ಕಲ್ಪ ಮೀಡಿಯಾ ಹೌಸ್ | ಮಹಾರಾಷ್ಟ್ರ |
ಮುಂಬರುವ ಲೋಕಸಭಾ ಚುನಾವಣೆಯು ದೇಶದ ಯುವಜನರ ಉಜ್ವಲ ಭವಿಷ್ಯ ಹಾಗೂ ಭವ್ಯ ಭಾರತದ ನಿರ್ಮಾಣಕ್ಕಾಗಿ ನಡೆಯುತ್ತದೆ ಎಂದು ಕೇಂದ್ರ ಸಹಕಾರ ಹಾಗೂ ಗೃಹ ಸಚಿವ ಅಮಿತ್ ಶಾ Amith Shah ಹೇಳಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್’ನಲ್ಲಿ ನಡೆದ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಮತ ಹಾಕುವುದೆಂದರೆ ಯುವಕರ ಉಜ್ವಲ ಭವಿಷ್ಯಕ್ಕಾಗಿ, ಭವ್ಯ ಭಾರತದ ನಿರ್ಮಾಣಕ್ಕಾಗಿ ಮತ್ತು ನರೇಂದ್ರ ಮೋದಿ Narendra Modi ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವುದಕ್ಕಾಗಿ ಮತ ಹಾಕಿದಂತೆ ಎಂದು ಭಾರತೀಯ ಜನತಾ ಪಕ್ಷದ ವರಿಷ್ಠ ನಾಯಕ ಶಾ ಹೇಳಿದರು.

Also read: ಅಂತರ್ ಶಾಲಾ ಮಟ್ಟದ ನಳಂದ ಚೆಸ್ ಸ್ಪರ್ಧೆ | ಜೈನ್ ಪಬ್ಲಿಕ್ ಶಾಲೆಗೆ ಶೀಲ್ಡ್
2024ರ ಲೋಕಸಭೆ ಚುನಾವಣೆ 2024 Parliament Election ಸಮೀಪಿಸುತ್ತಿದ್ದಂತೆ, ಚುನಾವಣಾ ಚಟುವಟಿಕೆಗಳೂ ಹೆಚ್ಚುತ್ತಿವೆ. ಮೋದಿಯವರ ನಾಯಕತ್ವ ಮತ್ತು ಬಿಜೆಪಿ ಗೆಲುವಿನ ಸಂದೇಶವನ್ನು ಮತ್ತೊಮ್ಮೆ ಸಾರಲು ಶಾ ಸಜ್ಜಾಗಿದ್ದಾರೆ. ಭಾರತದ ರಾಜಕೀಯ ಚಾಣಕ್ಯ ಶಾ ಚುನಾವಣೆಗೆ ತಯಾರಿ ನಡೆಸಿದರೆ, ವಿರೋಧ ಪಕ್ಷದವರೂ ಅವರ ಅಭಿಮಾನಿಗಳಾಗುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ನಂತರ, ಚುನಾವಣಾ ರ್ಯಾಲಿಗಳಿಗೆ ಲಕ್ಷಾಂತರ ಜನರನ್ನು ಆಕರ್ಷಿಸುವ ಏಕೈಕ ನಾಯಕನೆಂದರೆ ಅದು ಅಮಿತ್ ಶಾ. ಕಳೆದ 10 ವರ್ಷಗಳಲ್ಲಿ, ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ದೇಶವು ಅಭೂತಪೂರ್ವ ಪ್ರಗತಿ ಮತ್ತು ಸಮೃದ್ಧಿಯಡೆಗೆ ಪ್ರಯಾಣವನ್ನು ಮಾಡಿದೆ.

ಸೋನಿಯಾ-ಮನಮೋಹನ್ ಸರ್ಕಾರದ ಅವಧಿಯಲ್ಲಿ ಯಾರೂ ಬೇಕಾದರೂ ಪಾಕಿಸ್ತಾನದಿಂದ ಒಳನುಸುಳಿ ಭಯೋತ್ಪಾದನೆ ಕೃತ್ಯಗಳನ್ನು ಎಸಗಿದ್ದನ್ನು ಜನರು ನೋಡಿದ್ದಾರೆ. ಆದರೆ, ಮೋದಿ ಪ್ರಧಾನಿಯಾದಾಗ ಪಾಕಿಸ್ತಾನಕ್ಕೆ ಕೇವಲ10 ದಿನಗಳಲ್ಲಿ ತಕ್ಕ ಉತ್ತರ ನೀಡಿದರು.

ಅಯೋಧ್ಯೆಯ ರಾಮಮಂದಿರದಿಂದ ಕಾಶಿಯ ವಿಶ್ವನಾಥ ಕಾರಿಡಾರ್ವರೆಗೆ, ‘ನಲ್ ಸೇ ಜಲ್’ (ಎಲ್ಲರಿಗೂ ನೀರು)ಯೋಜನೆ, ಉಜ್ವಲ ಅನಿಲ ಯೋಜನೆ, ರೈತರಿಗೆ ಉಚಿತ ಪಡಿತರ, ವೃದ್ಧಾಪ್ಯ ಪಿಂಚಣಿ ಯೋಜನೆ, ‘ಒಂದು ಶ್ರೇಣಿ, ಒಂದು ಪಿಂಚಣಿ,’ ಕೋವಿಡ್ ಲಸಿಕೆ ಮತ್ತು ಹಲವಾರು ಜನ ಕಲ್ಯಾಣ ಉಪಕ್ರಮಗಳು, 2024 ರಲ್ಲಿ ಮೋದಿಯವರ ನಾಯಕತ್ವದಲ್ಲಿ ದೇಶಭಕ್ತ ಭಾರತೀಯ ಜನತಾ ಪಕ್ಷ ನಿಶ್ಚಿತವಾಗಿ ಗೆಲುವು ಸಾಧಿಸಲಿದೆ ಎಂದು ಹೇಳುವುದರಲ್ಲಿ ತಪ್ಪೇನಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post