ಕಲ್ಪ ಮೀಡಿಯಾ ಹೌಸ್ | ಕಾರವಾರ |
ಕಾರವಾರ-ಅಂಕೋಲಾ ಕ್ಷೇತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿದೆ. ಇಲ್ಲಿಯ ಯುವಕರು ಉದ್ಯೋಗವನ್ನು ಕಲ್ಪಿಸುವ ಯೋಜನೆ ಇದೆ. ಇತಿಹಾಸದ ಪುಟದಲ್ಲಿ ಅಂಕೋಲಾ ಮತ್ತು ಕಾರವಾರ ತಾಲ್ಲೂಕುಗಳು ಅಚ್ಚಳಿಯದೆ ಉಳಿಯಲಿದೆ ಶಾಸಕಿ ರೂಪಾಲಿ ನಾಯ್ಕ್ MLA Rupali Naik ಹೇಳಿದರು.
ಅಂಕೋಲಾ ತಾಲ್ಲೂಕಿನ ಸುಂಕಸಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಡ್ಲಗದ್ದೆ ಗ್ರಾಮದ ಬಾಳೆಹಾಡ ನಿಂದ ಮುಂಡೇಗಾಳಿ ರಸ್ತೆ ನಿರ್ಮಾಣ ಹಾಗೂ ರಾಮನಗುಳಿ ಖಂಡ್ರಮನೆ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೋನಾ ಎಂಬ ಮಾಹಾಮಾರಿಯ ರೋಗದಲ್ಲಿ ಪರಸ್ಪರ ಸಹಾಯ ಮಾಡುವುದು ಕಷ್ಟವಾಗಿತ್ತು. ಜಿಲ್ಲಾ ಕೇಂದ್ರವಾಗಿರುವ ಕಾರವಾರದಲ್ಲಿ ಹೊರ ದೇಶದಿಂದ ಆಕ್ಸಿಜನ್ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದರು. ನಾವೆಲ್ಲರೂ ಮಾನವೀಯತೆಯನ್ನು ಮರೆಯಬಾರದು. ಸಂಕಷ್ಟದ ನಡುವೆಯೂ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿದೆ. ಇದುವರೆಗೂ ಸುಮಾರು 20 ಕೋಟಿಗೂ ಹೆಚ್ಚಿನ ಅನುದಾನವನ್ನು ಒದಗಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಬಿಜೆಪಿ ಮಂಡಲದ ಅಧ್ಯಕ್ಷರು ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post