ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಸರ್ಕಾರಿ ಆಸ್ತಿಗೆ ಹಾನಿ ಉಂಟುಮಾಡಿದ ಆರೋಪದ ಮೇಲೆ ಐವರು ವಿಚಾರಣಾಧೀನ ಖೈದಿಗಳ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲಿನಲ್ಲಿ ಅಳವಡಿಸಲಾಗಿದ್ದ ಪ್ರಿಸನ್ ಕಾಲ್ ಸಿಸ್ಟಂ (PCS) ಉಪಕರಣದ ಪರದೆಯನ್ನು ಖೈದಿಗಳು ಜಖಂ ಗೊಳಿಸಿದ್ದಾರೆ.
ಕಾರಾಗೃಹದಲ್ಲಿರುವ ಕೈದಿಗಳು ತಮ್ಮ ಕುಟುಂಬದ ಸದಸ್ಯರು ಹಾಗೂ ವಕೀಲರೊಂದಿಗೆ ಮಾತನಾಡಲು ಅನುಕೂಲವಾಗುವಂತೆ ಒಟ್ಟು 10 ಪ್ರಿಸನ್ ಕಾಲ್ ಸಿಸ್ಟಂ ಉಪಕರಣಗಳನ್ನು ಅಳವಡಿಸಲಾಗಿತ್ತು. ಇವುಗಳಲ್ಲಿ ಪ್ರತಿಯೊಂದು ಉಪಕರಣದ ಮೌಲ್ಯ 1,64,295 ಆಗಿದೆ. ಕಾರಾಗೃಹದ ‘ಕುಮುದ್ವತಿ’ ವಿಭಾಗದಲ್ಲಿದ್ದ ಪಿಸಿಎಸ್ ಬೂತ್‌ಗೆ ಪ್ರವೇಶಿಸಿದ ವಿಚಾರಣಾಧೀನ ಕೈದಿಗಳು, ಉಪಕರಣದ ಪರದೆಯನ್ನು ಒಡೆದು ಹಾನಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
Also read>> ಶಿವಣ್ಣ ಮತ್ತೊಂದು ಮೈಲಿಗಲ್ಲು | ಬಾಲಿವುಡ್’ಗೆ ಹ್ಯಾಟ್ರಿಕ್ ಹೀರೋ ಎಂಟ್ರಿ!
ಈ ಕುರಿತು ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಪಿ. ಅವರು ನೀಡಿರುವ ದೂರಿನನ್ವಯ ತುಂಗಾನಗರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಸರ್ಕಾರಿ ಆಸ್ತಿಗೆ ಹಾನಿ ಎಸಗಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 324(3), 324(5) ಹಾಗೂ 190ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








