ಜಕಾರ್ತ: ಏಷ್ಯನ್ ಗೇಮ್ಸ್ 2018ರಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಪುರುಷರ ವಿಭಾಗದ 800 ಮೀಟರ್ ಓಟದಲ್ಲಿ ಮನ್ಜೀತ್ ಸಿಂಗ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದು, ದೇಶವೇ ಮೆಚ್ಚುವಂತೆ ಸಾಧನೆ ಮಾಡಿದ್ದಾರೆ.
1 ನಿಮಿಷ 46.15 ಸೆಕೆಂಡ್ ಗಳಲ್ಲಿ ನಿಗದಿತ ಓಟವನ್ನು ಮನ್ಜೀತ್ ಪೂರ್ಣಗೊಳಿಸಿದರೆ, ಜಿನ್ಸನ್ ಜಾನ್ಸನ್ 1 ನಿಮಿಷ 46.38 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದಾರೆ.
WHAT A RUN! WHAT A BRILLIANT RUN!
Manjit Singh had to come from the 4th position to win GOLD Medal in last 50 meters.
With a timing of 1:46:15 in 800m men's event, he was simply sensational! Very proud! #KheloIndia #AsianGame2018 #IndiaAtAsianGames pic.twitter.com/mZf6yaCnPO
— Rajyavardhan Rathore (@Ra_THORe) August 28, 2018
ಈ ಎರಡು ಪದಕಗಳ ಮೂಲಕ ಭಾರತ ಈವರೆಗೂ ಗಳಿಸಿರುವ ಒಟ್ಟು ಪದಕಗಳ ಸಂಖ್ಯೆ 49 ಕ್ಕೆ ಏರಿಕೆಯಾಗಿದ್ದು ಪದಕಗಳ ಪಟ್ಟಿಯಲ್ಲಿ 8 ನೆಯ ಸ್ಥಾನದಲ್ಲಿದೆ.
ಮಹಿಳೆಯರ 52 ಕೆಜಿ ಕುರಶ್ ವರ್ಗದಲ್ಲಿ ಭಾರತದ ಪಿಂಕಿ ಬಲ್ಹಾರಾ ಮತ್ತು ಇದೇ ಕ್ರೀಡೆಯಲ್ಲಿ ಮಲ್ಲಪ್ರಭಾ ಜಾಧವ್ ಬೆಳ್ಳಿಯನ್ನು ಗೆದ್ದರು.
ಇಂದು ಬೆಳಗ್ಗೆ ವನಿತೆಯರ ಬಿಲ್ಗಾರಿಕೆಯಲ್ಲಿ ಭಾರತದ ಮಹಿಳಾ ತಂಡ ಬೆಳ್ಳಿಯನ್ನು ಗೆದ್ದಿತ್ತು. ಇದೇ ರೀತಿ ಪುರುಷರ ತಂಡ ಕೂಡ ದಕ್ಷಿಣ ಕೊರಿಯದೆದುರು ಸ್ವಲ್ಪದರಲ್ಲೇ ಚಿನ್ನವನ್ನು ಕಳೆದುಕೊಂಡು ಬೆಳ್ಳಿಗೆ ತಪ್ತಿ ಪಡೆಯಬೇಕಾಯಿತು.
Discussion about this post