No Result
View All Result
Interior / upgradation of Next-Generation Amrit Bharat Coaches. Sample coach ready
English Articles

Interior / upgradation of Next-Generation Amrit Bharat Coaches. Sample coach ready

by ಕಲ್ಪ ನ್ಯೂಸ್
April 6, 2026
0

Kalpa Media House  |  New Delhi  | The Hon’ble Minister of Railways inspected sample coaches developed with proposed interior design...

Read moreDetails
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
  • Advertise With Us
  • Grievances
  • About Us
  • Contact Us
Monday, April 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ನಮ್ಮ ಮಕ್ಕಳು ನಮಗೇ ಬೆಸ್ಟ್ ಎನ್ನಿಸುವ ಮಟ್ಟಕ್ಕೆ ಸಾಧನೆಯಾಗಬೇಕು

ಮಗಳ ಮೈಲಿಗಲ್ಲುಗಳಿಗೆ ಅಮ್ಮನ ಸಂಭ್ರಮ | ರಂಗಪ್ರವೇಶಕ್ಕೆ ಅಣಿಯಾದ ರಾಧಾ | 25ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 24, 2025
in ಬೆಂಗಳೂರು ನಗರ
0
ನಮ್ಮ ಮಕ್ಕಳು ನಮಗೇ ಬೆಸ್ಟ್ ಎನ್ನಿಸುವ ಮಟ್ಟಕ್ಕೆ ಸಾಧನೆಯಾಗಬೇಕು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಯಾರು ಏನೇ ಹೇಳಿದರೂ, ನಮಗೆ ಎಷ್ಟೇ ಮಮಕಾರ ಇದ್ದರೂ ಅವೆಲ್ಲವೂ ಒಂದು ಕಡೆ. ಆದರೆ ನಮಗೆ, ನಮ್ಮ ಅಂತರಂಗಕ್ಕೆ ನಮ್ಮ ‘ಮಕ್ಕಳು ಬೆಸ್ಟ್’ ಎನಿಸಬೇಕು. ಆ ಮಟ್ಟಿಗೆ ಬೆಳೆಯಬೇಕು ಎಂದರೆ ಅವೆಲ್ಲವೂ ಒಂದು ದಿನಕ್ಕೆ ಆಗುವುದಲ್ಲ. ದಶಕಗಳ ಮೈಲಿಗಲ್ಲು ಬೇಕು. ಸಾಧನೆ ಮಾಡುವ ಕೆಚ್ಚು ಬೇಕು. ಮನೆ- ಮನದ ವಾತಾವರಣವೂ ಬೆಂಬಲಿಸಬೇಕು. ಎಲ್ಲದಕ್ಕೂ ಮೀರಿ ಗುರುವಿನ ಅನಂತ ಕೃಪೆ ಬೇಕು- ಹೀಗೆ ಸಂಭ್ರಮದಿಂದ ಮಾತನಾಡುವಾಗ ಕವಿತಾ ಅವರ ಭಾವದಲ್ಲಿ ಒಂದು ಅನನ್ಯವಾದ ‘ಗುರುಭಕ್ತಿ’ ಇತ್ತು. ಕಲಾ ರಂಗದ ಬಗ್ಗೆ ಉತ್ಕಟವಾದ ಗೌರವವಿತ್ತು. ಅವೆಲ್ಲವೂ ಮಗಳಿಗೆ ಇನ್ನಷ್ಟು- ಮತ್ತಷ್ಟು ಒಲಿದು ಬರಲಿ ಎಂಬ ಪ್ರಾರ್ಥನೆ ಇತ್ತು.

ಹೌದು… ಸಂಗೀತ, ಸಂಸ್ಕೃತಿ, ಸಂಸ್ಕಾರ ಮತ್ತು ಗುರು- ಹಿರಿಯರ ಮೇಲಿನ ಗೌರವಗಳು ಒಂದು ಮನೆಯಲ್ಲಿ ದೊರಕುವುದು ಒಂದು ಸುಕೃತವೇ ಸರಿ. ಅವೆಲ್ಲವನ್ನೂ ಧಾರೆ ಧಾರೆಯಾಗಿ ಪಡೆದಿರುವ, ಪಡೆಯುತ್ತಿರುವ ಯುವ ಕಲಾವಿದೆ ರಾಧಾ ಶ್ರೀವತ್ಸ ಇದೀಗ ಭರತನಾಟ್ಯ ರಂಗ ಪ್ರವೇಶಕ್ಕೆ (ಅಕ್ಟೋಬರ್ 25) ಅಣಿಯಾಗಿದ್ದಾಳೆ.

