No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ದುರಭಿಮಾನ ಬಿಟ್ಟು ದೇವರ ಮಹಾಕರುಣೆ ಎಂದು ವಿಶ್ವವನ್ನು ಭಾವಿಸಿ: ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ

ಅಗ್ರಹಾರದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿ `ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವ'

kalpa News by kalpa News
May 28, 2023
in ಮೈಸೂರು
0
ದುರಭಿಮಾನ ಬಿಟ್ಟು ದೇವರ ಮಹಾಕರುಣೆ ಎಂದು ವಿಶ್ವವನ್ನು ಭಾವಿಸಿ: ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಸತ್ಯವಾಗಿರುವ ಜಗತ್ತಿನ ಪ್ರತಿಯೊಂದು ವಸ್ತು- ವೈವಿಧ್ಯಗಳನ್ನೂ ಪರಮಾತ್ಮನ ಮಹತ್ತರ ಕೊಡುಗೆಯೆಂದೇ ತಿಳಿದರೆ ಜೀವನ ಸುಂದರ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಅಗ್ರಹಾರದಲ್ಲಿರುವ ಉತ್ತರಾದಿಮಠದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿ `ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವ’ 4 ದಿನಗಳ ವಿಶೇಷ ಕಾರ್ಯಕ್ರಮ ಸರಣಿಗೆ ಭಾಗವತ ತಾತ್ಪರ್ಯ ನಿರ್ಣಯ ಮಹಾನ್ ಗ್ರಂಥದ ಪಾಠ-ಪ್ರವಚನದ ಮೂಲಕ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ದೇವರ ವಶವಾಗಿರುವ ಈ ಜಗತ್ತನ್ನು ನನ್ನದು ಎಂದು ಭಾವಿಸಿದಾತ ಸಮಸ್ಯೆಗಳಿಗೆ ಸಿಲುಕುತ್ತಾನೆ. ನಮ್ಮದು ಎಂಬ ದುರಭಿಮಾನ ಬಿಟ್ಟು ದೇವರ ಮಹಾಕರುಣೆ ಎಂದು ವಿಶ್ವವನ್ನು ಭಾವಿಸಿ ಬದುಕೋಣ. ಆಗಮಾತ್ರ ಪ್ರೀತಿ, ಭಕ್ತಿ, ಸೌಹಾರ್ದ, ಸಾರ್ಥಕ್ಯಭಾವಗಳು ಮೇಳೈಸುತ್ತವೆ ಎಂದರು.

ನೂರಾರು ಭಕ್ತರಿಂದ ಪಾದಪೂಜೆ ಸ್ವೀಕಾರ ಮಾಡಿದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ನಂತರ ಭಕ್ತರಿಗೆ ತಪ್ತ ಮುದ್ರಾಧಾರಣೆ ನೀಡಿದರು.

ಆಚಾರ್ಯ ಮಧ್ವರು ರಚಿಸಿದ `ಭಾಗವತ ತಾತ್ಪರ್ಯ ನಿರ್ಣಯ’ ಎಂಬ ಪವಿತ್ರ ಗ್ರಂಥವು ಧರ್ಮ-ಶಾಸ್ತ್ರ ಜಿಜ್ಞಾಸುಗಳಿಗೆ ಸೂಕ್ತವಾದ ತಿಳಿವಳಿಕೆ ಮೂಡಿಸುತ್ತದೆ. ಇದರ ಅಧ್ಯಯನದಿಂದ ದೊರಕುವ ಮಹತ್ತರ ಲಾಭ ಏನೆಂದರೆ ನಾವು ಇತರ ಗ್ರಂಥಗಳನ್ನು ಹೇಗೆ ತಿಳಿಯಬೇಕು ಎಂಬ ಜ್ಞಾನ ಮೂಡುತ್ತದೆ. ಪುರಾಣ, ಶಾಸ್ತ್ರಗಳ ಮಾರ್ಗ ತೆರೆದುಕೊಳ್ಳುತ್ತದೆ. ಅನಂತ ವೇದಗಳು, ಇತಿಹಾಸ ಮತ್ತು ಸತ್‌ ಶಾಸ್ತ್ರಗಳನ್ನು ಪರಿಪೂರ್ಣವಾಗಿ ಅರಿತಿದ್ದ ಆಚಾರ್ಯ ಮಧ್ವರು ಅವುಗಳಿಗೆ ಸಮರ್ಥವಾದ, ಸರ್ವ ದೇಶ ಕಾಲವೂ ಮೆಚ್ಚುವಂಥ ನಿರ್ಣಯಗಳನ್ನು ರಚಿಸಿ ಕೊಟ್ಟಿದ್ದಾರೆ. ಭಕ್ತಿ ಮತ್ತು ಶ್ರದ್ಧೆಯಿಂದ ಇವುಗಳ ಅಧ್ಯಯನ ಮಾಡಿ ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಪರಮಾತ್ಮನಲ್ಲಿ ಮನಸ್ಸು ಸ್ಥಿರವಾಗಲಿ
ಯಾರು ಪರಮಾತ್ಮನಲ್ಲಿ ಮನವನ್ನು ಸ್ಥಿರವಾಗಿ ಇಡುವರೋ ಅವರು ಇಹ ಮತ್ತು ಪರದಲ್ಲಿ ಅನಂತ ಸುಖವನ್ನು ಅನುಭವಿಸುತ್ತಾರೆ. ಕೇವಲ ಲೌಕಿಕ ಜೀವನದ ಆಮಿಷಗಳಿಗೆ ಬೀಳದೇ ದಿನದ ಕೆಲವು ಸಮಯವಾದರೂ ಪರಮಾತ್ಮನ ಕತೆಗಳನ್ನು ಕೇಳುವ ಮನೋಸ್ಥಿತಿ ರೂಢಿಸಿಕೊಳ್ಳಬೇಕು. ದೇವರ ಸಖ್ಯದ ಪ್ರೀತಿ, ಆನಂದ ಮತ್ತು ಭಾವಗಳನ್ನು ಅನುಭವಿಸಬೇಕು. ಗಾಯನ, ನರ್ತನ ಮೊದಲಾದ ನವವಿಧ ಭಕುತಿಗಳು ನಮ್ಮಲ್ಲಿ ಮನೆ ಮಾಡಬೇಕು. ಯಾವುದೂ ಬೇಡವೆಂದರೂ ಅಂತರಂಗದಲ್ಲಿ ಅನನ್ಯವಾಗಿ ಪರಮಾತ್ಮನ ಚಿಂತನೆಯನ್ನಾದರೂ ಮಾಡಬೇಕು. ಮುಖ ಪ್ರಸಾದ ಮತ್ತು ದಾರ್ಢ್ಯಗಳೇ ಭಕ್ತಿಯ ಲಕ್ಷಣಗಳು ಎಂಬುದನ್ನು ನಾವು ತಿಳಿಯಬೇಕು ಎಂದು ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.

ಮೋಕ್ಷ ಸಾಧನೆ ಕಡೆಗೆ ಸಾಗಿ
ಭಾಗವತ ತಾತ್ಪರ್ಯ ನಿರ್ಣಯ ಗ್ರಂಥವು `ಕಂಡಕಂಡದ್ದೆಲ್ಲಾ ಕಮಲನಾಭನ ಮೂರ್ತಿ’ ಎಂದು ಸಾರಿ ಹೇಳಿದೆ. ಅಭಯ ನೀಡುವ ದೇವರನ್ನು ನಂಬಿದವರಿಗೆ ಎಂದೂ ಮೋಸವಾಗಿಲ್ಲ. ಗಂಭೀರವಾಗಿ ಇರುವವರನ್ನು ಕಂಡು ಇವರೆಲ್ಲಾ ಏನು ಮಾಡಿಯಾರು ಎಂದು ಹೀಯಾಳಿಸಬೇಡಿ. ದೇವರ ಬಗ್ಗೆ ಅಚಲ ವಿಶ್ವಾಸ ಇರುವ ಅಂತರಂಗದ ಭಕ್ತರಿಗೂ ದೇವರ ಕಾರುಣ್ಯ ಇದ್ದೇ ಇರುತ್ತದೆ. ಮಾನವ ಜನ್ಮ ದೊರಕಿರುವಾಗ ಮೋಕ್ಷ ಸಾಧನೆ ಕಡೆಗೆ ನಮ್ಮ ಮನಸ್ಸು ಸಾಗಬೇಕು ಎಂದು ಸ್ವಾಮೀಜಿ ಹೇಳಿದರು.
ಮಠದ ವಿದ್ವಾಂಸರು, ನೂರಾರು ಶಿಷ್ಯವರ್ಗದವರು ಹಾಜರಿದ್ದರು. ಪ್ರಾದುರ್ಭಾವ ಉತ್ಸವದ ಅಂಗವಾಗಿ ಮಠದ ಶ್ರೀ ಧನ್ವಂತರಿ ಮೂರ್ತಿ, ಶ್ರೀ ಸತ್ಯ ಸಂಕಲ್ಪರು ಮತ್ತು ಶ್ರೀ ಸತ್ಯ ಸಂತುಷ್ಟರ ಮೂಲ ವೃಂದಾವನಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಮೇ 28ರಂದು ಸಂಜೆ 5:30ರಿಂದ ಸುಪ್ರಸಿದ್ಧ ಗಾಯಕ ಪಂ. ಪ್ರಸನ್ನ ಗುಡಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. 6:30ರಿಂದ ಗಣ್ಯರು ಹಾಗೂ ವಿಶೇಷ ಸೇವಾಕರ್ತರಿಗೆ ಶ್ರೀಪಾದಂಗಳವರಿಂದ ಅನುಗ್ರಹ ಫಲಮಂತ್ರಾಕ್ಷತೆ, ನಂತರ ಶ್ರೀಗಳು ಅನುಗ್ರಹ ಸಂದೇಶ ನೀಡಲಿದ್ದಾರೆ.

ಮೇ 29ರಂದು ಬೆಳಿಗ್ಗೆ 7ಗಂಟೆಗೆ ಶ್ರೀಮದ್ಭಾಗವತ ತಾತ್ಪರ್ಯ ಪಾಠ, ಸಂಜೆ 5:30ಕ್ಕೆ ಜಯತೀರ್ಥ ವಿದ್ಯಾಪೀಠ ಪ್ರಾಂಶುಪಾಲರಾದ ಪಂ ಸತ್ಯಧ್ಯಾನಚಾರ್ಯ ಕಟ್ಟಿ ಅವರಿಂದ ಪ್ರವಚನ, 7ಗಂಟೆಗೆ ಶ್ರೀಗಳಿಂದ ಅನುಗ್ರಹ ಸಂದೇಶ ಜರುಗಲಿದೆ.

ಮೇ 30ರಂದು ಬೆಳಿಗ್ಗೆ 7ಗಂಟೆಗೆ ಶ್ರೀಮದ್ಭಾಗವತ ತಾತ್ಪರ್ಯ ಪಾಠದ ಮಂಗಳ ಹಾಗೂ ಗುರುವಂದನೆ, 8:30ಕ್ಕೆ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ, 10:30ಕ್ಕೆ ಶ್ರೀಧನ್ವಂತರಿ ದೇವರಿಗೆ ಕಲಶಾಭಿಷೇಕ, ಮಧು ಅಭಿಷೇಕ ಮತ್ತು ವಿಶೇಷ ಪಂಚಾಮೃತ ಅಭಿಷೇಕ ನಡೆಯಲಿದೆ. 11:30ಕ್ಕೆ ನೂತನ ಅಲಂಕೃತ ಗೋಡೆಯ ಲೋಕಾರ್ಪಣೆ ಶ್ರೀಪಾದಂಗಳವರ ಅನುಗ್ರಹ ವಚನ, ನಂತರ ಮೂಲರಾಮದೇವರ ಹಾಗೂ ಧನ್ವಂತರಿಯ ತೀರ್ಥ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: Kannada News WebsiteLatest News KannadaMokshamysoresri satyadharma teertharuಆಚಾರ್ಯ ಮಧ್ವರುಉತ್ತರಾದಿ ಮಠಭಾಗವತ ತಾತ್ಪರ್ಯಮೈಸೂರುಮೋಕ್ಷಶ್ರೀ ಧನ್ವಂತ್ರಿ ಸನ್ನಿಧಾನಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಶ್ರೀಮನ್ ಮಧ್ವಾಚಾರ್ಯ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಂಕ ಗಳಿಕೆ ಜೊತೆಗೆ ಕೌಶಲ್ಯದ ಮಹತ್ವ ಅರಿಯಿರಿ: ವಿದ್ಯಾರ್ಥಿಗಳಿಗೆ ಡಾ. ನಾಗರಾಜ ಕಿವಿಮಾತು

Next Post

ಪರಿಸರ, ಜಲ, ಮಣ್ಣಿನ ಮಹತ್ವ ಅರಿಯುವುದು ಅನಿವಾರ್ಯ: ಡಾ.ನಾಗರಾಜ್ ಪರಿಸರ ಕರೆ

kalpa News

kalpa News

Next Post
ಪರಿಸರ, ಜಲ, ಮಣ್ಣಿನ ಮಹತ್ವ ಅರಿಯುವುದು ಅನಿವಾರ್ಯ: ಡಾ.ನಾಗರಾಜ್ ಪರಿಸರ ಕರೆ

ಪರಿಸರ, ಜಲ, ಮಣ್ಣಿನ ಮಹತ್ವ ಅರಿಯುವುದು ಅನಿವಾರ್ಯ: ಡಾ.ನಾಗರಾಜ್ ಪರಿಸರ ಕರೆ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL