲ್ಲಿಯೂ ಸಹ ತೀವ್ರವಾಗಿ ಬಾಧಿಸುತ್ತಿದ್ದು, ಈಗ ಈ ಸಂಖ್ಯೆ 108ಕ್ಕೆ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ.
ಕೊರೋನಾ ಸೋಂಕಿನ ಕುರಿತಾಗಿ ಆರಂಭದಿಂದಲೂ ಚಿಕ್ಕ ಮಕ್ಕಳು ಹಾಗೂ ವೃದ್ಧರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೇಳುತ್ತಲೇ ಬಂದಿದೆ. ಆದರೂ, ಸಹ ಈವರೆಗೂ ರಾಜ್ಯದಾದ್ಯಂತ ನೂರಕ್ಕೂ ಅಧಿಕ ಮಕ್ಕಳಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ನಿಮ್ಮ ಮಕ್ಕಳನ್ನು ಹೆಚ್ಚಿನ ಮುತುವರ್ಜಿ ವಹಿಸಿ ನೋಡಿಕೊಂಡು, ಅನಾವಶ್ಯಕವಾಗಿ ಅವರ ಮನೆಯಿಂದ ಹೊರಕ್ಕೆ ಹೋಗದಂತೆ ಜಾಗ್ರತೆ ವಹಿಸಿ. ನಿಮ್ಮ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ನೀಡಿ.
ಯಾವ ಊರಿನಲ್ಲಿ ಎಷ್ಟೆಷ್ಟು ಮಕ್ಕಳಲ್ಲಿ ಸೋಂಕು?
ಬೆಂಗಳೂರು 16
ಬೆಳಗಾವಿ 13
ದಾವಣಗೆರೆ 13
ಕಲಬುರಗಿ 13
ಬಾಗಲಕೋಟೆ 10
ಉತ್ತರ ಕನ್ನಡ 8
ವಿಜಯಪುರ 7
ಮಂಡ್ಯ 7
ಹಾಸನ 5
ದಕ್ಷಿಣ ಕನ್ನಡ 3
ಬೀದರ್ 3
ಬಳ್ಳಾರಿ 2
ಮೈಸೂರು, ಉಡುಪಿ, ಬೆಂಗಳೂರು ಗ್ರಾಮಾಂತರ, ತುಮಕೂರು, ಧಾರವಾಡ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ 1
Get in Touch With Us info@kalpa.news Whatsapp: 9481252093
Discussion about this post