No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Friday, April 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸಾಹಿತ್ಯ ಕೃಷಿಯಿಂದಲೇ ಎಲ್ಲರ ಮನಕಾನಂದ ನೀಡುವ ಕೆ.ಜಿ. ಕೃಷ್ಣಾನಂದ

ಶಿವಮೊಗ್ಗೆಯಲ್ಲಿ ಅರಳಿದ ಮೊಗ್ಗುಗಳು-3

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 6, 2025
in Special Articles
0
ಸಾಹಿತ್ಯ ಕೃಷಿಯಿಂದಲೇ ಎಲ್ಲರ ಮನಕಾನಂದ ನೀಡುವ ಕೆ.ಜಿ. ಕೃಷ್ಣಾನಂದ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ಬರವಣಿಗೆ ಎಂಬುದನ್ನು ಯಾರು ಬೇಕಾದರೂ ಮಾಡಬಹುದಾದರೂ, ಅದರಲ್ಲಿ ವೈಶಿಷ್ಟ್ಯವನ್ನು ಮೂಡಿಸಿ ಬರೆಯಲು ಆಳವಾದ ಓದು, ಸಾಹಿತ್ಯ ಜ್ಞಾನ ಭಾಷಾ ಹಿಡಿತ ಎಲ್ಲವೂ ಬಹು ಮುಖ್ಯವಾಗಿ ಬೇಕಾದವುಗಳಾಗಿವೆ.

ಕನ್ನಡ ನಮ್ಮ ಮಾತೃಭಾಷೆ. ಇದು ಕೇಳಲು ಚಂದವೂ, ಕಲಿಯಲು ತುಸು ಕಠಿಣವೂ ಹೌದು. ನುಡಿ ಹಬ್ಬದ ಈ ಶುಭ ಸಂದರ್ಭದಲ್ಲಿ ವಾಗ್ದೇವಿಯ ಅಡಿಗೆ ತಮ್ಮ ಲೇಖನಗಳನ್ನು ಸಮರ್ಪಿಸಿ, ಆಕೆಯ ಮೆರುಗು ಹೆಚ್ಚಿಸಿದ ಒಬ್ಬ ವಿಶೇಷ ವ್ಯಕ್ತಿಯನ್ನು ಶಿವಮೊಗ್ಗೆಯಲ್ಲಿ ಅರಳಿದ ಮೊಗ್ಗಿನ ಮಾಲಿಕೆಯಲ್ಲಿ ಪರಿಚಯಿಸುತ್ತಿದ್ದೇನೆ. ಕನ್ನಡಕ್ಕೆ ಹೆಮ್ಮೆ ಎನಿಸಿದ ಮಹನೀಯರ ಪರಿಚಯವನ್ನು ಈ ಮಾಲಿಕೆಯಲ್ಲಿ ಮಾಡಿಕೊಡಲಿದ್ದೇನೆ. ಅವರು ಯಾರೆಂದರೆ ತಮ್ಮ ಬರವಣಿಗೆಗಳಿಂದಲೇ ಎಲ್ಲರ ಮನಕ್ಕೆ ಆನಂದ ನೀಡಿದ ನಮ್ಮ ಕೆ.ಜಿ. ಕೃಷ್ಣಾನಂದ.

ತೀರ್ಥಹಳ್ಳಿ ಮತ್ತು ಹೊಸನಗರ ನಡುವಿನ ಸ್ವಚ್ಛ ಮಲೆನಾಡಿನ ಅಂಬುತೀರ್ಥ ಸಮೀಪದ ಕೋಗಿಲೆ ಎಂಬ ಗ್ರಾಮದಲ್ಲಿ ಆಗಸ್ಟ್ 15ರಂದು ಕೆ.ಎಸ್. ಗುಂಡೂರಾವ್ ಮತ್ತು ಶ್ರೀಮತಿ ಶಾರದಮ್ಮ ಇವರ ಮೂವರು ಗಂಡು ಮಕ್ಕಳಲ್ಲಿ ಮೊದಲಿಗರಾಗಿ ಕೆ.ಜಿ ಕೃಷ್ಣಾನಂದ ಅವರು ಜನಿಸಿದರು.

