ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸೆಪ್ಟೆಂಬರ್ 10ರಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀಪಾದರ ಆಶಯದಂತೆ ಲೋಕಕಲ್ಯಾಣಕ್ಕಾಗಿ ಶ್ರೀ ಕೃಷ್ಣ ಮಂತ್ರ ಜಪಯಜ್ಞ ಹಮ್ಮಿಕೊಳ್ಳಲಾಗಿದೆ.
ಶ್ರೀಕೃಷ್ಣ ಷಡಕ್ಷರ ಅಥವಾ ಶ್ರೀಕೃಷ್ಣಾಯ ನಮ: ಶ್ರೀಮಂತ್ರವನ್ನು ಕನಿಷ್ಠ 10,000 ಬಾರಿ ಜಪಿಸುವ ಇಚ್ಛೆ ಇದ್ದವರು ಈ ಜಪಯಜ್ಞಕ್ಕೆ ನೊಂದಾಯಿಸಲು ಕೆಳಗೆ ಕಾಣಿಸಿದ ಲಿಂಕ್’ನಲ್ಲಿ ತಮ್ಮ ವಿವರಗಳನ್ನು ನೀಡಬಹುದಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಪರ್ಯಾಯ ಶ್ರೀಪಾದರ ನೇತೃತ್ವದಲ್ಲಿ ಶ್ರೀಕೃಷ್ಣನಿಗೆ ಅರ್ಪಿಸಲು ಸಂಕಲ್ಪಿಸಿದ್ದು ಈ ಪ್ರಯುಕ್ತ ಭಗವದ್ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಶ್ರೀಕೃಷ್ಣ ಮಂತ್ರ ಜಪ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಅಭಿಯಾನದಲ್ಲಿ ಪಾಲ್ಗೊಂಡು ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀಮಠ ಕೋರಿದೆ.
ಸಂಕಲ್ಪ
ಶ್ರೀರಾಜರಾಜೇಶ್ವರ-ಕಾಳಿಯಮರ್ದನ-ಗೋಪಾಲಕೃಷ್ಣಸ್ಯ ಪ್ರೇರಣಯಾ ಪ್ರಾಣನಾಥಸ್ಯ ಗೋಪಾಲಕೃಷ್ಣಸ್ಯ ಪ್ರೀತ್ಯರ್ಥಂ, ಲೋಕಕ್ಷೇಮಾರ್ಥಂ ಆತ್ಮರಕ್ಷಾರ್ಥಂ ಶ್ರೀಕೃಷ್ಣಮಂತ್ರ ಜಪತರ್ಪಣಮಹಂ ಕರಿಷ್ಯೇ-
ಕೃಷ್ಣನ ನಗುಮುಖವನ್ನು ನೆನೆಯುತ್ತಾ ಕಣ್ಣುಮುಚ್ಚಿ
ಶ್ರೀ ಕೃಷ್ಣ ಷಡಕ್ಷರ ಅಥವಾ,
ಶ್ರೀ ಕೃಷ್ಣಾಯ ನಮ: ಶ್ರೀ
ಕನಿಷ್ಠ-10,000 ಬಾರಿ
ಕೃಷ್ಣಾಯ ಯಾದವೇಂದ್ರಾಯ ಜ್ಞಾನಮುದ್ರಾಯ ಯೋಗಿನೇ
ನಾಥಾಯ ರುಗ್ಮಿಣೀಶಾಯ
ನಮೋ ವೇದಾಂತವೇದಿನೇ ॥
ಕನಿಷ್ಠ 1000 ಬಾರಿ
ಅಚ್ಯುತಾನಂತ-ಗೋವಿಂದ ಸ್ಮೃತಿಮಾತ್ರಾರ್ತಿನಾಶನ
ರೋಗಾನ್ಮೇ ನಾಶಯಾ=ಶೇಷಾನ್
ಆಶು ಧನ್ವಂತರೇ ಹರೇ
ಕನಿಷ್ಠ 1000 ಬಾರಿ.
ಕೃಷ್ಣಾರ್ಪಣ
ಅನೇನ ಶ್ರೀಕೃಷ್ಣಜಪಕರ್ಮಣಾ ಶ್ರೀರಾಜರಾಜೇಶ್ವರಃ ಕಾಳಿಯಮರ್ದನಃ ಗೋಪಾಲಕೃಷ್ಣಃ ಪ್ರೀಯತಾಂ. ಶ್ರೀಕೃಷ್ಣಾರ್ಪಣಮಸ್ತು.
ಮನೆಯಲ್ಲೆ ಇದ್ದು ಈ ಕಾರ್ಯ ನಡೆಸಬೇಕು. ಮನೆಯ ಎಲ್ಲರೂ ಅಂತರ ಕಾಪಾಡಿಕೊಂಡು ಒಟ್ಟಿಗೆ ನಡೆಸಿದರೆ ತುಂಬ ಒಳ್ಳೆಯದು.
ಜಪ ಮಾಡಬೇಕು, ಎಲ್ಲರಿಗು ಒಳಿತಾಗಬೇಕು, ಕೃಷ್ಣನ ಪ್ರೀತಿ ಪಡೆಯಬೇಕು ಎನ್ನುವ ಶುದ್ಧಮನಸ್ಸೊಂದೇ ಇದಕ್ಕೆ ಅರ್ಹತೆಯಾಗಿದ್ದು, ಶುಚಿತ್ವ ಕಾಪಾಡಿಕೊಂಡು ಯಾವ ಸಮಯದಲ್ಲೂ ಮಾಡಬಹುದು.
ಹೆಚ್ಚು ಜಪ ಮಾಡಿದ್ದರೂ ತಿಳಿಸಿ. ಸಂಕಲ್ಪಿಸಿದ್ದನ್ನು ನಿಗದಿತ ದಿನಕ್ಕಿಂತ (ಸೆಪ್ಟೆಂಬರ್ 10) ಮೊದಲೆ ಮುಗಿಸಿ. ಮತ್ತೊಮ್ಮೆ ಕಳುಹಿಸಿದ ಗೂಗಲ್ ಫಾರ್ಮ್ ನಲ್ಲಿ ಜಪದ ಸಂಖ್ಯೆಯನ್ನು ತುಂಬಿಸಿ ಕಳುಹಿಸಬಹುದು.
ವಾಟ್ಸಪ್ ಇಲ್ಲದವರು ಕೂಡ ತಮ್ಮ ದೂರವಾಣಿ ಸಂಖ್ಯೆ ನಮೂದಿಸಿ ವಾಟ್ಸಪ್ ಇದ್ದವರ ಫೋನ್ ನಿಂದ ಜಪಕ್ಕೆ ನೋಂದಾಯಿಸಿಕೊಳ್ಳಬಹುದು.
ದಿನಕ್ಕೆ ಕನಿಷ್ಠ 108 ಎರಡು ಹೊತ್ತು ಜಪಿಸಿದರೆ ಉತ್ತಮ.(ಒಟ್ಟು ದಿನಕ್ಕೆ 216 ಸಂಖ್ಯೆ) ಆಗಿರಬೇಕು.
ಸುಂದರ, ಸಮೃದ್ಧ, ರೋಗಮುಕ್ತ, ಸುಶೀಲ ಸಮಾಜಕ್ಕಾಗಿ ಎಲ್ಲರೂ ಕೈಜೋಡಿಸೋಣ ಎಂದು ಶ್ರೀಮಠ ಕರೆ ನೀಡಿದೆ.
ನೀವು ನೋಂದಾಯಿಸಬೇಕಾದ ಲಿಂಕ್
https://docs.google.com/forms/u/1/d/e/1FAIpQLSck41n30HMt2TLxtGBnGzyhmmVBSTdbgX7ytrsXKkpz1gsgFg/viewform
ಪರ್ಯಾಯ ಶ್ರೀಪಾದರ ಸಂದೇಶ
https://youtu.be/LKwgWZEcHnw
ಮಂತ್ರೋಪದೇಶ
https://youtu.be/Mh783EV78-4
= ಶ್ರೀಕೃಷ್ಣಾಯನಮಃಶ್ರೀ =
Get In Touch With Us info@kalpa.news Whatsapp: 9481252093
Discussion about this post