ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ತಂಬಾಕು ಸೇವನೆಯು ವಿವಿಧ ರೀತಿಯ ಕ್ಯಾನ್ಸರ್, ಮೆದುಳು ನಿಷ್ಕ್ರೀಯಗೊಳ್ಳುವುದು, ಸ್ನಾಯು ಸೆಳೆತ, ರಕ್ತ ಸಂಚಾರಕ್ಕೆ ತೊಂದರೆ, ಉಚ್ಛಾರಣಾ ದೋಷ, ಮಾನಸಿಕ ಖಿನ್ನತೆ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಶೈಲಾ ಶಮ್ನೂರು ಹೇಳಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಮಾಹಿತಿ ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅವರು
ಮಾತನಾಡಿದರು.
ವರ್ಷಕ್ಕೆ ಸುಮಾರು 6% ಜನರು ತಂಬಾಕು ಸೇವನೆಯ ದುಶ್ಚಟಗಳಿಂದ ಸಾವನ್ನಪ್ಪುತ್ತಿರುವುದು ತಂಬಾಕಿನ ದುಷ್ಪರಿಣಾಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಯುವಜನತೆ ತಂಬಾಕು ಸೇವನೆಯಿಂದ ತಾವೂ ದೂರವಿದ್ದುಕೊಂಡು ಸೇವನೆಯ ದುಶ್ಚಟಕ್ಕೆ ಒಳಗಾದವರನ್ನು ಅದರಿಂದ ಹೊರತರುವ ಸಾಮಾಜಿಕ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು.
Also read: ದೇಶದ ಹೆಮ್ಮೆಯ ಉದ್ಯಮಿ ರತನ್ ಟಾಟಾ ವಿಧಿವಶ
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್ ಮಾತನಾಡಿ, ಉತ್ತಮ ಜೀವನಕ್ಕಾಗಿ ಉತ್ತಮ ಆಹಾರ, ಶುದ್ಧ ನೀರು, ಶುದ್ಧ ಗಾಳಿಯ ಜೊತೆಗೆ ದುಶ್ವಟಗಳಿಂದ ಮುಕ್ತವಾಗಿರುವುದು ಬಹಳ ಮುಖ್ಯ. ಮಕ್ಕಳು ದುಶ್ಚಟಗಳಿಂದ ದೂರವಿರುವುದರ ಜೊತೆಗೆ ದುಶ್ಚಟಗಳನ್ನು ಹೊಂದಿರುವವರ ಸ್ನೇಹದಿಂದ ಕೂಡಾ ದೂರವಿರಬೇಕು. ದುಶ್ಚಟಗಳಿಗೆ ದಾಸರಾಗಿರುವವರು ಉಳಿದವರನ್ನು ಅದರೊಳಗೆ ಎಳೆದುಕೊಳ್ಳುತ್ತಾರೆ. ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಂಬಾಕು ವಿರೋಧಿ ಆಂದೋಲನದ ಹಿನ್ನೆಯಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಅಳವಡಿಸಬೇಕಾದ ವಿವಿಧ ಜಾಗೃತಿ ಫಲಕಗಳನ್ನು ಅಧಿಕಾರಿಗಳು ಸಂಸ್ಥೆಯ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಸಂಸ್ಥೆಯ ಉಪಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಪಾವನ ಧನ್ಯರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಶಿಜಿ ಸ್ವಾಗತಿಸಿ ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post