ಕಲ್ಪ ಮೀಡಿಯಾ ಹೌಸ್ | ನಂಜನಗೂಡು/ಬೆಂಗಳೂರು |
ತಮ್ಮ 36ನೆಯ ಚಾತುರ್ಮಾಸ್ಯವನ್ನು ಅತ್ಯಂತ ಅಭೂತಪೂರ್ವವಾಗಿ ಸಂಪನ್ನಗೊಳಿಸಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು Vishwaprasanna Thirtha Shri ನಂಜನಗೂಡಿನ ಕಪಿಲಾ ನದಿಯಲ್ಲಿ ಸೀಮೋಲ್ಲಂಘನ ಮಾಡಿದರು.
ಮೈಸೂರಿನ ಕೃಷ್ಣಧಾಮದಿಂದ ನಂಜನಗೂಡಿಗೆ ತೆರಳಿದ ಶ್ರೀಗಳು, ಕಪಿಲಾ ನದಿತೀರದಲ್ಲಿ ನದಿಗೆ ಹಾಲು, ಅರಿಶಿನ ಕುಂಕುಮ, ಪುಷ್ಪ ಸಹಿತ ಬಾಗಿನ ಅರ್ಪಿಸಿ ಮಂಗಳಾರತಿ ಮಾಡಿದರು.
ಆನಂತರ ಅಲಂಕೃತ ತೆಪ್ಪದಲ್ಲಿ ಕುಳಿತು ನದಿಯ ಇನ್ನೊಂದು ದಡವನ್ನು ತಲುಪುವ ಮೂಲಕ ಸೀಮೋಲ್ಲಂಘನ ವಿಧಿ ಪೂರೈಸಿದರು.
ನಂಜನಗೂಡು ಶ್ರೀರಾಘವೇಂದ್ರ ಮಠಕ್ಕೆ ತೆರಳಿ ಗುರುರಾಯರ ಮೃತ್ತಿಕಾ ವೃಂದಾವನ ದರ್ಶನ ಪಡೆದ ಶ್ರೀಗಳು ಪೇಜಾವರ ಮಠದ ಕೃಷ್ಣ ಮಠದಲ್ಲಿ ಪೂಜೆ ನೆರವೇರಿಸಿದರು. ಈ ಮೂಲಕ ಶ್ರೀಗಳ ಈ ಬಾರಿಯ ಚಾತುರ್ಮಾಸ್ಯ ವ್ರತ ಅಧಿಕೃತವಾಗಿ ಸಮಾಪನಗೊಂಡಿತು.
Also read: PHDCCI should focus on maximizing youth & women’s benefits from Modi govt policies: Amit Shah
ಅಪೂರ್ವವಾಗಿ ತಮ್ಮ 36ನೆಯ ಚಾರ್ತುಮಾಸ್ಯ ವ್ರತವನ್ನು Chathurmasa Vratha ಸಂಪನ್ನಗೊಳಿಸಿದ ಶ್ರೀಗಳನ್ನು ಮೈಸೂರಿನ ಭಕ್ತ ಸಮೂಹ ಅತ್ಯಂತ ಭಾವುಕವಾಗಿ ಬೀಳ್ಕೊಟ್ಟರು.
ವಿದ್ಯಾಪೀಠದಲ್ಲಿ ಅದ್ದೂರಿ ಸ್ವಾಗತ
ಮೈಸೂರಿನಲ್ಲಿ ತಮ್ಮ 36ನೆಯ ಚಾರ್ತುಮಾಸ್ಯವನ್ನು ಸಂಪನ್ನಗೊಳಿಸಿ ಬೆಂಗಳೂರಿನಲ್ಲಿರುವ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಆಗಮಿಸಿದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರನ್ನು ಶಿಷ್ಯ ಸಮೂಹ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು.
ನಿನ್ನೆ ರಾತ್ರಿ 11.30ಕ್ಕೆ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ Poornapragna Vidyapeeta ಆಗಮಿಸಿದ ಶ್ರೀಗಳನ್ನು ಅವರ ಪ್ರೀತಿಯ ಶಿಷ್ಯರು ಅತ್ಯಂತ ಸಂತೋಷದಿAದ ಪುಷ್ಪವೃಷ್ಠಿ, ಅರಳು ಹಾಕಿ, ಜೈಕಾರ ಹಾಕಿ ಬರಮಾಡಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post