No Result
View All Result
ಪಶ್ಚಿಮ ಬಂಗಾಳದಲ್ಲಿ 200ರ ಗಡಿ ಮುಟ್ಟಿ ಇತಿಹಾಸ ನಿರ್ಮಿಸಿದ ಬಿಜೆಪಿ | ಟಿಎಂಸಿ ಧೂಳಿಪಟ
English Articles

Political Turmoil in Tamil Nadu: BJP Faces Wave of Resignations

by ಕಲ್ಪ ನ್ಯೂಸ್
June 6, 2026
0

Kalpa Media House  |  Chennai  | A major political development is unfolding in Tamil Nadu as a series of resignations...

Read moreDetails
ಶಿವಮೊಗ್ಗಕ್ಕೆ ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನ ಸೇವೆಯೂ ಸ್ಥಗಿತ | ಕಾರಣವೇನು?

SpiceJet Flights to Shivamogga Suspended After IndiGo Exit | What’s the Reason?

June 6, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

India Dominates World Yogasana Championship 2026, Wins 5 Golds on Opening Day

June 6, 2026
INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

June 5, 2026
From the Village Tracks to International Triumphs: The Inspiring Saga of Geetha A. Shetty

From the Village Tracks to International Triumphs: The Inspiring Saga of Geetha A. Shetty

June 5, 2026
  • Advertise With Us
  • Grievances
  • About Us
  • Contact Us
Sunday, June 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಕನ್ನಡ ನಾಡಿಗೆ ಶ್ರೀ ವ್ಯಾಸರಾಜರ ಕೊಡುಗೆ ಅನನ್ಯ | ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರ ಪ್ರಶಂಸೆ

ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥರಿಗೆ ದೇಶದ ವಿವಿಧ ಪವಿತ್ರ ನದಿಗಳ ಜಲಾಭಿಷೇಕ- ಮುತ್ತು ರತ್ನಗಳ ಅಭಿಷೇಕ | ವಿವಿಧ ಮಠಾಧೀಶರ ಸಾನ್ನಿಧ್ಯ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 9, 2024
in ಮೈಸೂರು
0
ಕನ್ನಡ ನಾಡಿಗೆ ಶ್ರೀ ವ್ಯಾಸರಾಜರ ಕೊಡುಗೆ ಅನನ್ಯ | ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರ ಪ್ರಶಂಸೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ವಿಜಯನಗರ ಸಾಮ್ರಾಜ್ಯವನನ್ನು ಸಮರ್ಥವಾಗಿ ಆಳುವುದರೊಂದಿಗೆ ಆರು ನೂರು ವರ್ಷಗಳ ಹಿಂದೆ ಹಿಂದು ಸಮಾಜವನ್ನು ಒಗ್ಗೂಡಿಸಿ ಮುನ್ನಡೆಸುವಲ್ಲಿ ಶ್ರೀ ವ್ಯಾಸರಾಜ ಸ್ವಾಮಿಗಳ ಪಾತ್ರ ಅನನ್ಯವಾಗಿದೆ ಎಂದು ಶ್ರೀ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಹೇಳಿದರು.

