ಬೆಂಗಳೂರು: ಲೋಕಸಭಾ ಚುನಾವಣೆಯ ಮೂರನೆಯ ಹಂತದ ಮತದಾನ ಇಂದು ದೇಶದ ಹಲವೆಡೆ ನಡೆಯುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಎಲ್ಲೆಡೆ ಅಬ್ಬರಿಸುತ್ತಿದೆ.
ರಾಜ್ಯದಲ್ಲಿ ಇಂದು ಎರಡನೆಯ ಹಂತದ ಮತದಾನ ನಡೆಯುತ್ತಿದ್ದು, ತಮ್ಮ ಮೂಲ ಊರುಗಳಲ್ಲಿ ಮತ ಹೊಂದಿರುವ ಸಾವಿರಾರು ಯುವಕರು ನಿನ್ನೆ ರಾತ್ರಿ ಬೆಂಗಳೂರಿನಿಂದ ರೈಲು ಹಾಗೂ ಬಸ್’ಗಳ ಮೂಲಕ ತೆರಳಿದರು.
ಹಕ್ಕು ಚಲಾಯಿಸಲು ತಮ್ಮ ಊರುಗಳಿಗೆ ತೆರಳಲು ನಿನ್ನೆ ಯಶವಂತಪುರ ರೈಲು ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಯುವಕರು ಇಡಿಯ ಪ್ರದೇಶಕ್ಕೆ ಕೇಳುವಂತೆ ಮೋದಿ ಮೋದಿ ಮೋದಿ ಎಂಬ ಘೋಷಣೆ ಕೂಗುತ್ತಿದ್ದರು. ಇಡಿಯ ರೈಲು ನಿಲ್ದಾಣ ಮೋದಿ ಘೋಷಣೆ ಮಯವಾಗಿ ಮಾರ್ಪಟ್ಟಿತ್ತು.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಮೋದಿ ಮೋಡಿ ಏನೆನ್ನುವುದು ತಿಳಿಯುತ್ತದೆ. ಮತ್ತೊಮ್ಮೆ ಮೋದಿ ಎಂಬ ಸಾಲುಗಳು ವೈರಲ್ ಆಗಿದೆ.
ವೀಡಿಯೋ ನೋಡಿ:
ನಿನ್ನೆ ರಾತ್ರಿ ಬೆಂಗಳೂರಿನ ಯಶವಂತಪುರ ರೈಲ್ವೆ ಸ್ಟೇಷನ್ ನಲ್ಲಿನ ಜನಜಂಗುಳಿ, ಜನರ ಮುಖದಲ್ಲಿ ಮತದಾನ ಮಾಡಲು ಹೊರಟ ಉತ್ಸಾಹ, ಹೆಮ್ಮೆ ನೋಡಿದರೆ ತಿಳಿಯುತ್ತದೆ ನಿಜವಾದ ಮೋದಿ ಮೋಡಿ ಏನು ಎನ್ನುವುದು.ನಮ್ಮ ಮೋದಿ ನಮ್ಮ ಹೆಮ್ಮೆ.@BJP4Karnataka @DattaHosabale @rajeev_mp @RAshokaBJP @nsitharaman @PMuralidharRao @bjparvind pic.twitter.com/70URWm1eKH
— Chowkidhar Shilpa Ganesh (@ShilpaaGanesh) April 23, 2019
Discussion about this post