ಶಿವಮೊಗ್ಗ: ಕರ್ನಾಟಕ ಸಂಗೀತದ ಪಿತಾಮಹ, ದಾಸವರೇಣ್ಯ ಶ್ರೀ ಪುರಂದರದಾಸರ ಪುಣ್ಯದಿನವನ್ನು ದುರ್ಗಿಗುಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಪುರಂದರದಾಸರ ಭಾವಚಿತ್ರವನ್ನು ಅಲಂಕರಿಸಿ, ಶ್ರೀರಾಯರ ಉತ್ಸವ ಮೂರ್ತಿಯೊಂದಿಗೆ ಬೆಳ್ಳಿ ರಥೋತ್ಸವ ನೆರವೇರಿಸಲಾಯಿತು.

ಭಜನಾ ಮಂಡಳಿಗಳಿಂದ ಸಾಮೂಹಿಕ ಭಜನೆ, ದಾಸ ಸಂಕೀರ್ತನೆ ನಡೆಯಿತು.


















