No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Friday, October 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಕ್ರೀಡೆ

ನ. 7-9 | ಕೋರಮಂಗಲ ಕ್ರೀಡಾಂಗಣದಲ್ಲಿ 2ನೇ ರಾಷ್ಟ್ರೀಯ ಸಾಂಸ್ಕೃತಿಕ ಪೈಥಿಯನ್ ಕ್ರೀಡಾಕೂಟ-2025

ಆಧುನಿಕ ಗದಾ ಯುದ್ಧ, ತಾಯ್ಕ್ವಾಂಡೋ, ಗೋಣಿ ಚೀಲ ಓಟ, ಕಪ್ಪೆ ಜಿಗಿತ, ಟೆನಿಸ್ ಸೇರಿ ಬಗೆ ಬಗೆಯ ಆಟೋಟಗಳ ಸಂಭ್ರಮ

kalpa News by kalpa News
September 20, 2025
in ಕ್ರೀಡೆ
0
ನ. 7-9 | ಕೋರಮಂಗಲ ಕ್ರೀಡಾಂಗಣದಲ್ಲಿ 2ನೇ ರಾಷ್ಟ್ರೀಯ ಸಾಂಸ್ಕೃತಿಕ ಪೈಥಿಯನ್ ಕ್ರೀಡಾಕೂಟ-2025
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನವೆಂಬರ್ 7 ರಿಂದ 9ರ ವರೆಗೆ ಕ್ರಿಕೆಟ್, ಪ್ರಾಚೀನ ಸಮರ ಕಲೆಗಳು, ಪಾರಂಪರಿಕ ಆಟೋಟಗಳು, ನೃತ್ಯ, ಸಂಗೀತ, ಸಂಸ್ಕೃತಿಕ ಸ್ಪರ್ಧೆಗಳನ್ನೊಳಗೊಂಡ ಹಲವು ವೈಶಿಷ್ಟ್ಯಗಳನ್ನು ಒಂದೇ ವೇದಿಕೆಯಡಿ ಪ್ರಸ್ತುತಪಡಿಸುವ 2ನೇ ರಾಷ್ಟ್ರೀಯ ಸಾಂಸ್ಕೃತಿಕ ಪೈಥಿಯನ್ ಕ್ರೀಡಾಕೂಟ 2025 ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೈಥಿಯನ್ ಕ್ರೀಡಾಕೂಟಗಳ ಸಂಸ್ಥಾಪಕರಾದ ಬಿಜೇಂದರ್ ಗೋಯಲ್ ಅವರು, ಮೂರು ದಿನಗಳ ಕಾಲ ಆಧುನಿಕ ಗದಾ ಯುದ್ಧ, ತಾಯ್ಕ್ವಾಂಡೋ, ಗೋಣಿ ಚೀಲ ಓಟ, ಕಪ್ಪೆ ಜಿಗಿತ, ಟೆನಿಸ್, ವಾಲಿಬಾಲ್, ಸೈಕ್ಲೋಥಾನ್, ಮ್ಯಾರಥಾನ್ ಸೇರಿ ಎಂಟು ಬಗೆಯ ಕಲಾ ಪ್ರಕಾರಗಳ ಕ್ರೀಡಾ ಕೂಟ ನಡೆಯಲಿದ್ದು, ದೇಶ, ವಿದೇಶಗಳ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕ್ರೀಡಾ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೈಥಿಯನ್ ಕ್ರೀಡೆಗಳು ಪ್ರಾಚೀನ ಗ್ರೀಸ್ನಿಂದ ಜನ್ಮ ತಳೆದಿದ್ದು, ಇದು ಒಲಿಂಪಿಕ್ಸ್’ನೊಂದಿಗೆ ಪ್ರಮುಖ ಪಾನ್-ಹೆಲ್ಲೆನಿಕ್ ಹಬ್ಬಗಳಲ್ಲಿ ಒಂದಾಗಿದೆ. ಪೈಥಿಯನ್ ಕ್ರೀಡೆಗಳು ಜಗತ್ತಿನ ಅತ್ಯಂತ ಹಳೆಯ ಸಾಂಸ್ಕೃತಿಕ ಕ್ರೀಡಾಕೂಟಗಳಾಗಿದ್ದು, 2600 ವರ್ಷಗಳ ಹಳೆಯ ಪರಂಪರೆಯನ್ನು ಆಧುನಿಕ ರೂಪದಲ್ಲಿ ಜೀವಂತಗೊಳಿಸುತ್ತಿದ್ದೇವೆ ಎಂದರು.
