ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಿಗೆ ಕೆಎಸ್‌ಐಎಸ್‌ಎಫ್‌ನ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕಾಗಿ ಶೀಘ್ರದಲ್ಲಿಯೇ 1350 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಪೊಲೀಸ್ ಕೆಲಸಕ್ಕೆ ಸೇರುವ ಆಕಾಂಕ್ಷಿಗಳು ಅರ್ಜಿ ಹಾಕಲು ಸಿದ್ಧವಾಗಿರಿ.
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಒದಗಿಸಲು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಒಂದು ಪೂರ್ಣ ಪ್ರಮಾಣದ ಬೆಟಾಲಿಯನ್ ರಚನೆಯಾಗಲಿದೆ. ಪೊಲೀಸ್ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ.
ನಮ್ಮ ಮೆಟ್ರೋ ಭದ್ರತೆಗೆ ಪೂರ್ಣ ಪ್ರಮಾಣದ ಬೆಟಾಲಿಯನ್ ರಚನೆಯಾಗಲಿದೆ. 1350 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅವಶ್ಯವಿರುವ ವೇತನ, ಭತ್ಯೆ ಇತರೆ ಸೌಲಭ್ಯಗಳನ್ನು ನಮ್ಮ ಮೆಟ್ರೋ ಸಂಸ್ಥೆಯೇ ಭರಿಸುವಂತೆ ಷರತ್ತು ಹಾಕಲಾಗಿದೆ.
ಬೆಟಾಲಿಯನ್‌ಗೆ ವೃಂದ ಮತ್ತು ನೇಮಕಾತಿ ನಿಯಮಗಳ ಅನುಸಾರ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದೆ. ಈ ಹುದ್ದೆಗಳ ವೆಚ್ಚವನ್ನು ನಮ್ಮ ಮೆಟ್ರೋ ಸಂಸ್ಥೆಯೇ ಭರಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುವುದಿಲ್ಲ.
ಹುದ್ದೆಗಳ ವಿವರ
- ಕಮಾಂಡೆಂಟ್ – 1
- ಡೆಪ್ಯೂಟಿ ಕಮಾಂಡೆಂಟ್ – 2
- ಅಸಿಸ್ಟೆಂಟ್ ಕಮಾಂಡೆಂಟ್ – 5
- ಪಿ.ಐ – 10
- ಎ.ಎಸ್.ಐ – 51
- ಪಿ.ಎಸ್.ಐ – 93
- ಹೆಚ್.ಸಿ – 65
- ಪಿಸಿ – 1018
- ಅನುಯಾಯಿಗಳು – 105
ಸೇರಿದಂತೆ 1350 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹೊಸ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಪೂರ್ಣ ಪ್ರಮಾಣದ ಬೆಟಾಲಿಯನ್‌ಗೆ ನಮ್ಮ ಮೆಟ್ರೋ ವೇತನ, ಭತ್ಯೆ, ಇತರ ಸೌಲಭ್ಯ ನೀಡಲಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕೆಲಸ ಮಾಡಬೇಕಿದ್ದು, ಇದಕ್ಕೆ ಸರ್ಕಾರದ ಆದೇಶವಾಗಿದೆ.
ಕರ್ನಾಟಕ ಪೊಲೀಸ್ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರದ ಒಪ್ಪಿಗೆ ಸಿಕ್ಕಿದೆ. ನಮ್ಮ ಮೆಟ್ರೋ ವೇತನ, ಭತ್ಯೆ ನೀಡುವುದರಿಂದ ಸರ್ಕಾರಕ್ಕೆ ಹೆಚ್ಚುವರಿ ಹೊರೆ ಆಗುವುದಿಲ್ಲ. ನೇಮಕಾತಿ ಅಧಿಸೂಚನೆ ಶೀಘ್ರದಲ್ಲಿಯೇ ಪ್ರಕಟವಾಗುವ ನಿರೀಕ್ಷೆ ಇದೆ.
Discussion about this post