ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಭಾರೀ ಮಳೆಯ ಪರಿಣಾಮ ಕಾವೇರಿ ನದಿ Kaveri river ಉಕ್ಕಿ ಹರಿಯುತ್ತಿದ್ದು, ಹಲವು ಕಡೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಪರಿಣಾಮವಾಗಿ ಮೂರ್ನಾಡು ಹಾಗೂ ನಾಪೋಕ್ಲು ನಡುವಿನ ರಸ್ತೆಯ ಮೇಲೆ ನಾಲ್ಕು ಅಡಿಗೂ ಎತ್ತರ ನೀರು ಹರಿಯುತ್ತಿದ್ದು, ವಾಹನ ಸಂಚಾರರು ಪರದಾಡುವಂತಾಗಿದೆ.
ಒಂದು ತಿಂಗಳ ಅವಧಿಯಲ್ಲಿ ಮೂರನೆಯ ಬಾರಿ ಇಲ್ಲಿ ಸಂಪರ್ಕ ಕಡಿತಗೊಂಡಿದ್ದು, ಭಾರೀ ಸಮಸ್ಯೆ ಉಂಟಾಗಿದೆ.
Also read: ಸಾಗರ ಬಿಎಚ್ ರಸ್ತೆ ಅಗಲೀಕರಣ: ವ್ಯಾಪಾರಕ್ಕೆ ಬದಲಿ ಸ್ಥಳಾವಕಾಶ ಕಲ್ಪಿಸಲು ಶಾಸಕರಿಗೆ ಮನವಿ
ಇನ್ನು, ಚೆಂಬು ದಬ್ಬಡ್ಕದಲ್ಲಿನ ಚೆಟ್ಟಿ ಮಾನಿ ಸೇತುವೆ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ಕಾಲುಸಂತದ ರೀತಿಯಲ್ಲಿರುವ ಈ ಸಣ್ಣ ಸೇತುವೆ ಕೊಚ್ಚಿ ಹೋಗಿದ್ದು, ಪರಿಣಾಮವಾಗಿ ವಾಹನ ಸಂಚಾರ ಕಡಿತಗೊಂಡಿದ್ದು, ಜನರು ಕಷ್ಟಪಟ್ಟು ದಾಟಿಕೊಂಡು ತೆರಳುವಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post