ಪೈಥಿಯನ್ ಕ್ರೀಡೆ ಜಾಗತಿಕ ಚಳುವಳಿಯಾಗಿದ್ದು, ಇದು ಪ್ರಾಚೀನ ಪರಂಪರೆ ಮತ್ತು ಆಧುನಿಕತೆಯ ನಡುವೆ ಸೇತುವೆ ನಿರ್ಮಿಸುತ್ತದೆ. ಕಲಾವಿದರು, ಕಲಾಪ್ರದರ್ಶಕರು, ಸಂಪ್ರದಾಯಿಕ ಆಟಗಾರರು ಮತ್ತು ಯುವ ಸಮೂಹವನ್ನು ಒಟ್ಟುಗೂಡಿಸುತ್ತದೆ. ತಮ್ಮೂಲಕ ಜಾಗತಿಕ ಸಾಂಸ್ಕೃತಿಕ ಮಾರುಕಟ್ಟೆಯಲ್ಲಿ ಭವಿಷ್ಯದಲ್ಲಿ ದೇಶಕ್ಕೆ ಮಹತ್ವದ ಸ್ಥಾನ ದೊರೆಯಲಿದೆ. ಕಳೆದ ವರ್ಷ ಮೊದಲ ಕ್ರೀಡಾಕೂಟ ಪಂಚಕುಲದಲ್ಲಿ ನಡೆದಿದ್ದು, ಐದು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಈ ಬಾರಿ ವಿದೇಶಾಂಗ ಇಲಾಖೆಯ ಸಹಯೋಗದೊಂದಿಗೆ ಕ್ರೀಡಾ ಹಬ್ಬ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಇದಕ್ಕಾಗಿ ವಿಶೇಷ ಒಟಿಟಿ ವೇದಿಕೆಯನ್ನು – https://tv.pythiangames.org ಆರಂಭಿಸಲಾಗಿದ್ದು, ಇಂತಹ ವೈಶಿಷ್ಟ್ಯಪೂರ್ಣ ಸಂಸ್ಕೃತಿಯನ್ನು ಉಳಿಸಲು ಶೀಘ್ರದಲ್ಲೇ “ಪೈಥಿಯನ್” ವಾಹಿಯನ್ನು ಪ್ರಾರಂಭಿಸುತ್ತಿದ್ದೇವೆ. ಇದು ರಾಜ್ಯದ ಸಾಂಸ್ಕೃತಿಕ ಕೀರ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ಪ್ರವಾಸೋದ್ಯಮ, ಸ್ಥಳೀಯ ಆರ್ಥಿಕತೆ ಮತ್ತು ಅಂತರಾಷ್ಟ್ರೀಯ ಮಾನ್ಯತೆಗೂ ಉತ್ತೇಜನ ನೀಡುತ್ತದೆ. ತಂತ್ರಜ್ಞಾನ ಮತ್ತು ಸಂಸ್ಕೃತಿಯ ಕೇಂದ್ರವಾಗಿರುವ ಬೆಂಗಳೂರು, ಈ ಮಹೋತ್ಸವಕ್ಕೆ ಸೂಕ್ತ ವೇದಿಕೆಯಾಗಿದೆ ಎಂದು ಬಿಜೇಂದರ್ ಗೋಯಲ್ ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕ್ರೀಡಾಕೂಟದ ಸಂಘಟನಾ ವಿಭಾಗದ ಅಧ್ಯಕ್ಷ ಬಿ. ಹಚ್. ಅನಿಲ್ ಕುಮಾರ್ ಮಾತನಾಡಿ, ಪೈಥಿಯನ್ ಕ್ರೀಡೆಗಳು ಕಲಾವಿದರು ಮತ್ತು ಸಂಪ್ರದಾಯಿಕ ಆಟಗಾರರಿಗೆ ಸೂಕ್ತ ವೇದಿಕೆಯಾಗಿದೆ. ಇದು ಕಲೆ ಮತ್ತು ಸಂಪ್ರದಾಯಿಕ ಕ್ರೀಡೆಗಳಿಗೆ ಸಮಾನ ಗೌರವ ನೀಡುತ್ತದೆ. ಕರ್ನಾಟಕದ ಕಲಾವಿದರು ಮತ್ತು ಯುವ ಜನಾಂಗಕ್ಕೆ ಇದು ಇತಿಹಾಸ ಸೃಷ್ಟಿಸುವ ಅವಕಾಶ ಎಂದರು.ಹರಿಯಾಣದ ಆಹಾರ ಇಲಾಖೆ ಆಯುಕ್ತರಾದ ರಾಜೇಶ್ ಗೋಪಾಲ್ ಮಾತನಾಡಿ, ಇದು ದೇಶದ ಕ್ರೀಡಾ ಮತ್ತು ಸಾಂಸ್ಕೃತಿ ಬಾಂಧವ್ಯವನ್ನು ಬಲಪಡಿಸಲು ಸೂಕ್ತ ವೇದಿಕೆಯಾಗಿದ್ದು, ಬೆಂಗಳೂರಿನಂತಹ ವೈವಿಧ್ಯಮಯ ನಗರದಲ್ಲಿ ಇಂತಹ ಭವ್ಯ ಕ್ರೀಡಾ ಕೂಟ ನಡೆಯುತ್ತಿರುವುದು ನಿಜಕ್ಕೂ ವಿಶೇಷ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಸ್ನೇಹಾ ವೆಂಕಟ್ರಮಣಿ, ಸ್ಥಾಪಕ ಟ್ರಸ್ಟಿ ಲಲಿತಾ ಗೋಯಲ್ ಮತ್ತು ಡೆಲ್ಫಿಕ್ ಇಂಡಿಯಾ ಟ್ರಸ್ಟ್ನ ಟ್ರಸ್ಟಿ ಶಿವಕುಮಾರ್, ಕರ್ನಾಟಕ ಸಾಫ್ಟ್ಬಾಲ್ ಪ್ರೀಮಿಯರ್ ಲೀಗ್ ನ ಅನಿಲ್ ದಾಸರಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಸ್ಪರ್ಧೆಗಳ ಪಟ್ಟಿ: ಕಲೆ ಮತ್ತು ಸಂಸ್ಕೃತಿ

  • ನೃತ್ಯ
  • ಸಂಗೀತ
  • ಗಾಯನ
  • ನಾಟಕ
  • ಕಾವ್ಯ
  • ಪ್ರಬಂಧ ಬರಹ
  • ಚಿತ್ರಕಲೆ
  • ರಂಗೋಲಿ
  • ಮೆಹೆಂದಿ ವಿನ್ಯಾಸ
  • ಪೇಂಟಿಂಗ್
  • ಸಾಂಸ್ಕೃತಿಕ ಫ್ಯಾಷನ್ ಶೋ
  • ಕಥೆ ಹೇಳುವಿಕೆ
  • ಸ್ಟ್ಯಾಂಡ್-ಅಪ್ ಕಾಮಿಡಿ

ಆಟಗಳು

  • ಮ್ಯೂಸಿಕಲ್ ಚೇರ್
  • ಕಯಿ ಹಾರಾಟ
  • ಯೋಗ ಕ್ರೀಡೆಗಳು
  • ತುಗ್ಗು-ಓಟ
  • ಭುಜಬಲ ಕುಸ್ತಿ
  • ಹ್ಯಾಮರ್ ಬಾಲ್
  • ಲಗೋರಿ
  • ಟೆನ್ನಿಸ್, ವಾಲಿಬಾಲ್
  • ಸೈಕ್ಲೊಥಾನ್
  • ಮ್ಯಾರಥಾನ್
  • ಕಾಲು ಚೀಲ ಓಟ
  • ಕಪ್ಪೆ ಓಟ
  • ಒಂಟಿ ಕಾಲು ಓಟ
  • ಲೂಡೋ

ಮಾರ್ಷಲ್ ಆರ್ಟ್ಸ್

  • ಗದಾ ಯುದ್ಧ
  • ಟೆಕ್ವಾಂಡೋ
  • ಕರಾಟೆ
  • ಬಗತೂರ್

ಕ್ರಿಕೆಟ್

  • ಸಾಫ್ಟ್ ಬಾಲ್ ಕ್ರಿಕೆಟ್
  • 50 ಬಾಲ್ ಕ್ರಿಕೆಟ್

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2025/09/Vedic-Maths-New.mp4
https://kalpa.news/wp-content/uploads/2024/04/VID-20240426-WA0008.mp4

Tags: BENGALURUKannada News WebsiteLatest News KannadaPan-Hellenic festivalPythian Games 2025Sports Newsಒಳಾಂಗಣ ಕ್ರೀಡಾಂಗಣಕ್ರಿಕೆಟ್ಪಾನ್-ಹೆಲ್ಲೆನಿಕ್ ಹಬ್ಬಪೈಥಿಯನ್ ಕ್ರೀಡಾಕೂಟ 2025ಪ್ರಾಚೀನ ಸಮರ ಕಲೆಬೆಂಗಳೂರುಸಾಂಸ್ಕೃತಿಕ ಕ್ರೀಡಾಕೂಟ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕ್ಯಾನ್ಸರ್ ಅರಿವು ಆಭಿಯಾನ ಗಮನಾರ್ಹ: ಶಾಸಕ ಚನ್ನಬಸಪ್ಪ ಅಭಿಪ್ರಾಯ

Next Post

ಮುಂಬೈನಲ್ಲಿ ಭಾರತದ ರೇಸಿಂಗ್ ಫೆಸ್ಟಿವಲ್ ಫಿನಾಲೆ | ಕಿಚ್ಚ ಸುದೀಪ್, ನಾಗ ಚೈತನ್ಯ ತಾರೆಗಳ ತಂಡಗಳು ಭಾಗಿ!

kalpa News

kalpa News

Next Post
ಮುಂಬೈನಲ್ಲಿ ಭಾರತದ ರೇಸಿಂಗ್ ಫೆಸ್ಟಿವಲ್ ಫಿನಾಲೆ | ಕಿಚ್ಚ ಸುದೀಪ್, ನಾಗ ಚೈತನ್ಯ ತಾರೆಗಳ ತಂಡಗಳು ಭಾಗಿ!

ಮುಂಬೈನಲ್ಲಿ ಭಾರತದ ರೇಸಿಂಗ್ ಫೆಸ್ಟಿವಲ್ ಫಿನಾಲೆ | ಕಿಚ್ಚ ಸುದೀಪ್, ನಾಗ ಚೈತನ್ಯ ತಾರೆಗಳ ತಂಡಗಳು ಭಾಗಿ!

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL