ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಗಳೂರು: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಿಷೇಧಾಜ್ಞೆ ನಡುವೆಯೇ ನಗರದಲ್ಲಿ ನಡೆಸಲಾಗಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಹಲವು ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಹೇರಲಾಗಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿದೆ.
ನಗರದ ಐದು ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಇದು ನಾಳೆ ರಾತ್ರಿಯವರೆಗೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ತೊಂದರೆಗೆ ಸಿಲುಕಿರುವ ಸಾರ್ವಜನಿಕರ ಸಹಾಯಕ್ಕೆ ಮಂಗಳೂರಿನ ಇಬ್ಬರು ಯುವಕರು ಮುಂದಾಗಿದ್ದಾರೆ.
ಗೌತಮ್ ಬೋಳಾರ್ ಹಾಗೂ ಶೈಲೇಶ್ ಕುಮಾರ್ ಎಂಬುವವರು ಈ ಉಚಿತ ಸೇವೆಗೆ ಮುಂದಾಗಿದ್ದು, ತೊಂದರೆಗೆ ಸಿಲುಕಿದ ಯಾವುದೇ ಸಾರ್ವಜನಿಕರು ಇವರನ್ನು ಸಂಪರ್ಕಿಸಬಹುದಾಗಿದೆ.
ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು ಹೀಗೆ ಯಾರಾದರೂ ಮನೆಗೆ ವಾಪಸ್ಸಾಗಲು ವಾಹನ ಸಂಚಾರದ ಅಸ್ತವ್ಯಸ್ತದಿಂದಾಗಿ ತೊಂದರೆಗೊಳಗಾಗಿದ್ದಲ್ಲಿ ಇವರನ್ನು ಸಂಪರ್ಕಿಸಿ ಸೇವೆ ಪಡೆದುಕೊಳ್ಳಬಹುದಾಗಿದೆ.
ಇವರ ಮೊಬೈಲ್ ಸಂಖ್ಯೆ ಹೀಗಿದೆ:
ಗೌತಮ್ ಬೋಳಾರ್
93418 21331
ಶೈಲೇಶ್ ಕುಮಾರ್
99023 37423
Get in Touch With Us info@kalpa.news Whatsapp: 9481252093
Discussion about this post