ಬೆಂಗಳೂರು: ನಿನ್ನೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾವನಾತ್ಮಕ, ದುಃಖತಪ್ತ ಅಂತಿಮ ನಮನ ಸಲ್ಲಿಸಲಾಯಿತು.
ಇಂದು ಮುಂಜಾನೆ 8.15ರ ವೇಳೆ ಬಿಜೆಪಿ ಕಚೇರಿಗೆ ಪಾರ್ಥಿವ ಶರೀರವನ್ನು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ತರಲಾಗಿತ್ತು.
ಇಲ್ಲಿ, ಅನಂತಕುಮಾರ್ ಅವರಿಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಧರ್ಮೇಂದ್ರ ಪ್ರದಾನ್ ಅನುರಾಗ್ ಠಾಕೂರ್, ಡಿ.ವಿ. ಸದಾನಂದ ಗೌಡ , ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಅರವಿಂದ ಲಿಂಬಾವಳಿ ಸೇರಿದಂತೆ ಹಲವರು ಅಂತಿಮ ಗೌರವ ಸಲ್ಲಿಸಿದರು.
Discussion about this post