ಕಲ್ಪ ಮೀಡಿಯಾ ಹೌಸ್ | ಮೈಸೂರು/ಶಿವಮೊಗ್ಗ |
ಮಹತ್ವದ ಬೆಳವಣಿಗೆಯೊಂದರಲ್ಲಿ #Talguppa ತಾಳಗುಪ್ಪ – ಮೈಸೂರು #Mysore ಎಕ್ಸ್’ಪ್ರೆಸ್ ರೈಲು ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಇದರಿಂದ ಶಿವಮೊಗ್ಗದಿಂದ #Shivamogga ಧಾರವಾಡ-ಬೆಂಗಳೂರು ರೈಲು ಪ್ರಯಾಣ ಮಾಡುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ.
ಈ ಕುರಿತಂತೆ ಸಾಮಾಜಿಕ ಮಾಧ್ಯಮದ ಮೂಲಕ ಮಹತ್ವದ ಮಾಹಿತಿ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ #BYRaghavendra ಅವರು, 16221 ಸಂಖ್ಯೆಯ ತಾಳಗುಪ್ಪ-ಮೈಸೂರು ನಡುವಿನ ಕುವೆಂಪು ಎಕ್ಸ್’ಪ್ರೆಸ್ ರೈಲು ಸಂಚಾರದ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದ್ದು, ಇದು ಪ್ರಯಾಣಿಕರಿಗೆ ಹಲವು ರೀತಿಯಲ್ಲಿ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.
ನೂತನ ವೇಳಾಪಟ್ಟಿ ನವೆಂಬರ್ 2ರಿಂದ ಜಾರಿಗೆ ಬರಲಿದ್ದು, ಈ ರೈಲಿನ ಸಂಚಾರ ಸಮಯದ ಬದಲಾವಣೆಯಿಂದಾಗಿ, ಪ್ರಯಾಣಿಕರು ಸಿದ್ದಗಂಗಾ ಎಕ್ಸ್’ಪ್ರೆಸ್ #SiddhagangaExpress (ಧಾರವಾಡ-ಬೆಂಗಳೂರು) ಹತ್ತಲು ಬೀರೂರಿನಲ್ಲಿ ಅನುಕೂಲಕರವಾಗಿ ಸಂಪರ್ಕ ಸಾಧಿಸಬಹುದು ಎಂದಿದ್ದಾರೆ.12725 ಸಂಖ್ಯೆಯ ಧಾರವಾಡ-ಬೆಂಗಳೂರು ನಡುವಿನ ಸಿದ್ಧಗಂಗಾ ಎಕ್ಸ್’ಪ್ರೆಸ್ ಹಾಗೂ 11006 ಸಂಖ್ಯೆ ಪಾಂಡಿಚರ‍್ರಿ ಎಕ್ಸ್’ಪ್ರೆಸ್ ರೈಲುಗಳನ್ನು ಶಿವಮೊಗ್ಗದಿಂದ ತೆರಳುವ ಪ್ರಯಾಣಿಕರು ಹತ್ತಬಹುದಾಗಿದೆ.
ಈ ಬದಲಾವಣೆಯು ಪ್ರಯಾಣವನ್ನು ಸುಲಭಗೊಳಿಸುತ್ತದೆ, ಬೆಂಗಳೂರು ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಶಿವಮೊಗ್ಗದ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.
ಹೊಸ ಸಮಯದ ಪ್ರಕಾರ, ಬೆಳಗಿನ ಜಾವ 05:50ಕ್ಕೆ ತಾಳಗುಪ್ಪದಿಂದ ಹೊರಟು, ಶಿವಮೊಗ್ಗ ಪಟ್ಟಣ – 07:55, ಬೀರೂರು – 09:35, ಮೈಸೂರಿಗೆ 15:30 ಕ್ಕೆ ತಲುಪಲಿದೆ.
ಇಲ್ಲಿದೆ ನವೆಂಬರ್ 1ರಿಂದ ಜಾರಿಗೆ ಬರಲಿರುವ ಬದಲಾದ ವೇಳಾಪಟ್ಟಿ:
ಕೆಲವು ರೈಲುಗಳ ಸಂಚಾರ ರದ್ದು
ಬೀರೂರು-ಶಿವಪುರ, ಬೀರೂರು-ತಾಳಗುಪ್ಪ ಹಾಗೂ ಬೀರೂರು-ನಾಗವಂಗಲ ಸ್ಟೇಷನ್‌ಗಳ ನಡುವೆ ಲೈನ್ ಮತ್ತು ವಿದ್ಯುತ್ ತಡೆ ಹಾಗೂ ಎನ್.ಎಚ್.-206 ರಲ್ಲಿ ಎನ್‌ಎಚ್‌ಎಐ ರಸ್ತೆ ಮೇಲ್ಸೇತುವೆಗೆ (ಆರ್.ಓ.ಬಿ) ಬೋಸ್ಟ್ರಿಂಗ್ ಗರ್ಡರ್ ಅಳವಡಿಸುವ ಕಾರ್ಯಕ್ಕಾಗಿ (ಎಲ್.ಸಿ ಸಂಖ್ಯೆ 128 ಮತ್ತು 2 ಬದಲಿಗೆ) ಕೆಳಕಂಡ ಕೆಲವು ರೈಲುಗಳು ರದ್ದುಗೊಳ್ಳುತ್ತವೆ, ನಿಯಂತ್ರಣಕ್ಕೊಳಪಡುತ್ತವೆ ಹಾಗೂ ಮರುನಿಗದಿಗೊಳ್ಳುತ್ತವೆ.
ಯಾವೆಲ್ಲಾ ರೈಲುಗಳ ಸಂಚಾರ ರದ್ದು?
- ರೈಲು ಸಂಖ್ಯೆ. 16567 ತುಮಕೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 31 ಆಗಸ್ಟ್, 1, 8, 14 ಮತ್ತು 15 ಸೆಪ್ಟೆಂಬರ್ 2025 ರಂದು ರದ್ದು
- ರೈಲು ಸಂಖ್ಯೆ. 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 1, 2, 9, 15 ಮತ್ತು 16 ಸೆಪ್ಟೆಂಬರ್ 2025 ರಂದು ರದ್ದು
- ರೈಲು ಸಂಖ್ಯೆ. 16214 ಎಸ್ಎಸ್ಎಸ್ ಹಬ್ಬಳ್ಳಿ – ಅರಸೀಕೆರೆ ಎಕ್ಸ್‌ಪ್ರೆಸ್ 8 ಸೆಪ್ಟೆಂಬರ್ 2025 ರಂದು ರದ್ದು
- ರೈಲು ಸಂಖ್ಯೆ. 16213 ಅರಸೀಕೆರೆ – ಎಸ್ಎಸ್ಎಸ್ ಹಬ್ಬಳ್ಳಿ ಎಕ್ಸ್‌ಪ್ರೆಸ್ 9 ಸೆಪ್ಟೆಂಬರ್ 2025 ರಂದು ರದ್ದು
- ರೈಲು ಸಂಖ್ಯೆ. 12089 ಕೆಎಸ್‌ಆರ್ ಬೆಂಗಳೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 8 ಸೆಪ್ಟೆಂಬರ್ 2025 ರಂದು ರದ್ದು
- ರೈಲು ಸಂಖ್ಯೆ. 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 9 ಸೆಪ್ಟೆಂಬರ್ 2025 ರಂದು ರದ್ದು
ಮರುನಿಗದಿಪಡಿಸಿದ ರೈಲುಗಳು
ರೈಲು ಸಂಖ್ಯೆ. 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಶಿವಮೊಗ್ಗ ಟೌನ್ ನಿಂದ 1, 2, 15 ಮತ್ತು 16 ಸೆಪ್ಟೆಂಬರ್ 2025 ರಂದು 75 ನಿಮಿಷ ತಡವಾಗಿ ಹೊರಡಲಿದೆ.
ರೈಲು ಸಂಖ್ಯೆ. 16213 ಅರಸೀಕೆರೆ – ಎಸ್ಎಸ್ಎಸ್ ಹಬ್ಬಳ್ಳಿ ಎಕ್ಸ್‌ಪ್ರೆಸ್ ಅರಸೀಕೆರೆಯಿಂದ 1, 2, 15 ಮತ್ತು 16 ಸೆಪ್ಟೆಂಬರ್ 2025 ರಂದು 45 ನಿಮಿಷ ತಡವಾಗಿ ಹೊರಡಲಿದೆ.
ನಿಯಂತ್ರಿತ ರೈಲುಗಳು
ರೈಲು ಸಂಖ್ಯೆ. 20652 ತಾಳಗುಪ್ಪ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 9 ಸೆಪ್ಟೆಂಬರ್ 2025 ರಂದು ಮಾರ್ಗಮಧ್ಯದಲ್ಲಿ 75 ನಿಮಿಷ ನಿಯಂತ್ರಿಸಲಾಗುವುದು.
ರೈಲು ಸಂಖ್ಯೆ. 56272 ಚಿಕ್ಕಮಗಳೂರು – ಶಿವಮೊಗ್ಗ ಟೌನ್ ಪ್ಯಾಸೆಂಜರ್ 9 ಸೆಪ್ಟೆಂಬರ್ 2025 ರಂದು ಮಾರ್ಗಮಧ್ಯದಲ್ಲಿ 30 ನಿಮಿಷ ನಿಯಂತ್ರಿಸಲಾಗುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post