ತಮ್ಮ ಉದ್ಯೋಗದ ಕಾರಣದಿಂದ ಬಂದು ನೆಲೆ ನಿಂತದ್ದು ಶಿವಮೊಗ್ಗದಲ್ಲಿ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿತ್ತೀಯ ಸಂಸ್ಥೆಯಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಅದು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ವಿಲೀನವಾದಾಗ ಸ್ವಯಂ ನಿವೃತ್ತಿ ಪಡೆದು ಈಗ ವಿಶ್ರಾಂತ ಜೀವನ ನಡೆಸುತ್ತಿರುವವರು.

ಶಾಲಾ ಜೀವನದಿಂದಲೂ ಭಾಷಣ, ಚರ್ಚಾಸ್ಪರ್ದೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಇವರು ನಂತರ ಕವಿತೆ ರಚನೆ ಹಾಗೂ ಕಥಾ ರಚನೆ ಅನುವಾದ ಮತ್ತು ಅಂಕಣ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಇವರ ಸಾಲುಮರದ ತಿಮ್ಮಕ್ಕ, ಗಾಂಧಿ ಮತ್ತು ನಾನು ಮುಂತಾದ ಕವನಗಳು ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ವಾರಪತ್ರಿಕೆಗಳಾದ ಸುಧಾ ಮತ್ತು ತರಂಗಗಳಲ್ಲಿ ಇವರ ಕಥೆಗಳು ಪ್ರಕಟಿತವಾಗಿ ಬಹುಮಾನಕ್ಕೂ ಭಾಜನವಾಗಿವೆ. ನಾವಿಕದಲ್ಲಿ ಪ್ರಕಟಿತ ಇವರ ಕಥೆಗಳಾದ “ಮಲೆನಾಡಿನ ಕಥೆಗಳು” ನಗರದ ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು.ಸಾಹಿತ್ಯ ಸಂಗೀತ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಮೂಲಕ ಸಮಾಜ ಸೇವೆಗಳಲ್ಲಿ ಸದಾ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ಇವರು ನಗರದ ಹೆಮ್ಮೆಯ ಸಾಂಸ್ಕೃತಿಕ ಸಂಸ್ಥೆ ಶ್ರೀಗಂಧ, ಕಲ್ಲಳ್ಳಿ ಕೆಎಚ್‌ಬಿ ಬಡಾವಣೆಯ ನಿವಾಸಿಗಳ ಸಂಘ, ಕಲ್ಲಳ್ಳಿಯ ಅಭೀಷ್ಟವರದ ಶ್ರೀ ಮಹಾಗಣಪತಿ ಸೇವಾ ಪ್ರತಿಷ್ಠಾನ, ನಿವೃತ್ತ ಬ್ಯಾಂಕ್ ನೌಕರರ ಸಾಂಸ್ಕೃತಿಕ ಸಂಘ “ಸಂಧ್ಯಾದೀಪ” ಮುಂತಾದ ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಮೊದಲಿನಿಂದಲೂ ಓದುವ ಹವ್ಯಾಸ ಹೆಚ್ಚಿದ್ದ ಇವರು ಈ ಹಿಂದೆ ತಾವು ಮಾಡಿದ ಸಾಹಿತ್ಯ ಆರಾಧನೆಯನ್ನು ಇಂದಿಗೂ ಮಾಡುತ್ತಾ ಬಂದಿದ್ದಾರೆ. ಶಿವಮೊಗ್ಗದಲ್ಲಿ ರಾಜಕೀಯವಾಗಿಯೂ ಸಾಂಸ್ಕೃತಿಕವಾಗಿಯು ಸದಾ ತನ್ನ ಕಾರ್ಯಗಳಿಂದಲೇ ಜನತೆಗೆ ಚಿರಪರಿಚಿತರಾದ ಸನ್ಮಾನ್ಯ ಕೆ.ಎಸ್. ಈಶ್ವರಪ್ಪನವರ ಅಧ್ಯಕ್ಷತೆಯ ಶ್ರೀಗಂಧ ಸಂಸ್ಥೆಯ ಸ್ಥಾಪಕ ಸದಸ್ಯರಾದ ಕೆ.ಜಿ. ಕೃಷ್ಣಾನಂದ ಅವರು ಸಂಸ್ಥೆಯ ಹಲವು ಕಾರ್ಯಕ್ರಮದ ಕುರಿತು ವಿಶೇಷ ಲೇಖನಗಳನ್ನು ಮತ್ತು ಗಣ್ಯರ ಸನ್ಮಾನ ಪತ್ರಗಳನ್ನು ರಚಿಸಿದ್ದಾರೆ.ಶ್ರೀಗಂಧದೊಡಗೂಡಿ ಕಾರ್ಯಕ್ರಮಗಳನ್ನು ಆಯೊಜಿಸುತ್ತಲೇ ನನಗೆ ಇವರು ಪರಿಚಿತರಾದವರು. ಅವರ ಸುಪುತ್ರನೊಬ್ಬ ನನ್ನ ವಿದ್ಯಾರ್ಥಿಯೆನ್ನುವ ಕಾರಣಕ್ಕೆ ಮತ್ತಷ್ಟು ಆತ್ಮೀಯತೆಯ ಜೊತೆಗೆ ನನ್ನ ತವರೂರಾದ ಹಾದಿಗಲ್ಲಿನ ಸಮೀಪದವರು ಎಂಬ ಕಾರಣಕ್ಕೆ ಇನ್ನಷ್ಟು ಹೆಮ್ಮೆ, ಪ್ರೀತಿ ಎಲ್ಲವೂ.

ನಿವೃತ್ತರಾದ ಮೇಲೆ ಕೆ.ಜಿ.ಕೃಷ್ಣಾನಂದ ಅವರು ಶಿವಮೊಗ್ಗದ ದಿನಪತ್ರಿಕೆಗಳಿಗೆ ಅಂಕಣ ಬರಹಗಳನ್ನು ಬರೆಯಲಾರಂಭಿಸಿದರು. ಕೋವಿಡ್ ಸಮಯದಲ್ಲಿ ತಮಗಾದ ಅನುಭವಗಳನ್ನು ಸೊಗಸಾದ ಲೇಖನವಾಗಿ ಈಶ್ವರಪ್ಪನವರು ಆರಂಭಿಸಿ ವೈದ್ಯ ಸಂಪಾದಕತ್ವದ ಮಲೆನಾಡು ಮಿತ್ರ ಪತ್ರಿಕೆಯಲ್ಲಿ ಬರಲಾರಂಭಿಸಿ ನಂತರ ಅದನ್ನೇ “ಒಳಸುಳಿಯೊಳಗಿಳಿದು” ಎಂಬ ಪುಸ್ತಕ ರೂಪದಲ್ಲಿ ತಂದು ಪ್ರಕಟಿಸಿದರು. ಅದೀಗ ಸಾರ್ವಜನಿಕ ಗ್ರಂಥಾಲಯ ಬೆಂಗಳೂರಿನ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಯಾಗಿದೆ ಎನ್ನುವುದು ಸಹ ಸಂತಸದ ವಿಷಯವೆ.

ಅವರು ನಿರಂತರವಾಗಿ ಶ್ರೀನಿವಾಸನ್ ಸಂಪಾದಕತ್ವದ ನಗರದ ಅಜೇಯ ಪತ್ರಿಕೆಗೆ ಬರೆಯುತ್ತಿರುವ “ವಾರದ ವಿದ್ಯಮಾನ” ಅಂಕಣವಂತೂ ಎಲ್ಲರೂ ಕಾತರದಿಂದ ಕಾಯುತ್ತಿರುವ ಅಂಕಣ ಎಂದರೆ ತಪ್ಪಾಗುವುದಿಲ್ಲ. ನಾನು ಕೂಡ ಅದಕ್ಕೆ ಹೊರತಲ್ಲ. ಆ ಲೇಖನದಲ್ಲಿ ಅವರ ಬರವಣಿಗೆಯ ಶೈಲಿ ಸೂಜಿಮೊನೆಯಷ್ಟೇ ಹರಿತ.ಅಂಕಣದ ಅಂತ್ಯದಲ್ಲಿ ಅವರು ಬರೆಯುವ ” ಕೊನೆಯಲ್ಲಿ ” ನಗರದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೊನೆ ಹನಿಯೊಂದು ನಾನು ಬಿಡದೆ ಓದುತ್ತಿದ್ದ ವಿಭಾಗ. ನಾನಷ್ಟೇ ಅಲ್ಲದೆ ಬಹಳಷ್ಟು ಓದುಗರಿಂದ ಕೂಡಾ ಅದು ಮೆಚ್ಚುಗೆ ಗಳಿಸಿದೆ. ಇವರ ಈ ವಾರದ ವಿದ್ಯಮಾನ ಅಂಕಣ ಬರಹವು 350ಕ್ಕೂ ಹೆಚ್ಚು ಸಂಚಿಕೆಗಳಾಗಿವೆ.

ಸ್ವಯಂ ನಿವೃತ್ತಿ ಪಡೆದಿರುವ ಇವರು ಓದುವುದು ತುಸು ಹೆಚ್ಚೇ ಅನಿಸುತ್ತದೆ. ಆ ಕಾರಣಕ್ಕಾಗಿ ಸ್ವಯಂ ನಿವೃತ್ತಿ ಪಡೆದಿದ್ದು ಸಾರ್ಥಕವಾಗಿದ್ದು ಸದಾ ಓದಲು ಬರೆಯಲು ಮತ್ತು ಆರಾಮವಾಗಿರಲು ಸಹಕಾರಿಯಾಗಿದೆಯೇನೊ. ಅವರಲ್ಲಿ ಮಾತನಾಡಿದಾಗಲೂ ಅವರ ಜೀವನಾನುಭವದ ಮಾತುಗಳನ್ನು ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ. ಯಾವುದಾದರೂ ವಿಶೇಷ ವಿಷಯದ ಕುರಿತಾಗಿ ಅವರು ಬರೆದ ಕವನಗಳು ಜನಪ್ರಿಯ ಆಗಿರುವುದನ್ನ ಕಂಡಿದ್ದೇನೆ.

ಅದರಲ್ಲಿ ನನಗೆ ಮೆಚ್ಚುಗೆಯಾದದ್ದು ಅನ್ನೋದಕ್ಕಿಂತ ಯಾವಾಗ ಓದಿದರೂ ಖುಷಿಯಾಗುವ ಕವನಗಳಲ್ಲಿ ಒಂದು ಅ. ನಾ. ವಿಜೇಂದ್ರ ಅವರ ಅರವತ್ತರ ಜನ್ಮದಿನಕ್ಕೆ ಬರೆದ ಕವನವಾದರೆ ಮತ್ತೊಂದು ಇತ್ತೀಚೆಗೆ ಸದ್ದು ಮಾಡಿದ ಧರ್ಮಸ್ಥಳದ ಬುರುಡೆ ಪ್ರಕರಣದ ಕುರಿತಾದ ಕವನ. ಅದೆಂತಹ ಕಲ್ಪನೆ ಸಾಹಿತ್ಯದ ಚಿಂತನೆಯ ಪ್ರೌಢತೆಗೆ ಮತ್ತು ವಿಡಂಬನಾತ್ಮಕವಾಗಿ ಬರೆದ ಕವನ ಯಾವಾಗಲೂ ಸಮಾಜದ ಅಂಕುಡೊಂಕುಗಳಿಗೆ ಹಿಡಿದ ಕೈಗನ್ನಡಿಯಂತಿದೆ.ಕವನಗಳಷ್ಟೇ ಅಲ್ಲ ಇತ್ತೀಚೆಗೆ ಶಿವಮೊಗ್ಗಟೈಮ್ಸ್ ಹಾಗೂ ಎಚ್ಚರಿಕೆ ದಿನಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಹಲವಾರು ಲೇಖನಗಳು ಅನೇಕರಿಗೆ ಅದು ತಮಗನ್ನಿಸಿದ್ದು ಹಾಗೂ ಬರೆಯಲಾಗದ್ದು ಎನ್ನುವ ಭಾವ ಮೂಡಿದ್ದಂತು ಸುಳ್ಳಲ್ಲ.

ಇವರ ಈ ಪ್ರತಿಭೆ ಗುರುತಿಸಿ ಇತ್ತೀಚೆಗಷ್ಟೇ ಸರ್. ಎಂ. ವಿಶ್ವೇಶ್ವರಯ್ಯ ಕೋ ಆಪರೇಟಿವ್ ಸೊಸೈಟಿಯವರು ಸಮಾಜದ ಗಣ್ಯರಿಗೆ ಕೊಡ ಮಾಡುವ ಪುರಸ್ಕಾರದಲ್ಲಿ ಕೆ.ಜಿ.ಕೃಷ್ಣಾನಂದ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದು ಅತ್ಯಂತ ಸಂತೋಷದ ಸಂಗತಿ.

ಇವರು ಕೇವಲ ಸಾಹಿತ್ಯ ಅಷ್ಟೇ ಅಲ್ಲ ಸಾಮಾಜಿಕ ಕಳಕಳಿಯನ್ನು ಸಹ ಒಳಗೊಂಡವರು. ಕಲ್ಲಹಳ್ಳಿಯ ಅಭೀಷ್ಟವರದ ಶ್ರೀ ಮಹಾಗಣಪತಿ ದೇವಾಲಯದ ಅಭಿವೃದ್ಧಿಗೆ, ಅದರ ಜನಪ್ರಿಯತೆಗೆ ಇವರ ಪಾಲು ಸಹ ಇದೆ. ತಮ್ಮ ತೀಕ್ಷ್ಣವಾದ ಬರಹಗಳಿಂದ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ್ದಾರೆ. ಒಟ್ಟಿನಲ್ಲಿ ಇವರ ಎಲ್ಲ ಕಾರ್ಯಗಳು ಕೂಡ ಶ್ಲಾಘನೀಯವಾದವುಗಳೇ.

ವಾಗ್ದೇವಿಗೆ ಅಕ್ಷರದ ಪುಷ್ಪಗಳನ್ನ ಸಾಹಿತ್ಯಕವಾಗಿ ಜೋಡಿಸಿ ಸುಂದರಮಾಲೆ ಹೆಣೆದು ಸಮರ್ಪಿಸಿ ತಮ್ಮ ಸೇವೆ ನೀಡುತ್ತಿರುವ ಸರಳ ಸಜ್ಜನ ಸಹೃದಾಯಿಯಾದ ಕೆ.ಜಿ. ಕೃಷ್ಣಾನಂದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಕೃಷಿ ಮಾಡಲಿ ಮತ್ತಷ್ಟು ಪ್ರಶಸ್ತಿಗೆ ಭಾಜನರಾಗಲಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news  
Kalahamsa Infotech private limited

http://kalpa.news/wp-content/uploads/2024/04/VID-20240426-WA0008.mp4

Tags: AmbuthirthaK G KrishnanandaKannada News WebsiteLatest News KannadaLocal NewsMalnad NewsShimogaShivamoggaShivamogga Newsಅಂಬುತೀರ್ಥಕನ್ನಡಕೆ.ಜಿ. ಕೃಷ್ಣಾನಂದತೀರ್ಥಹಳ್ಳಿಬರವಣಿಗೆಮಲೆನಾಡುಮಾತೃಭಾಷೆಶಿವಮೊಗ್ಗೆಸಾಹಿತ್ಯ ಜ್ಞಾನಹೊಸನಗರ
Share196Tweet123Send
Previous Post

ಇಂಡಿಗೋ ವಿಮಾನ ರದ್ದು | ಮತ್ತಷ್ಟು ವಿಶೇಷ ರೈಲುಗಳ ಸಂಚಾರ ಘೋಷಣೆ | ಎಲ್ಲೆಲ್ಲಿಗೆ?

Next Post

ರಾಜ್ಯ ಕ್ರಿಕೆಟ್ ಸಂಸ್ಥೆ ಆಡಳಿತ ಮಂಡಳಿ ಚುನಾವಣೆ | ಡಿ.ಎಸ್. ಅರುಣ್’ಗೆ ಗೆಲುವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ರಾಜ್ಯ ಕ್ರಿಕೆಟ್ ಸಂಸ್ಥೆ ಆಡಳಿತ ಮಂಡಳಿ ಚುನಾವಣೆ | ಡಿ.ಎಸ್. ಅರುಣ್’ಗೆ ಗೆಲುವು

ರಾಜ್ಯ ಕ್ರಿಕೆಟ್ ಸಂಸ್ಥೆ ಆಡಳಿತ ಮಂಡಳಿ ಚುನಾವಣೆ | ಡಿ.ಎಸ್. ಅರುಣ್'ಗೆ ಗೆಲುವು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸ್ವಾಗತಾರ್ಹ: ಲಕ್ಷ್ಮೀದೇವಿ ಗೋಪಿನಾಥ್

ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸ್ವಾಗತಾರ್ಹ: ಲಕ್ಷ್ಮೀದೇವಿ ಗೋಪಿನಾಥ್

April 17, 2026
ಮೈಸೂರು ರೈಲ್ವೆ ನಿಲ್ದಾಣಕ್ಕೆ ವಿಕಲಾಂಗ ಕುರ್ಚಿ, ನೀರಿನ ಮಡಕೆಗಳ ಕೊಡುಗೆ

ಮೈಸೂರು ರೈಲ್ವೆ ನಿಲ್ದಾಣಕ್ಕೆ ವಿಕಲಾಂಗ ಕುರ್ಚಿ, ನೀರಿನ ಮಡಕೆಗಳ ಕೊಡುಗೆ

April 17, 2026
ಮಳೆಗಾಲ ಆರಂಭಕ್ಕೂ ಮುನ್ನ ಸಮಸ್ಯೆ ಸರಿಪಡಿಸಿ: ಅಧಿಕಾರಿಗಳಿಗೆ ಶಾಸಕ ಚನ್ನಬಸಪ್ಪ ತಾಕೀತು

ಮಳೆಗಾಲ ಆರಂಭಕ್ಕೂ ಮುನ್ನ ಸಮಸ್ಯೆ ಸರಿಪಡಿಸಿ: ಅಧಿಕಾರಿಗಳಿಗೆ ಶಾಸಕ ಚನ್ನಬಸಪ್ಪ ತಾಕೀತು

April 17, 2026
ಯೋಗೀಶ್ ಹತ್ಯೆ ಪ್ರಕರಣ | ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಯೋಗೀಶ್ ಹತ್ಯೆ ಪ್ರಕರಣ | ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

April 17, 2026
ಹೊಸ ವಿನ್ಯಾಸದ ನವೀಕರಣದೊಂದಿಗೆ ಶೈಲಿಯಲ್ಲಿ ಬದಲಾದ ಯಮಹಾ ಫ್ಯಾಸಿನೊ

ಹೊಸ ವಿನ್ಯಾಸದ ನವೀಕರಣದೊಂದಿಗೆ ಶೈಲಿಯಲ್ಲಿ ಬದಲಾದ ಯಮಹಾ ಫ್ಯಾಸಿನೊ

April 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL