Read - < 1 minute
ಭದ್ರಾವತಿ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವರ ಬ್ರಹ್ಮರಥೋತ್ಸವ ಇದೇ ಮೇ 15 ರಿಂದ 21ರವರೆಗೂ ನಡೆಯಲಿದೆ.
ಭದ್ರಾ ನದಿ ಸನಿಹದಲ್ಲೇ ಇರುವ ಹಳೇನಗರದಲ್ಲಿ ದೇವಾಲಯದಲ್ಲಿ ರಥೋತ್ಸವಕ್ಕೆ ಎಲ್ಲ ಸಿದ್ದತೆಗಳು ನಡೆದಿದ್ದು, ಸುಮಾರು ಒಂದು ವಾರಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮಗಳ ವಿವರ ಹೀಗಿದೆ:
- ಮೇ 15: ಮುಂಜಾನೆ ಅಭಿಷೇಕ, ಸಂಜೆ ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣ, ರಕ್ಷಾಬಂಧನ ಹಾಗೂ ಅಷ್ಟಾವಧಾನ ಸೇವೆ
- ಮೇ 16: ಗರುಡ ವಾಹನೋತ್ಸವ, ಅಷ್ಟಾವಧಾನ ಸೇವೆ
- ಮೇ 17: ನರಸಿಂಹ ಜಯಂತಿ, ವಸಂತಸೇವೆ, ಅಷ್ಟಾವಧಾನ: ಸಂಜೆ ಕಲ್ಯಾಣೋತ್ಸವ
- ಮೇ 18: ಮಧ್ಯಾಹ್ನ 12 ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ ಬ್ರಹ್ಮ ರಥೋತ್ಸವ
- ಮೇ 19: ಗಜವಾಹನೋತ್ಸವ, ಅಷ್ಟಾವಧಾನ ಸೇವೆ: ಸಂಜೆ ವಿಶೇಷ ಚಂಡೆವಾದನದೊಂದಿಗೆ ಶೇಷವಾಹನ ಉತ್ಸವ
- ಮೇ 20: ಸಂಧಾನ ಸೇವೆ, ಅವಭೃತ ಸ್ನಾನ: ಸಂಜೆ-ಹನುಮಂತೋತ್ಸವ, ಪೂರ್ಣಾಹುತಿ
- ಮೇ 21: ಮಹಾಭಿಶೇಕ, ವಿಶೇಷ ಅಲಂಕಾರ, ಸಂಜೆ: ಪಲ್ಲಕ್ಕಿ ಉತ್ಸವ, ಸಾಂಪ್ರದಾಯಕ ತೈಲ ದೀಪದಲ್ಲಿ ದರ್ಶನ
Discussion about this post