ಜೆ.ಪಿ. ನಗರದ ಶ್ರೀ ವಿಠಲಧಾಮದ ಆವರಣದಲ್ಲಿ ಸೋಸಲೆ ಶ್ರೀ ವ್ಯಾಸರಾಜಮಠ, ಶ್ರೀವ್ಯಾಸತೀರ್ಥ ವಿದ್ಯಾಪೀಠದ ವತಿಯಿಂದ ಹಮ್ಮಿಕೊಂಡಿರುವ ಶ್ರೀಮನ್ ನ್ಯಾಯಸುಧಾಮಂಗಳ ಮಹೋತ್ಸವ, ಯತಿ ಸಮಾವೇಶ ಮತ್ತು ಶ್ರೀ ವಿದ್ಯಾಶ್ರೀಶ ತೀರ್ಥರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ವಿವಿಧ ನದಿಗಳ ಪವಿತ್ರ ಜಲಗಳ ಅಭಿಷೇಕ ಮತ್ತು ಮುತ್ತು ರತ್ನಗಳ ಅಭಿಷೇಕ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಸಹಸ್ರ ಚಂದ್ರ ದರ್ಶನ ಶಾಂತಿ ಅಂಗವಾಗಿ ಸೋಸಲೆ ಶ್ರೀವಿದ್ಯಾಶ್ರೀಶ ತೀರ್ಥರಿಗೆ ವಿವಿಧ ಮಠಾಧೀಶರು ಭಾನುವಾರ ರಾಷ್ಟ್ರದ ಪ್ರಮುಖ ನದಿಗಳ ಪವಿತ್ರ ಜಲದ ಅಭಿಷೇಕವನ್ನು ನೆರವೇರಿಸಿದರು. ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿ ತೀರ್ಥರು, ಮಂತ್ರಾಲಯ ರಾಯರ ಮಠದ ಶ್ರೀ ಸುಬುಧೇಂದ್ರ ತೀರ್ಥರು, ಬಾಳಗಾರು ಕಿರಿಯ ಶ್ರೀ ರಾಮಪ್ರಿಯ ತೀರ್ಥರು ಹಾಜರಿದ್ದರು.

ವಿಜಯನಗರದ ಮಹಾ ಸಾಮ್ರಾಟ ಕೃಷ್ಣದೇವರಾಜನಿಗೆ ಕುಜಯೋಗ ಬಂದಾಗ ತಾವೇ ಸಿಂಹಾಸನದಲ್ಲಿ ಕುಳಿತು ರಾಜ್ಯಭಾರ ಮಾಡಿದ ಏಕೈಕ ಯತಿ ಶ್ರೀ ವ್ಯಾಸರಾಜರು ಧಾರ್ಮಿಕ ರಂಗದೊಂದಿಗೆ ನಾಡಿಗೂ ಅಪಾರವಾದ ಸೇವೆಯನ್ನೂ ಮಾಡಿದ್ದಾರೆ. ಹಾಗಾಗಿ ಪ್ರತಿಯೊಬ್ಬ ಕನ್ನಡಿಗರೂ ವ್ಯಾಸರಾಜರ ಸ್ಮರಣೆ ಮಾಡಲೇಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅದನ್ನು ಪಾಲಿಸಬೇಕು. ವ್ಯಾಸರಾಜರ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸೋದೆ ಶ್ರೀಗಳು ಸಲಹೆ ನೀಡಿದರು.

 

ಭ್ರಮೆಯಲ್ಲಿ ಬದುಕಬೇಡಿ
ಆಧುನಿಕ ಕಾಲದಲ್ಲಿ ಬುದ್ಧಿವಂತಿಕೆಯ ಭ್ರಮೆಯನ್ನು ಹೊಂದಿದ್ದೇವೆ. ಧರ್ಮದ ಶ್ರದ್ಧೆ ಕೊರತೆ ಕಾಣುತ್ತಿದ್ದೇವೆ. ನಾನು, ನನ್ನದು ಎನ್ನುವ ಮೂಲಕ ಧರ್ಮದ ಹಾದಿಯಲ್ಲಿ ಸಾಗದೆ ಅವನತಿ ಹೊಂದುತ್ತಿದ್ದೇವೆ. ಅತಿ ಬುದ್ಧಿವಂತಿಕೆ ದೊಡ್ಡ ಅಪಾಯ ಎಂದು ಅವರು ಕಿವಿಮಾತು ಹೇಳಿದರು.

ಶ್ರೀ ಸುಧಾ ಪಂಡಿತ ಕೀರ್ತಿಗೆ ಭಾಜನರಾದ ನಾಲ್ವರು ವಿದ್ಯಾರ್ಥಿಗಳು ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರಿಗೆ ಗೌರವ ಸಮರ್ಪಿಸುತ್ತಿರುವುದು.

ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಭಾರತೀಯರ ಕಣ ಕಣ ದಲ್ಲೂ ದೇವರು ಇದ್ದಾನೆ. ಭಗವಂತ ಮತ್ತು ಜನರ ನಡುವೆ ದೊಡ್ಡ ನಂಬಿಕೆ ಇದೆ. ಎಲ್ಲರೂ ನಮ್ಮವರೇ ಎಂದು ಭಾವಿಸಿದರೆ ದೇಶ ಪ್ರಗತಿಯತ್ತ ಸಾಗುತ್ತದೆ. ನಂಬಿಕೆ ಇದ್ದರೆ ದೇವರು ಒಲಿಯುತ್ತಾನೆ ಎಂದರು. ಹಂಪಿಯ (ವಿಜಯನಗರ ಸಾಮ್ರಾಜ್ಯದ ) ಸುವರ್ಣ ಯುಗವನ್ನು ಜ್ಞಾಪಿಸುವ ರೀತಿಯಲ್ಲಿ ವ್ಯಾಸರಾಜ ಮಠ ಸೇವಾ, ಸಾಧನೆ ಮಾಡುತ್ತಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಸೋಸಲೆ ಮಠದ ಶ್ರೀ ನ್ಯಾಯ ಸುಧಾ ಮಂಗಳ ಮಹೋತ್ಸವಕ್ಕೆ ಸಾಕ್ಷಿಯಾದ ಭಕ್ತ ಜನಕೋಟಿ

ವಿವಿಧ ಮಠಾಧೀಶರು ಸಾಕ್ಷಿ
ಸೋಸಲೆ ಶ್ರೀಗಳ ಸಹಸ್ರ ಚಂದ್ರದರ್ಶನ ಶಾಂತಿ ಕಾರ್ಯಕ್ರಮ ಮತ್ತು ಮುತ್ತು ರತ್ನಗಳ ಅಭಿಷೇಕಕ್ಕೆ ಮಂತ್ರಾಲಯ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರತೀರ್ಥರು, ಮುಳಬಾಗಿಲು ಮಠದ ಶ್ರೀ ಸುಜಯನಿಧಿ ತೀರ್ಥರು, ಬಾಳಗಾರು ಕಿರಿಯ ಶ್ರೀ ರಾಮಪ್ರಿಯ ತೀರ್ಥರು, ಕಣ್ವಮಠದ ಶ್ರೀ ವಿದ್ಯಾಕಣ್ವವಿರಾಜ ತೀರ್ಥರು, ಶ್ರೀ ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥರು, ಶ್ರೀಕಾಗಿನೆಲೆ ನಿರಂಜನಾಪುರಿ ಸ್ವಾಮೀಜಿ, ಪರಕಾಲಮಠದ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿ, ಅವಧೂತ ದತ್ತಪೀಠದ ಶ್ರೀದತ್ತ ವಿಜಯಾನಂದತೀರ್ಥರು, ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ, ತಿರುಪತಿ ತಿರುಮಲ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಧರ್ಮಾರೆಡ್ಡಿ, ಶ್ರೀ ವ್ಯಾಸರಾಜಮಠ ಸಲಹಾ ಸಮಿತಿ ಅಧ್ಯಕ್ಷ ಕೆ.ಜಯರಾಜ್, ಆಡಳಿತಾಧಿಕಾರಿ ಸಿ.ಎಸ್. ಸುರಂಜನ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಇತರರು ಇದ್ದರು.

ಮೈಸೂರಿನ ವಿಠಲಧಾಮದ ಆವರಣದಲ್ಲಿ ಹಮ್ಮಿಕೊಂಡಿರುವ ಶ್ರೀಮನ್ ನ್ಯಾಯಸುಧಾಮಂಗಳ ಮಹೋತ್ಸವ ಸಹಸ್ರ ಚಂದ್ರದರ್ಶನ ಶಾಂತಿ ಸಮಾರಂಭದಲ್ಲಿ ಶ್ರೀ ವಿದ್ಯಾಶ್ರೀಶತೀರ್ಥರಿಗೆ ವಿವಿಧ ಮಠಾಧೀಶರು ದೇಶದ ವಿವಿಧ ನದಿಗಳ ಪವಿತ್ರ ಜಲದಿಂದ ಅಭಿಷೇಕ ಮಾಡಿದರು. ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯ ನಿಧಿ ತೀರ್ಥರು, ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರು, ಶ್ರೀಸೋದೆಮಠದ ಶ್ರೀ ವಿಶ್ವವಲ್ಲಭ ತೀರ್ಥರು ಹಾಜರಿದ್ದರು.ಶ್ರೀ ವಿದ್ಯಾಶ್ರೀಶತೀರ್ಥರಿಗೆ ವಿವಿಧ ಮಠಾಧೀಶರು ಮುತ್ತು ರತ್ನಗಳ ಅಭಿಷೇಕ ಮಾಡಿದರು. ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯ ನಿಧಿ ತೀರ್ಥರು, ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರು, ಶ್ರೀಸೋದೆಮಠದ ಶ್ರೀ ವಿಶ್ವವಲ್ಲಭ ತೀರ್ಥರು ಹಾಜರಿದ್ದರು.

ಪ್ರಸಾದ ಪ್ರದಾನ
ಇದೇ ಸಂದರ್ಭ ದೇಶದ ವಿವಿಧ ಪುಣ್ಯ ಕ್ಷೇತ್ರದ ಪ್ರಸಾದ ಮತ್ತು ದೇವರ ವಸ್ತ್ರಗಳನ್ನು ಸೋಸಲೆ ಶ್ರೀಗಳಿಗೆ ಸಮರ್ಪಿಸಲಾಯಿತು. ತಿರುಮಲ ತಿರುಪತಿ, ಕಂಚಿ, ಪಂಢರಾಪುರ, ಶ್ರೀಮುಷ್ಣಂನಿಂದ ಆಗಮಿಸಿದ್ದ ಪ್ರಧಾನ ಅರ್ಚಕರು ಆಯಾ ಸನ್ನಿಧಿಗಳ ಪ್ರಸಾದ ನೀಡಿ ಧನ್ಯತೆ ಮೆರೆದರು.
ಸಾಂಪ್ರದಾಯಿಕ ದರ್ಬಾರ್
ಭವ್ಯ ರಜತ ಸಿಂಹಾಸನದಲ್ಲಿ ಶ್ರೀ ವ್ಯಾಸರಾಜರಿಗೆ ಭಾನುವಾರ ಸಂಜೆ ಸಾಂಪ್ರದಾಯಿಕ ದರ್ಬಾರ್ ನಡೆಸಲಾ ಯಿತು. ಆಕರ್ಷಕ ಸಿಂಹಾಸನದಲ್ಲಿ ಪ್ರತಿಷ್ಠಾಪಿಸಿದ್ದ ಶ್ರಿವ್ಯಾಸರಾಜರ ಮೂರ್ತಿಗೆ ವಿಶೇಷ ಅಲಂಕಾರ ವಾಡಿ ದರ್ಬಾರ್ ನಡೆಸಿದ್ದು ಗಮನ ಸೆಳೆಯಿತು. ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿ ಆದರು.

ಪ್ರಶಸ್ತಿ ಪ್ರದಾನ
ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಡಾ.ಶ್ರೀನಿವಾಸ ವರಖೇಡಿ, ಪೇಜಾವರ ಶ್ರೀಧಾಮದ ನಿರ್ವಾಹಕ ಎಚ್.ಎಂ.ಗುರುನಾಥ್, ದಾಸ ಸಾಹಿತ್ಯ ಸಂಶೋಧಕಿ ಟಿ.ಎಸ್. ನಾಗರತ್ನ ಅವರಿಗೆ ಸೋಸಲೆ ಮಠದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

 

Tags: Kannada News WebsiteLatest News KannadamysoreVyasaraja Mathaಮಂತ್ರಾಲಯಮುಳಬಾಗಿಲುಮೈಸೂರುವಿಜಯನಗರವಿಜಯನಗರ ಸಾಮ್ರಾಜ್ಯಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿಶ್ರೀ ವ್ಯಾಸರಾಜ ಸ್ವಾಮಿಶ್ರೀ ವ್ಯಾಸರಾಜಮಠಶ್ರೀ ಸುಜಯನಿಧಿ ತೀರ್ಥರುಶ್ರೀ ಸುಬುಧೇಂದ್ರ ತೀರ್ಥರುಶ್ರೀ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರುಶ್ರೀಪಾದರಾಜರ ಮಠಸೋಸಲೆ
Share205Tweet123Send
Previous Post

ಮೋದಿ-ಕುಮಾರಣ್ಣ ಪ್ರಮಾಣವಚನ | ಶಿವಮೊಗ್ಗದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಂಭ್ರಮಾಚರಣೆ

Next Post

ಕುಮಾರ್ ಬಂಗಾರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿ ಗೂಂಡಾ ವರ್ತನೆ ಹಿನ್ನೆಲೆ: ಬಿಜೆಪಿ ಪ್ರತಿಭಟನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕುಮಾರ್ ಬಂಗಾರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿ ಗೂಂಡಾ ವರ್ತನೆ ಹಿನ್ನೆಲೆ: ಬಿಜೆಪಿ ಪ್ರತಿಭಟನೆ

ಕುಮಾರ್ ಬಂಗಾರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿ ಗೂಂಡಾ ವರ್ತನೆ ಹಿನ್ನೆಲೆ: ಬಿಜೆಪಿ ಪ್ರತಿಭಟನೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಹುಬ್ಬಳ್ಳಿ | ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದ ಡಿಆರ್‌ಎಂ ಬೇಲಾ ಮೀನಾ

ಹುಬ್ಬಳ್ಳಿ | ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದ ಡಿಆರ್‌ಎಂ ಬೇಲಾ ಮೀನಾ

June 7, 2026
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ | ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ

ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ | ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ

June 7, 2026
ವೆಂಕಟಾಚಲಧಾಮದ 15ನೇ ವಾರ್ಷಿಕೋತ್ಸವ | ಚಿನ್ನದ ಕಿರೀಟ ಸಮರ್ಪಣೆ

ವೆಂಕಟಾಚಲಧಾಮದ 15ನೇ ವಾರ್ಷಿಕೋತ್ಸವ | ಚಿನ್ನದ ಕಿರೀಟ ಸಮರ್ಪಣೆ

June 6, 2026
ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದ ಕುಮದ್ವತಿ ರೆಸಿಡೆನ್ಷಿಯಲ್ ಸ್ಕೂಲ್ | ಹೇಗಿತ್ತು ಆಚರಣೆ?

ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದ ಕುಮದ್ವತಿ ರೆಸಿಡೆನ್ಷಿಯಲ್ ಸ್ಕೂಲ್ | ಹೇಗಿತ್ತು ಆಚರಣೆ?

June 6, 2026
ಯುಗಾದಿ | ಯಶವಂತಪುರ-ಹೊಸಪೇಟೆ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು

ತಾಳಗುಪ್ಪ-ಶಿವಮೊಗ್ಗ-ಮೈಸೂರಿನ ನಾಲ್ಕು ರೈಲುಗಳ ಕುರಿತಾಗಿ ಅಪ್ಡೇಟ್

June 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL