ಕಲ್ಪ ಮೀಡಿಯಾ ಹೌಸ್ | ಮೈಸೂರು |
ಪ್ರತಿಯೊಬ್ಬರೂ ತಮ್ಮ ಜಿಲ್ಲೆಯ ಮೂಲ ಗ್ರಾಮೀಣ ಭಾಷೆಯನ್ನು #RuralLanguage ಮರೆಯದೇ ಮಕ್ಕಳಿಗೆ ಕಲಿಸಬೇಕು ಎಂದು ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಕರೆ ನೀಡಿದರು.
ಮೈಸೂರಿನ #Mysore ಶ್ರೀರಾಂಪುರ ಪಟ್ಟಣ ಪಂಚಾಯ್ತಿಯ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವದಲ್ಲಿ #KannadaRajyotsava ಅವರು ಮಾತನಾಡಿದರು.

ಮೈಸೂರು-ಬೆಂಗಳೂರು #Bengaluru ಪ್ರದೇಶಗಳಲ್ಲಿ ವಾಸಮಾಡುವ ಶೇ. 60 ರಷ್ಟು ಜನ ಬೇರೆ ಬೇರೆ ಜಿಲ್ಲೆಗಳಿಂದ ಬಂದವರು ಅವರೆಲ್ಲರೂ ಅವರ ಜಿಲ್ಲೆಯ ಮೂಲ ಗ್ರಾಮೀಣ ಭಾಷೆಯನ್ನು ಮರೆಯಬಾರದು, ಮಕ್ಕಳಿಗೆ ಕಲಿಸಬೇಕು ಎಂದು ಸಲಹೆ ನೀಡಿದರು.

50 ಸಸಿಗಳನ್ನು ಉದ್ಯಾನವನದಲ್ಲಿ ನೆಟ್ಟು ಮಾತನಾಡಿದ ಪಿ.ಟಿ. ಮಹೇಶಪ್ಪ, ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ #Karnataka ಎಂದು ನಾಮಕರಣ ಮಾಡಿ 50 ವರ್ಷಗಳಾಯಿತು. ಅದರ ನೆನಪಿಗಾಗಿ ದಸರಾದಿಂದ ಪ್ರಾರಂಭ ಮಾಡಿ ಇಂದಿನವರೆಗೂ 50 ಗಿಡಗಳನ್ನು ಉದ್ಯಾನವನದಲ್ಲಿ ನೆಟ್ಟು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಈ ಉದ್ಯಾನವನದಲ್ಲಿ ಎಲ್ಲರೂ ವಾಯುವಿಹಾರ, ವ್ಯಾಯಾಮಗಳನ್ನು ಮಾಡಿ ಬಳಸಿಕೊಳ್ಳಬೇಕು ಹಾಗೂ ಉದ್ಯಾನವನದಲ್ಲಿ ಗಿಡಗಳನ್ನು ಪೋಷಿಸಬೇಕು ಎಂದು ತಿಳಿಸಿದರು.

ಕುಮಾರಿ ವರ್ಷ ರಮೇಶ್ ಭರತನಾಟ್ಯ, ಅಂಕಿತ ಹಾಗೂ ಸಂಜನಾ ನೃತ್ಯ ಪ್ರದರ್ಶಿಸಿದರು. ಕೃಷ್ಣ ಕೊಳಲು ವಾದನ ಮಾಡಿ, ಬಡಾವಣೆಯ ಚಿಣ್ಣರು ನೃತ್ಯ ಪ್ರದರ್ಶನ ಮಾಡಿದರು. ಪೃಥು ಪಿ. ಅದ್ದೈತ್ ಹಾಗೂ ರಾಘವ ಕನ್ನಡ ಹಾಡುಗಳನ್ನು ಹಾಡಿದರು. ಹರಣ್ ಅವರು ಯೋಗ ಪ್ರದರ್ಶನ ಮಾಡಿದರು.

ಪೃಥು ಪಿ. ಅದ್ದೈತ್ ಪ್ರಾರ್ಥಿಸಿ, ಬಡಾವಣೆಯ ಎಲ್ಲಾ ಮಕ್ಕಳು ಸೇರಿ ಕನ್ನಡದ ದೀಪವನ್ನು ಪ್ರಜ್ವಲಿಸಿದರು. ಎ.ಎನ್. ರಾಮಕೃಷ್ಣ, ನಾಗಭೂಷಣ್ ಆಚಾರ್, ನಾಗರಾಜ್, ಪರಮೇಶ್ವರ್, ಶ್ರೀಧರ್ ಹಾಗೂ ಮಹೇಶಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುನೀತ್ ಜಿ ಕಾರ್ಯಕ್ರಮದ ನಿರೂಪಿಸಿ, ಪಾರ್ಶ್ವನಾಥ ಸ್ವಾಗತ ಭಾಷಣ ಮಾಡಿದರು. ರಚನಾ ವಂದನಾರ್ಪಣೆ ಮಾಡಿದರು. ಬಡಾವಣೆಯ ಎಲ್ಲಾ ನಿವಾಸಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post