ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆ ವ್ಯವಸ್ಥಿತವಾಗಿ ಸ್ಲೀಪರ್ ಸೆಲ್ ಆಗುವ ಅಪಾಯವಿದ್ದು, ಪೊಲೀಸ್ ಇಲಾಖೆ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಬಜರಂಗದಳದ ಪ್ರಾಂತೀಯ ಕೆ.ಆರ್. ಸುನೀಲ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ಅಲ್ಲೆ ನಡೆದು ನಾಲ್ಕೈದು ದಿನಗಳ ಕಳೆದರೂ ಈ ಸಂಬಂಧಿತ ಯಾರನ್ನೂ ಸಹ ಬಂಧಿಸಿಲ್ಲ. ಇಂತಹ ಘಟನೆಗಳಲ್ಲಿನ ಆರೋಪಿಗಳನ್ನು ಶೀಘ್ರ ಬಂಧಿಸದೇ ಇದ್ದರೆ ಇಂತಹ ಕೃತ್ಯಗಳು ದೇಶದಾದ್ಯಂತ ಹರಡುವ ಅಪಾಯವಿದೆ ಎಂದರು.

ಶಿವಮೊಗ್ಗದ ಘಟನೆಯನ್ನು ಕೋಮುಗಲಭೆ ಎಂದು ತಹಶೀಲ್ದಾರ್ ಹೇಳಿರುವುದು ಸರಿಯಲ್ಲ. ಇದು ಮುಸ್ಲಿಂ ಗೂಂಡಾಗಳ ಕೃತ್ಯವಾಗಿದೆ. ರವಿವರ್ಮ ಬೀದಿಯ ಹಿಂದೂ ಮನೆಯ ಕಾರ್ಯಕ್ರಮಕ್ಕೆ ಬಂದ ಕೆಲವರ ಕಾರುಗಳನ್ನ ಜಖಂಗೊಳಲಾಗಿದೆ. ಇದೇ ಬಡಾವಣೆಯ ನಂದಿನಿ ಹಾಲಿನ ಕೇಂದ್ರದಲ್ಲಿರುವ ಮಹಿಳೆಗೆ ಮಾರಕಾಸ್ತ್ರ ದಾಳಿ ಮಾಡಲಾಗಿದೆ. ಹೊಸ ಸೇತುವೆಯ ಮೇಲೆ ಹೋಗುತ್ತಿದ್ದ ವರುಣನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಇಷ್ಟೆಲ್ಲಾ ಕೃತ್ಯಗಳು ಹಿಂದೂಗಳ ಮೇಲೆ ನಡೆದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















