ಪೊಖ್ರಾನ್: ನಮ್ಮ ಬಳಿ ಅಣುಬಾಂಬ್ ಇದೆ. ಆದರೆ, ಪಾಕಿಸ್ಥಾನದ ಮೇಲೆ ಅದರ ಬಳಕೆ ನಮ್ಮ ಮೊದಲ ಆದ್ಯತೆಯಲ್ಲ. ಆದರೆ, ಪರಿಸ್ಥಿತಿ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಈ ರೀತಿ ಪಾಕಿಸ್ಥಾನಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎಚ್ಚರಿಕೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಪೊಖ್ರಾನ್’ಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಭಾರತದ ಪರಮಾಣು ಶಕ್ತಿಗೆ ಸಾಕ್ಷಿಯಾದ ಮೊದಲ ಪ್ರದೇಶ ಪೊಖ್ರಾನ್. ಇದು ಅಟಲ್ ಜಿ ಅವರಿಂದ ಸಾಕಾರವಾಗಿತ್ತು. ಇನ್ನು, ಪಾಕಿಸ್ಥಾನದ ವಿಚಾರದಲ್ಲಿ ಅದರ ತೊಂದರೆಗಳು ಹೀಗೇ ಮುಂದುವರೆದರೆ ಪರಮಾಣು ದಾಳಿ ನಮ್ಮ ಮೊದಲ ಆದ್ಯತೆಯಲ್ಲ. ಆದರೆ, ಪರಿಸ್ಥಿತಿ ಹೇಗೆ ಎದುರಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳುವ ಮೂಲಕ, ಪಾಕ್ ಭಾರತದ ಮೇಲೆ ದಾಳಿಗೆ ಸಿದ್ದವಾದರೆ, ಅದರ ಮೇಲೆಯೇ ಅಣುಬಾಂಬ್ ಹಾಕಬೇಕಾಗುತ್ತದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
Discussion about this post