ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ದಾಖಲಿಸಿದ ನರೇಂದ್ರ ಮೋದಿ ಎರಡನೆಯ ಅವಧಿಗೆ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ಹಿಂದೂಸ್ಥಾದಲ್ಲಿ ಮೋದಿಸ್ಥಾನದ ವೈಭವ ಮುಂದುವರೆದಿದೆ.
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗೌಪ್ಯತಾವಿಧಿ ಬೋಧಿಸಿದರು.
Prime Minister @narendramodi takes Oath of Office and Secrecy#ModiSwearingIn #ModiSarkar2 #SwearinginCeremony @PMOIndia pic.twitter.com/gSHlYvexk8
— PIB India (@PIB_India) May 30, 2019
ಮೋದಿ ಅವರೊಂದಿಗೆ, ರಾಜನಾಥ ಸಿಂಗ್, ನಿತಿನ್ ಗಡ್ಕರಿ, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಪೀಯೂಷ್ ಗೋಯಲ್, ಡಿ ವಿ ಸದಾನಂದಗೌಡ, ರವಿಶಂಕರ್ ಪ್ರಸಾದ್, ರಾಮ್ ವಿಲಾಸ್ ಪಾಸ್ವಾನ್, ಪ್ರಕಾಶ್ ಜಾವ್ಡೇಕರ್, ಡಾ.ಹರ್ಷವರ್ಧನ್, ಅರ್ಜುನ್ ಮುಂಡಾ, ರಮೇಶ್ ಪೊಕ್ರಿಯಾಲ್ ನಿಶಂಗ್, ಧಾವರ್ ಚಂದ್ ಗೆಹ್ಲೋಟ್, ಧರ್ಮೇಂದ್ರ ಪ್ರಧಾನ್, ಹರ್ಸಿಮ್ರತ್ ಕೌರ್, ಮುಕ್ತಾರ್ ಅಬ್ಬಾಸ್ ನಕ್ವಿ, ಪ್ರಹ್ಲಾದ್ ಜೋಷಿ ಸೇರಿದಂತೆ ಹಲವರು ಪ್ರತಿಜ್ಞಾವಿಧಿ ಸ್ವೀಕರಿಸಿದರು.
Shri @rajnathsingh takes Oath of Office and Secrecy as a Minister of the Union #ModiSarkar2 #ModiSwearingIn pic.twitter.com/QzgJgyUGHO
— PIB India (@PIB_India) May 30, 2019
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಮಂದಿಗೆ ಉಪಸ್ಥಿತರಿರಲು ಅವಕಾಶ ಕಲ್ಪಿಸಲಾಗಿತ್ತು
Discussion about this post