No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
  • Advertise With Us
  • Grievances
  • About Us
  • Contact Us
Tuesday, July 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಭಕ್ತಿಯಿಂದ ಪ್ರಾರ್ಥಿಸುವುದೇ ನಮ್ಮ ಘನ ಉದ್ದೇಶವಾಗಲಿ | ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಂದೇಶ

ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರದ 8ನೇ ವಾರ್ಷಿಕೋತ್ಸವ | ದೇವರಿಗೆ ಮಹಾ ಅಭಿಷೇಕ ಸಂಪನ್ನ

kalpa News by kalpa News
May 2, 2026
in ಮೈಸೂರು
1
ಭಕ್ತಿಯಿಂದ ಪ್ರಾರ್ಥಿಸುವುದೇ ನಮ್ಮ ಘನ ಉದ್ದೇಶವಾಗಲಿ | ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಂದೇಶ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾರ್ಥನೆ ಎಂಬುದು ಬಹಳ ಮುಖ್ಯ. ಅನನ್ಯ ಭಕ್ತಿಯಿಂದ ಪ್ರಾರ್ಥಿಸುವುದೇ ನಮ್ಮ ಘನ ಉದ್ದೇಶವಾಗಲಿ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.

ಶ್ರೀರಾಮಪುರದಲ್ಲಿರುವ ಉತ್ತರಾದಿ ಮಠದ ಶಾಖೆ, ಶ್ರೀವೆಂಕಟೇಶ್ವರ ಧ್ಯಾನ ಕೇಂದ್ರದ 8ನೇ ವಾರ್ಷಿಕೋತ್ಸವದ ಸರಣಿ ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಶನಿವಾರ ಬೆಳಗ್ಗೆ ಶ್ರೀ ವೆಂಕಟೇಶ ದೇವರಿಗೆ ಮಹಾ ಕ್ಷೀರಾಭಿಷೇಕ, ಫಲ ಪಂಚಾಮೃತ ಅಭಿಷೇಕ ನೆರವೇರಿಸಿ ಅವರು ಅನುಗ್ರಹ ಸಂದೇಶ ನೀಡಿದರು.

ಎಲ್ಲಿ ಪ್ರೀತಿ ಮತ್ತು ಭಕ್ತಿಯಿಂದ ಆರಾಧನೆ ನಡೆಯುವುದೋ ಅಲ್ಲಿ ದೇವರ ನೆಲೆ ಇರುತ್ತದೆ. ಹಾಗಾಗಿ ಪ್ರಾರ್ಥನೆಯನ್ನು ಮಾಡುವುದು ನಮ್ಮ ಪರಮ ಉದ್ದೇಶವಾಗಲಿ. ಭಕ್ತರ ಪಾಪಗಳನ್ನು ದೇವರು ವರ್ಷಣ ಮಾಡಬೇಕು. ವರ್ಷಧಾರೆಯಂತೆ ನಮ್ಮ ಮೇಲೆ ಆತನ ಕಾರುಣ್ಯವು ಹರಿಯಬೇಕು ಎಂದರು.

ಫಲಪಂಚಾಮೃತ ಅಭಿಷೇಕದ ನಂತರ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಯವರು ಶ್ರೀ ವೆಂಕಟೇಶ ದೇವರಿಗೆ ಮಹಾ ಮಂಗಳಾರತಿ ಸಮರ್ಪಣೆ ಮಾಡಿದರು.

ದೇವರನ್ನು ಒಲಿಸಿಕೊಳ್ಳಬೇಕು ಎಂದರೆ ಇಲ್ಲಿ ಹಣ, ಅಂತಸ್ತು, ಶ್ರೀಮಂತಿಕೆ, ಸಮಯ ಮತ್ತು ಜನ ಸಂದಣಿಗಳು ಮಾನದಂಡ ಅಲ್ಲ. ನಿಷ್ಕಲ್ಮಶವಾದ ಪ್ರಾರ್ಥನೆಯೇ ಮಾನದಂಡ. ನಾವು ಮಾಡುವ ಪ್ರತಿಯೊಂದು ಕೆಲಸಗಳೂ ಜ್ಞಾನಿಗಳಿಗೆ, ಪಂಡಿತರಿಗೆ, ಹಿರಿಯರಿಗೆ ಪ್ರೀತಿಯಾದರೆ ಅದು ದೇವರಿಗೂ ಪ್ರಿಯವಾಗುತ್ತದೆ. ಹಾಗೆ ಆದಾಗ ಮಾತ್ರ ಉತ್ತಮ ಫಲಗಳು ನಮಗೆ ದೊರಕಲು ಸಾಧ್ಯ ಎಂದರು.

ಅನುಸಂಧಾನ ಎಂಬುದು ಬಹಳ ಮುಖ್ಯ
ಭಕ್ತಿ ಮಾರ್ಗದಲ್ಲಿ ಅನುಸಂಧಾನ ಎಂಬುದು ಬಹಳ ಮುಖ್ಯ. ಶ್ರೀ ವೆಂಕಟೇಶ ದೇವರು ನಮ್ಮ ಸಂಕಟಗಳನ್ನು ಹರಣ ಮಾಡಲು ಅವತಾರ ಮಾಡಿದ್ದಾನೆ. ಅವನ ಮೇಲೆ ಹೆಚ್ಚಿನ ಭಕ್ತಿ ಮತ್ತು ಶ್ರದ್ಧೆಯನ್ನು ಮಾಡುವುದು ಮಾತ್ರ ನಮ್ಮ ಕೆಲಸವಾಗಬೇಕು. ಆಗ ಬದುಕಿಗೆ ಒಂದು ಅರ್ಥ ಬರುತ್ತದೆ ಎಂದು ಸ್ವಾಮೀಜಿ ಹೇಳಿದರು. ಧರ್ಮ ಕ್ಷೇತ್ರಗಳಲ್ಲಿ ಜ್ಞಾನ ಕಾರ್ಯವು ಹೆಚ್ಚಾಗಿ ನಡೆಯಬೇಕು. ಆಗ ಸನ್ನಿಧಿಯಲ್ಲಿ ದೇವರು ಸನ್ನಿಹಿತ ನಾಗುತ್ತಾನೆ. ಜ್ಞಾನ ಮತ್ತು ಭಕ್ತಿಗಳು ನಮ್ಮಲ್ಲಿ ಜಾಗೃತವಾಗುತ್ತವೆ. ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ ಈ ನಿಟ್ಟಿನಲ್ಲಿ ನಿರಂತರವಾಗಿ ಜ್ಞಾನ ಸತ್ರಗಳನ್ನೇ ಮಾಡುತ್ತಿದೆ. ಪಂಡಿತ ಹೇಮಂತ ಆಚಾರ್ಯರು ಕೇಂದ್ರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಸಾರ್ಥಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.ಮುಂದಿನ ಪೀಳಿಗೆಯೂ ಸನ್ಮಾರ್ಗದಲ್ಲಿ ನಡೆಯಲಿ
ನಮ್ಮ ಪೂರ್ವಿಕರು ಸಾತ್ವಿಕವಾಗಿ ಸಾರ್ಥಕ ಜೀವನ ಮಾಡಿದ್ದರು. ದೇವರು ಇಂದು ನಮಗೆ ಉತ್ತಮ ಪರಂಪರೆಯನ್ನು , ಸತ್ಸಂಗವನ್ನೂ ನೀಡಿದ್ದಾನೆ. ನಮ್ಮ ಮುಂದಿನ ಪೀಳಿಗೆಯೂ ಸನ್ಮಾರ್ಗದಲ್ಲೇ ನಡೆಯಬೇಕು ಎಂದರೆ ನಾವೆಲ್ಲರೂ ಇಂದು ಹೆಚ್ಚು ಹೆಚ್ಚು ಜಪ, ತಪ, ಪಾರಾಯಣಗಳನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು. ನಂತರ ಶ್ರೀಗಳು ವೆಂಕಟೇಶ ದೇವರಿಗೆ ಫಲ ಪಂಚಾಮೃತ, ಕ್ಷೀರ ಮತ್ತು ವಿವಿಧ ದ್ರವ್ಯಗಳಿಂದ ಅಭಿಷೇಕ ನಡೆಸಿ ಮಂಗಳಾರತಿ ಮಾಡಿದರು.

ಶ್ರೀಗಳೇ ಜ್ಞಾನ ಯಜ್ಞವನ್ನು ನೆರವೇರಿಸಿಕೊಡಬೇಕು
ಕೇಂದ್ರದ ವ್ಯವಸ್ಥಾಪಕ, ಪಂಡಿತ ಹೇಮಂತ ಆಚಾರ್ಯ ಗುಡಿ ಮಾತನಾಡಿ, ಶ್ರೀಗಳ ಅನುಗ್ರಹ ಮತ್ತು ಮಾರ್ಗದರ್ಶನದಿಂದಲೇ ಧ್ಯಾನ ಕೇಂದ್ರದಲ್ಲಿ ನಿರಂತರ ಚಟುವಟಿಕೆಗಳು ನಡೆಯುತ್ತಿವೆ. ಅವರು ಕೃಪೆ ಮಾಡಿ 10 ದಿನಗಳ ಕಾಲ ಇಲ್ಲಿಯೇ ಇದ್ದು ಜ್ಞಾನ ಯಜ್ಞವನ್ನು ನೆರವೇರಿಸಿಕೊಡಬೇಕು. ಮೈಸೂರು ನಗರದ ಭಕ್ತ ಗಣವೂ ಇದನ್ನೇ ಅಪೇಕ್ಷೆ ಮಾಡುತ್ತಿದೆ ಎಂದರು.

ಧ್ಯಾನ ಕೇಂದ್ರದ ಎಂಟನೇ ವಾರ್ಷಿಕೋತ್ಸವದಲ್ಲಿ ಭಕ್ತ ಜನ ಸಂಗಮ

ವಿದ್ವಾಂಸರಾದ ಬಾದರಾಯಣಾಚಾರ್ಯ, ಅನಿರುದ್ಧಾಚಾರ್ಯ, ಹರೀಶ ಆಚಾರ್ಯ ಮತ್ತು ಧ್ಯಾನ ಕೇಂದ್ರದ ಕಾರ್ಯಕರ್ತರು ಇದ್ದರು. ನೂರಾರು ಭಕ್ತರು ಶ್ರೀಗಳಿಗೆ ಪಾದಪೂಜೆ ಮಾಡಿ ಮುದ್ರಾಧಾರಣೆ ಮಾಡಿಸಿಕೊಂಡರು.

ಮೈಸೂರಿನ ಶ್ರೀರಾಮಪುರದಲ್ಲಿರುವ ಶ್ರೀವೆಂಕಟೇಶ್ವರ ಧ್ಯಾನ ಕೇಂದ್ರದ 8ನೇ ವಾರ್ಷಿಕೋತ್ಸವದ ಸರಣಿ ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಶನಿವಾರ ಬೆಳಗ್ಗೆ ಶ್ರೀ ವೆಂಕಟೇಶ ದೇವರಿಗೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಶ್ರೀ ವೆಂಕಟೇಶ ದೇವರಿಗೆ ಮಹಾ ಕ್ಷೀರಾಭಿಷೇಕ, ಫಲ ಪಂಚಾಮೃತ ಅಭಿಷೇಕ ನೆರವೇರಿಸಿದರು. ವಿದ್ವಾಂಸರಾದ ಬಾದರಾಯಣಾಚಾರ್ಯ, ಹೇಮಂತ ಆಚಾರ್ಯ ಗುಡಿ ಇತರರು ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: Kannada News WebsiteLatest News KannadamysoreSri Satyatma Thirtha SwamijiUttaradi Mathaಅನುಸಂಧಾನಉತ್ತರಾದಿ ಮಠಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಮೈಸೂರುಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಶ್ರೀರಾಮಪುರಶ್ರೀವೆಂಕಟೇಶ್ವರ ಧ್ಯಾನ ಕೇಂದ್ರ
Share213Tweet133Send
Aniruddha Vasishta S R

Aniruddha Vasishta S R

Editor-in-Chief

Previous Post

ದೇಶದ ಅಭಿವೃದ್ಧಿಗೆ ವಿದ್ಯಾವಂತ ಯುವಕರ ಪಾತ್ರ ಅತ್ಯವಶ್ಯ : ಡಾ. ಕೆ.ರಾಘವೇಂದ್ರ ಪೈ ಕರೆ

Next Post

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರೆಂಟಿ ಬಡವರಿಗೆ ಆಸರೆಯಾಗಿದೆ | ಸಚಿವ ಭೈರತಿ ಸುರೇಶ್ 

kalpa News

kalpa News

Next Post
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರೆಂಟಿ ಬಡವರಿಗೆ ಆಸರೆಯಾಗಿದೆ | ಸಚಿವ ಭೈರತಿ ಸುರೇಶ್ 

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರೆಂಟಿ ಬಡವರಿಗೆ ಆಸರೆಯಾಗಿದೆ | ಸಚಿವ ಭೈರತಿ ಸುರೇಶ್ 

Comments 1

  1. Pingback: ದಾವಣಗೆರೆ | ವೈದ್ಯಕೀಯ ಮೈಲಿಗಲ್ಲು | ಎಸ್ಎಸ್ ನಾರಾಯಣ ಆಸ್ಪತ್ರೆಯಲ್ಲಿ ಮಧ್ಯ ಕರ್ನಾಟಕದ ಮೊದಲ 'ಬೆಂಟಾಲ್' ಶಸ್

Leave a Reply Cancel reply

Your email address will not be published. Required fields are marked *

No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!