ಕಣ್ಣೂರು: ದೇಶದ ಹಲವು ಭಾಗಗಳಲ್ಲಿ ಮೂರನೆಯ ಹಂತದ ಮತದಾನ ನಡೆಯುತ್ತಿರುವಂತೆಯೇ ಕೇರಳದ ಕಣ್ಣೂರಿನ ಮತಕೇಂದ್ರವೊಂದರ ವಿವಿ ಪ್ಯಾಟ್ ಯಂತ್ರದೊಳಗೆ ಹಾವು ಪತ್ತೆಯಾಗಿದೆ.
ಇಲ್ಲಿನ ಕಣ್ಣೂರು ಕ್ಷೇತ್ರ ವ್ಯಾಪ್ತಿಯ ಮಯ್ಯಿಲ್ ಕಂಡಕ್ಕೈ ಮತಗಟ್ಟೆಯೊಂದರಲ್ಲಿ ಈ ಘಟನೆ ನಡೆದಿದೆ. ಸಣ್ಣ ಗಾತ್ರ ಹಾವೊಂದು ಇಲ್ಲಿನ ವಿವಿ ಪ್ಯಾಟ್ ಮಷೀನ್ ಒಳಗೆ ಸೇರಿಕೊಂಡಿರುವುದು ಪತ್ತೆಯಾಗಿದ್ದು, ಇದರಿಂದ ಮತಗಟ್ಟೆ ಅಧಿಕಾರಿಗಳು ಹಾಗೂ ಮತದಾರರು ಭಯಭೀತರಾಗಿದ್ದರು.
ಆದರೆ, ತತಕ್ಷಣ ಎಚ್ಚೆತ್ತ ಹಿರಿಯ ಅಧಿಕಾರಿಗಳು ತಜ್ಞರ ಸಹಾಯದೊಂದಿಗೆ ಹಾವನ್ನು ಯಂತ್ರದಿಂದ ತೆಗೆದು ಮತದಾನ ಮುಂದುವರೆಯಲು ಅವಕಾಶ ಕಲ್ಪಿಸಿದ್ದಾರೆ.
Discussion about this post