ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿ ಹಂತದಿಂದಲೇ ವ್ಯಕ್ತಿತ್ವ ವಿಕಸನ ರೂಢಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಬೇಕು ಎಂದು ಸಮಾಜಮುಖಿ ವಿದ್ಯಾಸ್ಪಂದನ ಸಂಸ್ಥೆಯ ಅಧ್ಯಕ್ಷ ಪುನೀತ್ ಜಿ. ಕೂಡ್ಲೂರು ಕರೆ ನೀಡಿದರು.
ಮೈಸೂರಿನ ಕೃಷ್ಣಮೂರ್ತಿ ಪುರಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಗುಬ್ಬಚ್ಚಿ ಶಾಲೆ)ಯಲ್ಲಿ ಪ್ರತಿಭೆ ವೇದಿಕೆ ಹಾಗೂ ವಿದ್ಯಾಸ್ಪಂದನ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಕೊಡುಗೆ ನೀಡಿದ ವೇಳೆ ಅವರು ಮಾತನಾಡಿದರು.
ಮಕ್ಕಳು ನಮ್ಮ ಭಾಷೆಗಳ ಪ್ರಾಮುಖ್ಯತೆಯನ್ನು ಅರಿಯಬೇಕು. ಜೊತೆಯಲ್ಲಿ ದೇಶಾಭಿಮಾನವನ್ನು ರೂಢಿಸಿಕೊಳ್ಳಬೇಕು. ಇದರೊಂದಿಗೆ ನಿಮ್ಮ ಹಾಗೂ ಭವಿಷ್ಯದ ಉತ್ತಮ ಸಮಾಜದ ದೃಷ್ಠಿಯಿಂದ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಬೇಕು ಎಂದ ಅವರು, ಇದರಲ್ಲಿ ಕನ್ನಡದ ಪಾತ್ರವನ್ನು ವಿವರಿಸಿದರು.
ಎಸ್. ರುದ್ರೇಶ್ ಮಾತನಾಡಿ, ಮಕ್ಕಳಿಗೆ ಶಾಲೆ, ಶಿಕ್ಷಕರು ಹಾಗೂ ಮಕ್ಕಳ ಸಂಬಂಧದ ಬಾಂಧವ್ಯವನ್ನು ವಿವರಿಸಿದರು.
ಶಾಲೆಯ ಮಕ್ಕಳ ಶಿಕ್ಷಣ ಪ್ರಗತಿಗೆ ಶ್ರಮಿಸುತ್ತಿರುವ ಪ್ರಭಾರ ಮುಖ್ಯಶಿಕ್ಷಕರಾದ ಮೋಹನ್ ಕುಮಾರ್ ಅವರಿಗೆ ಪ್ರತಿಭಾ ಶ್ರೀ ಪ್ರಶಸ್ತಿಯನ್ನು ಪ್ರತಿಭಾ ವೇದಿಕೆಯು ನೀಡಿ ಗೌರವಿಸಿತು.
ಕಾರ್ಯಕ್ರಮದಲ್ಲಿ ಇಂದುಮತಿ, ರಾಜರತ್ನಂ, ನಾಗೇಂದ್ರರಾವ್, ಸತೀಶ್, ಕೆ.ಆರ್. ಗಣೇಶ್ ಹಾಗೂ ಶಾಲೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















