ಕಲ್ಪ ಮೀಡಿಯಾ ಹೌಸ್ | ಪ್ರಯಾಗರಾಜ್ |
ಕೇಂದ್ರ ಗೃಹ ಸಚಿವ ಅಮಿತ್ ಶಾ #AmitShah ಅವರು ಮಹಾಕುಂಭದಲ್ಲಿ ಪಾಲ್ಗೊಳ್ಳಲು ಪ್ರಯಾಗರಾಜ್’ನಲ್ಲಿ ವಾಸ್ತವ್ಯ ಹೂಡಿರುವ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ #VidhushekharaBharati ದರ್ಶನ ಪಡೆದು, ಆರ್ಶೀವಾದ ಪಡೆದರು.
ಪ್ರಯಾಗರಾಜ್’ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಪಾಲ್ಗೊಳ್ಳಲು ವಿಧುಶೇಖರ ಭಾರತೀ ಮೊಕ್ಕಾಂ ಹೂಡಿದ್ದಾರೆ.
Also Read>> ಶಕ್ತಿ, ಬುದ್ಧಿಯ ಮೇಲೆ ಹಿಡಿತ ಸಾಧಿಸಿ ಗುರಿಯಡೆಗೆ ಮುನ್ನುಗ್ಗಿದಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ
ಇದೇ ವೇಳೆಯಲ್ಲಿ ಪ್ರಯಾಗರಾಜಕ್ಕೆ #Prayagraj ತೆರಳಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪುಣ್ಯಸ್ನಾನದ ನಂತರ ಸಾಧುಸಂತರನ್ನು, ದೇಶದ ವಿವಿಧ ಪ್ರಮುಖ ಮಠಾಧೀಶರನ್ನು ಭೇಟಿಯಾಗಿ ಅನಗ್ರಹ ಪಡೆದರು.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲೇ ಪೋಸ್ಟ್ ಮಾಡಿರುವ ಅಮಿತ್ ಶಾ, ನಮ್ಮ ಸಂತಶ್ರೇಷ್ಠರು ಅನಾದಿ ಕಾಲದಿಂದಲೂ ಸನಾತನ ಸಂಸ್ಕೃತಿಯ ದರ್ಶನ ಹಾಗೂ ಏಕತೆಯ ಕಲ್ಪನೆಯನ್ನು ಪ್ರಪಂಚದಾದ್ಯಂತ ಪಸರಿಸುತ್ತಿದ್ದಾರೆ. ಪ್ರಯಾಗರಾಜ್’ನಲ್ಲಿ ಇಂದು ಶೃಂಗೇರಿ #Sringeri ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ದರ್ಶನಾಶೀರ್ವಾದ ಪಡೆದೆನು ಎಂದಿದ್ದಾರೆ.
ಈ ವೇಳೆ ಶ್ರೀಮಠದ ವತಿಯಿಂದ ಗೃಹ ಸಚಿವರಿಗೆ ಅನುಗ್ರಹ ಪ್ರಸಾದ ನೀಡಿ ಗುರುಗಳು ಆರ್ಶೀವದಿಸಿದರು. ಗೃಹಸಚಿವರೊಂದಿಗೆ ಅವರ ಕುಟುಂಬಸ್ಥರೂ ಸಹ ಉಪಸ್ಥಿತರಿದ್ದರು.











Discussion about this post