ಈ ಸಂದರ್ಭ ಅಂತರಾಳದ ಭಾವನೆ ಹಂಚಿಕೊಂಡ ಕವಿತಾ (ರಾಧಾ ಅವರ ತಾಯಿ) ಮಗಳ ಬಗೆಗಿನ ಕನಸು, ಕಲ್ಪನೆಗಳನ್ನು ಹರವಿ ಇಡುವಾಗ ಅದೇನೋ ಭಾವುಕತೆ ಅವರಲ್ಲಿ ಮೈದುಂಬಿತ್ತು. ಯಾವುದೂ ನಮ್ಮದಲ್ಲ. ಕೇವಲ ಉತ್ತೇಜನ ಮಾತ್ರ. ಉಳಿದ ಎಲ್ಲವೂ ಆಕೆಗೆ ಗುರುವಿನ ಕೃಪೆಯಿಂದಲೇ ಬಂದ ನಾಟ್ಯ ವಿದ್ಯೆ ಎಂದು ವಿದುಷಿ ಸುಪರ್ಣಾ ವೆಂಕಟೇಶ ಅವರನ್ನು ಗೌರವಪೂರ್ವಕ ನುಡಿಗಳಿಂದಲೇ ನೆನಪಿಸಿಕೊಂಡರು.
ಕುಟುಂಬದಲ್ಲಿ ಎಲ್ಲರಿಗೂ ಸಂಗೀತ ಇಷ್ಟ. ಸ್ವತಃ ನಮ್ಮ ಯಜಮಾನರೇ ( ಶ್ರೀವತ್ಸ) ವಿದ್ಯಾರ್ಥಿ ದಿಸೆಯಲ್ಲಿ ಸೀನಿಯರ್ ಹಂತದವರೆಗೆ ಭರತನಾಟ್ಯ ಕಲಿತವರು. ಹಾಗಾಗಿ ಮಗಳು ರಾಧಾ ಕೂಡಾ ನರ್ತನ ಕಲಿಯಬೇಕು ಎಂಬ ಅಪೇಕ್ಷೆ ಇತ್ತು. ಹಾಗಾಗಿ ಎಳವೆಯಲ್ಲೇ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಗೆ ಸೇರಿಸಿದೆ. ಯೋಗಾಯೋಗ ಎಂಬಂತೆ ಸುಪರ್ಣಾ ಮತ್ತು ವೆಂಕಟೇಶ್ ದಂಪತಿ ದೊರೆತರು. ಇಂದು ಮಗಳು ಜೂನಿಯರ್, ಸೀನಿಯರ್ ಹಂತ ಮುಗಿಸಿ, ದ್ವಿತೀಯ ಪಿಯುಸಿ (ವಿಜ್ಞಾನ ) ಓದುತ್ತಿದ್ದರೂ ರಂಗ ಪ್ರವೇಶ ಮಾಡುತ್ತ ಇದ್ದಾಳೆ ಎಂದರೆ ಅದರ ಹಿಂದೆ ನಮ್ಮೆಲ್ಲ ಹಿರಿಯರ ಅನುಗ್ರಹ ಢಾಳಾಗಿದೆ ಎನ್ನುತ್ತಾರೆ ಕವಿತಾ.

ಕಲಾವಿದೆ ಪರಿಚಯ
ದ್ವಿತೀಯ ಪಿಯು ಅಧ್ಯಯನ ಮಾಡುತ್ತಿರುವ ರಾಧಾ, ಈಗಾಗಲೇ ಸಾಯಿ ಆರ್ಟ್ಸ್ ಸಂಸ್ಥೆಯ ಹತ್ತು, ಹಲವು ಕಾರ್ಯಕ್ರಮದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿದ ಯುವ ಕಲಾವಿದೆ. ನರ್ತನದಲ್ಲಿ ನವ ನವೀನ ತಂತ್ರಗಳನ್ನು ಕಲಿಯುವಲ್ಲಿ ಅದಮ್ಯ ಆಸಕ್ತಿ. ಹಾಗಾಗಿ ಮುದ್ರಾ, ತಾಳ, ಲಯ ಮತ್ತು ಅಭಿನಯಕ್ಕೆ ಈಕೆಯ ಪ್ರಧಾನ ಆದ್ಯತೆ ಇದೆ. ವಿದುಷಿ ಹರ್ಷಿತಾ ವಿದ್ಯಾ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿರುವುದು ಈಕೆಯ ಇನ್ನೊಂದು ಹೆಗ್ಗಳಿಕೆ.

ವೇದಿಕೆ ಕಲಾವಿದೆಯಾಗಬೇಕು
ನೃತ್ಯದಲ್ಲಿ ವಿದ್ವತ್ ಮಾಡುವುದರೊಂದಿಗೆ ಬಿಇ. ವ್ಯಾಸಂಗ ಮಾಡಬೇಕು. ಜೀವನಕ್ಕೆ ಭದ್ರವಾದ ಒಂದು ವೃತ್ತಿ ಬೇಕು. ಡಾನ್ಸ್ ಹವ್ಯಾಸವಾಗಿ ಇಟ್ಟುಕೊಳ್ಳುತ್ತೇನೆ. ನಾನು ಉತ್ತಮವಾದ ‘ ವೇದಿಕೆ ಕಲಾವಿದೆ’ ಆಗಬೇಕು ಎಂಬ ಕನಸು ಇದೆ ಎನ್ನುವುದು ರಾಧಾಳ ಅಭಿಪ್ರಾಯ. ಇದಕ್ಕೆ ಇಡೀ ಕುಟುಂಬದ ಬೆಂಬಲವಿದೆ.
25ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ
ನಾಡಿನ ಪ್ರಖ್ಯಾತ ಭರತನಾಟ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ರಾಧಾ ಶ್ರೀವತ್ಸ ಅವರ ರಂಗ ಪ್ರವೇಶ ಕಾರ್ಯಕ್ರಮ ಅ . 25ರಂದು ರಾಜಧಾನಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನೆರವೇರಲಿದೆ.

ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದೆ ಕಲಾಮಂಡಲಮ್ ಉಷಾ ದಾತಾರ್, ಚಿತ್ರನಟಿ ಮಾಳವಿಕಾ ಅವಿನಾಶ್, ನಟ ನೆ.ಲ. ನರೇಂದ್ರ ಬಾಬು ಆಗಮಿಸಲಿದ್ದಾರೆ. ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್, ಪಾಲಕರಾದ ಶ್ರೀವತ್ಸ ಮತ್ತು ಕವಿತಾ ಹಾಜರಿರಲಿದ್ದಾರೆ.

ನಟವಾಂಗದಲ್ಲಿ ಗುರು ಸುಪರ್ಣಾ, ಗಾಯನದಲ್ಲಿ ರೋಹಿತ್ ಭಟ್, ಮೃದಂಗದಲ್ಲಿ ಗುರುಮೂರ್ತಿ, ಕೊಳಲಿನಲ್ಲಿ ನಿತೀಶ್ ಅಮ್ಮಣ್ಣಾಯ, ವೀಣೆಯಲ್ಲಿ ಗೋಪಾಲ್ ಮತ್ತು ರಿದಂ ಪ್ಯಾಡ್’ನಲ್ಲಿ ಪವನ್ ದತ್ತ ಹಿಮ್ಮೇಳ ಸಹಕಾರ ನೀಡಲಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: BENGALURUBharatanatyamKannada News WebsiteMusicRadha SrivatsaSpecial Articleಭರತನಾಟ್ಯರಂಗ ಪ್ರವೇಶವಿಶೇಷ ಲೇಖನಸಂಗೀತಸಂಸ್ಕಾರಸಂಸ್ಕೃತಿ
Share196Tweet123Send
Previous Post

ಅ.25 – 26ರಂದು ಎನ್‌ಇಎಸ್‌ ಕಾಲೇಜಿನಲ್ಲಿ ರೇಂಜರ್ಸ್‌ – ರೋವರ್ಸ್‌ ಅಹೋರಾತ್ರಿ ಶಿಬಿರ

Next Post

ಮನೆ ಮನೆಗೆ ಪೊಲೀಸ್ | ಎಸ್‌ಪಿ ಮಿಥುನ್ ಕುಮಾರ್ ಸಾರ್ವಜನಿಕ ಸಭೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮನೆ ಮನೆಗೆ ಪೊಲೀಸ್ | ಎಸ್‌ಪಿ ಮಿಥುನ್ ಕುಮಾರ್ ಸಾರ್ವಜನಿಕ ಸಭೆ

ಮನೆ ಮನೆಗೆ ಪೊಲೀಸ್ | ಎಸ್‌ಪಿ ಮಿಥುನ್ ಕುಮಾರ್ ಸಾರ್ವಜನಿಕ ಸಭೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಮೈಸೂರು ತಾಳಗುಪ್ಪ ರೈಲಿಗೆ ಇನ್ಮುಂದೆ LHB ಕೋಚ್ ಅಳವಡಿಕೆ | ಹೇಗಿರತ್ತೆ ಬೋಗಿ?

ಮೈಸೂರು ತಾಳಗುಪ್ಪ ರೈಲಿಗೆ ಇನ್ಮುಂದೆ LHB ಕೋಚ್ ಅಳವಡಿಕೆ | ಹೇಗಿರತ್ತೆ ಬೋಗಿ?

April 6, 2026
ಏ.7 ರಿಂದ 10 | ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ

ಏ.7 ರಿಂದ 10 | ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ

April 6, 2026
ಗೋವಾ ವಿರುದ್ಧ ಬೆಂಗಳೂರು ಎಫ್‌ಸಿ ತಂಡಕ್ಕೆ 2-0 ಅಂತರದ ಜಯ!

ಗೋವಾ ವಿರುದ್ಧ ಬೆಂಗಳೂರು ಎಫ್‌ಸಿ ತಂಡಕ್ಕೆ 2-0 ಅಂತರದ ಜಯ!

April 6, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
SWR to run special trains for Good Friday, Easter rush

ಮೈಸೂರು – ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್‌ ಲಚ್ಯಾಣ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ

April 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL