ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
‘ಸಂಕಷ್ಡದಲ್ಲಿರುವ ಮಕ್ಕಳ ರಕ್ಷಣೆಗಾಗಿ ಕರೆಮಾಡಿ ಮಕ್ಕಳ ಸಹಾಯವಾಣಿ-1098 ಹಾಗೂ ಎಲ್ಲಾ ಇಲಾಖೆಗಳ ಹಾಗೂ ಸಂಘ-ಸಂಸ್ಥೆಗಳ ಸಹಕಾರದಿಂದ ಮಕ್ಕಳಿಗಾಗಿ ಇರುವ ಮಕ್ಕಳ ಸಹಾಯವಾಣಿ-1098ರ ವ್ಯಾಪಕ ಪ್ರಚಾರವು ಮಾಡಬೇಕಾಗಿದ್ದು ಎಲ್ಲಾ ಇಲಾಖೆಯ ಜವಾಬ್ದಾರಿಯಾಗಿದೆ ಹಾಗೂ ಪ್ರತಿಯೊಂದು ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ 1098ರ ಮಾಹಿತಿ ಒದಗಿಸುವದು ತುಂಬಾ ಅವಷ್ಯಕವಾಗಿದೆ’ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿಲೀಪ್ ಬದೋಲೆ ತಿಳಿಸಿದರು.
ನಗರದ ಜಗತ ವೃತ್ತದಿಂದ ಮಿನಿವಿಧಾನ ಸೌಧವರೆಗೆ ಮಕ್ಕಳ ಸಹಾಯವಾಣಿ-1098 ದಿನಾಚರಣೆ ಹಾಗೂ ಮೇ ತಿಂಗಳ ಮಕ್ಕಳ ಸಹಾಯವಾಣಿ-1098 ಮಾಸಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತಿ, ಪೊಲೀಸ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ-1098 ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅರಿವಿನ ಜಾಥಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಎಸ್.ಜೆ.ಪಿ.ಯು ಹಿರಿಯ ಪೊಲೀಸ ಮಕ್ಕಳ ಕಲ್ಯಾಣ ಅಧಿಕಾರಿ ದೀಪನ್ ಕುಮಾರ ಮಾತನಾಡಿ, ‘ಮಕ್ಕಳ ಸಹಾಯವಾಣಿ-1098ಕ್ಕೆ ಬರುವ ಪ್ರಕರಣಗಳು ನಮ್ಮ ಗಮನಕ್ಕೆ ಬರುತ್ತಿವೆ ನಮ್ಮ ಪೊಲೀಸ ಇಲಾಖೆಯ ಸಹಕಾರ ಯಾವತ್ತು ತಮಗೆ ಇರುತ್ತೆ’ ಎಂದು ತಿಳಿಸಿದರು.
Also read: ಸಾಗರ: ವಿದ್ಯೆ ಕಲಿಸಿದ ಶಿಕ್ಷಕರಿಗೆ ಆತ್ಮೀಯ ಗುರುವಂದನೆ
ಉಪ ಕಾರ್ಮಿಕ ಆಯುಕ್ತ ಡಿ. ಜೆ. ನಾಗೇಶ ಮಾತನಾಡಿ, ’11 ಇಲಾಖೆಗಳ ಸಹಯೋಗದಲ್ಲಿ ಮಕ್ಕಳ ಸಹಾಯವಾಣಿ-1098ರ ವ್ಯಾಪಕ ಪ್ರಚಾರ ಕೈಗೊಳ್ಳುವುದು ಅತಿ ಮುಖ್ಯವಾಗಿದೆ ಬಾಲಕಾರ್ಮಿಕ, ಬಾಲ್ಯವಿವಾಹ, ಬಿಕ್ಷಾಟನೆಗಳಂತಹ ಅನಿಷ್ಟ ಪದ್ಧತಿಯಿಂದ ಮಕ್ಕಳ ರಕ್ಷಣೆ ಮಾಡುವದು ತುಂಬಾ ಅವಷ್ಯಕವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಬಸಪ್ಪ ಬೇಳಗುಂಪಿ ಮಾತನಾಡಿ, ‘ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಪ್ರತಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿ ವಿವಿಧ ಇಲಾಖೆಗಳಲ್ಲಿ ಕೈಗೊಂಡ ಮಕ್ಕಳ ಸಹಾಯವಾಣಿ-1098ರ ವ್ಯಾಪಕ ಪ್ರಚಾರದ ಅನುಸರಣೆ ಮಾಡುವದು ಹಾಗೂ ಸಂಕಷ್ಟದಲ್ಲಿರುವ ಮಕ್ಕಳನ್ನು ಕಂಡರೆ ಮಕ್ಕಳ ಸಹಾಯವಾಣಿ 1098ಕ್ಕೆ ತಿಳಿಸುವದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಗಿರುತ್ತದೆ’ ಎಂದು ತಿಳಿಸಿರುತ್ತಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ನವೀನಕುಮಾರ ಮಾತನಾಡಿ,’ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಲ್ಯವಿವಾಹ ಪ್ರಕರಣಗಳನ್ನು ತಡೆಗಟ್ಟುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ರಾಷ್ಟ್ರಿಯ ಉಚಿತ ದೂರವಾಣಿ ಕರೆಯಾದ ಮಕ್ಕಳ ಸಹಾಯವಾಣಿ 1098ಕ್ಕೆ ಕರೆಮಾಡಿ ಮಗುವಿನ ರಕ್ಷಣೆಗೆ ಪ್ರತಿಯೊಬ್ಬ ನಾಗರಿಕರು ಮುಂದಾಗಬೇಕೆಂದು ತಿಳಿಸಿದರು. ನಮ್ಮ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ 1098 ಯೋಜನೆಯು ಅತ್ತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆಯಂದು ಶ್ಲಾಗಿಸಿದರು’.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಡಾ. ಯಲ್ಲಾಲಿಂಗ ಕಾಳನೂರ, ಮಕ್ಕಳ ಸಹಾಯವಾಣಿಯ ಡಾನ್ ಭೋಸ್ಕೊ ಸಂಸ್ಥೆಯ ನಿರ್ದೇಶಕರು ಫಾ. ಟಾಮಿ ಚಿರಾಕಲ್, ಕಾರ್ಮಿಕ ಅಧಿಕಾರಿ ರಮೇಶ ಸುಂಬ್ಬಡ, ಆರ್‍ಯೋಗ್ಯ ಇಲಾಖೆಯ ಅಧಿಕಾರಿ ರಾಜಕುಮಾರ, ವಿಶ್ವ ಸೇವಾ ಮಿಷನ ಸಂಸ್ಥೆಯ ಅಧ್ಯಕ್ಷರು ವಿಶ್ವನಾಥ ಸ್ವಾಮಿಜಿ, ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ಸಂತೋಷ ಕುಲಕರ್ಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಭರತೇಶ ಶಿಲವಂತ, ಮಂಜುಳಾ ರೆಡ್ಡಿ, ಬಸವರಾಜ ಹಾಗೂ ಇನ್ನಿತರರು. ಮಕ್ಕಳ ಸಹಾಯವಾಣಿಯ ಸಂಯೋಜಕರುಗಳಾದ ಬಸವರಜ ತೆಂಗಳಿ, ಮಲ್ಲಯ್ಯ ಎಸ್ ಗುತ್ತೆದಾರ, ಸುಂದರ ಬಿ, ಕೃಷ್ಣ ಹಾಗೂ ಎಲ್ಲಾ ಸಿಬ್ಬಂದಿಗಳು, ಮಕ್ಕಳ ಪಾಲನಾ ಸಂಸ್ಥೆಯ ಸಿಬ್ಬಂದಿಗಳು, ತೆರೆದ ತಂಗುದಾಣದ ಸಿಬ್ಬಂದಿಗಳು, ನಗರ & ಗ್ರಾಮೀಣವಲಯದ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು ಹಾಗೂ ಡಾನ್ ಭೋಸ್ಕೊ ಸಂಸ್ಥೆಯ ಕ್ರಿಂ ಯೋಜನೆಯ ಸಂಯೋಜಕಿ ಗೀತಾ & ಸಿಬ್ಬಂದಿಗಳು, ಪೊಲೀಸ ಸಿಬ್ಬಂದಿಗಳು, ಸಂಚಾರಿ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post