ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮಹಾರಾಷ್ಟ್ರದಲ್ಲಿ #Maharashtra ಬಿಜೆಪಿ ನೇತೃತ್ವದ ಮಹಾಯುತಿ #Mahayuthi ಬಹುಮತದತ್ತ ದಾಪುಗಾಲಿಟ್ಟಿದ್ದು, ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದ ಮಹಾವಿಕಾಸ ಆಘಾಡಿ (ಎಂವಿಎ) #MVA ಮೈತ್ರಿಕೂಟ ತೀವ್ರ ಮುಖಭಂಗಕ್ಕೊಳಗಾಗಿದೆ.
ಚುನಾವಣಾ ಆಯೋಗದ ಇತ್ತೀಚಿನ ಅಂಕಿಅಂಶಗಳ ಪ್ರಕಾರ 288 ವಿಧಾನಸಭಾ ಸ್ಥಾನಗಳಲ್ಲಿ 128ರಲ್ಲಿ ಮುನ್ನಡೆ ಸಾಧಿಸುತ್ತಿದೆ. ಬಿಜೆಪಿ ಅಭ್ಯರ್ಥಿಗಳು 123 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಮತ್ತು ಮುಂಬೈನ ವಡಾಲಾ ಸ್ಥಾನವನ್ನು, ಶಿವಸೇನೆ 55 ಮತ್ತು ಎನ್‌ಸಿಪಿ 38 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ವರದಿಯಾಗಿದೆ.
Also read: ಉಪಚುನಾವಣೆ | ಬಿಜೆಪಿ ಸೋಲಿಗೆ ಇದೇ ಕಾರಣ: ವಿಪಕ್ಷ ನಾಯಕ ಆರ್. ಅಶೋಕ್
ಎಂವಿಎಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಶರದ್ ಪವಾರ್) ಅಭ್ಯರ್ಥಿಗಳು 13 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ತಲಾ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post