ಕಲ್ಪ ಮೀಡಿಯಾ ಹೌಸ್ | ಕಡಬ |
ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಶಮಿ–ಏಕಾದಶಿ ಹಿನ್ನೆಲೆಯಲ್ಲಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ(Kukke Subrahmanya) ದೇವಸ್ಥಾನದಲ್ಲಿ ಸೆಪ್ಟೆಂಬರ್ 3, 4, 6 ಮತ್ತು 7ರಂದು ಸರ್ಪಸಂಸ್ಕಾರ (Sarpasamskara) ಸೇವೆ ನಡೆಯುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸೆಪ್ಟೆಂಬರ್ 7ರಂದು ಏಕಾದಶಿ ಇರುವ ಹಿನ್ನೆಲೆಯಲ್ಲಿ ಈ ಎರಡು ದಿನಗಳಲ್ಲಿ ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕ ಸೇವೆಗಳನ್ನೂ ನಡೆಸಲಾಗುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
Also Read>> US ಓಪನ್ | ರಾಕೆಟ್ ಒಡೆದು ಆಕ್ರೋಶ ವ್ಯಕ್ತಪಡಿಸಿದ ಲೊಯಿಸ್ ಬೊಯ್ಸನ್; ಯಾರು ಈ ಫ್ರೆಂಚ್ ಟೆನಿಸ್ ತಾರೆ?
Kukke Subrahmanya : ಎಂದಿನಂತೆ ನಡೆಯಲಿರುವ ಸೇವೆಗಳು
ಆದರೆ, ಈ ದಿನಗಳಲ್ಲಿ ಮಹಾಪೂಜೆ, ಶೇಷಸೇವೆ, ಅಭಿಷೇಕ, ಅರ್ಚನೆ ಸೇವೆಗಳು ಹಾಗೂ ಶ್ರೀ ದೇವರ ದರ್ಶನ ಎಂದಿನಂತೆ ನಡೆಯಲಿದೆ. ಭಕ್ತರು ಯಾವುದೇ ಗೊಂದಲಕ್ಕೆ ಒಳಗಾಗದೆ ದೇವಳದ ಪ್ರಕಟಣೆಯನ್ನು ಗಮನಿಸಿ, ಅದಕ್ಕೆ ಅನುಗುಣವಾಗಿ ಸೇವೆಗಳಿಗೆ ಆಗಮಿಸುವಂತೆ ಮನವಿ ಮಾಡಲಾಗಿದೆ.
ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಸೇವೆಗಳ ದಿನಾಂಕ ಹಾಗೂ ಸಮಯವನ್ನು ಗಮನದಲ್ಲಿಟ್ಟುಕೊಂಡು ಸಹಕರಿಸುವಂತೆ ದೇವಳದ ಆಡಳಿತ ಮಂಡಳಿ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











