ಕಲ್ಪ ಮೀಡಿಯಾ ಹೌಸ್ | ರಾಮನಗರ |
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ D K Suresh ಅವರು ಇಂದು ರಾಮನಗರ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಒಟ್ಟು 593 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ಕಳೆದ 5 ವರ್ಷಗಳಲ್ಲಿ ಡಿ.ಕೆ. ಸುರೇಶ್ ಅವರ ಆಸ್ತಿಯಲ್ಲಿ ಸುಮಾರು 259.19 (75%) ಕೋಟಿ ರೂ.ನಷ್ಟು ಏರಿಕೆ ಕಂಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 338 ಕೋಟಿ ರೂ. ಆಸ್ತಿ ಘೋಷಿಸಿದ್ದ ಡಿಕೆ ಸುರೇಶ್, ಈ ಬಾರಿ ಒಟ್ಟು 106.71 ಕೋಟಿ ರೂ. ಚರಾಸ್ತಿ, ಒಟ್ಟು 486.33 ಕೋಟಿ ರೂ. ಸ್ಥಿರಾಸ್ತಿ ಘೋಷಿಸಿದ್ದಾರೆ.

Also read: ಶರಾವತಿ, ವಿಐಎಸ್’ಎಲ್, ಎಂಪಿಎಂ ವಿಚಾರದಲ್ಲಿ ಕಾಂಗ್ರೆಸ್’ಗೆ ಚಾಟಿ ಬೀಸಿದ ಎಂಪಿ ರಾಘವೇಂದ್ರ
ಒಟ್ಟು 32,75,50,472 ರೂ. ಮೌಲ್ಯದ ಕೃಷಿ ಭೂಮಿ, 210,47,68,159 ರೂ. ಮೌಲ್ಯದ ಕೃಷಿಯೆತರ ಭೂಮಿ ಹೊಂದಿದ್ದಾರೆ. ಒಟ್ಟು 211,91,41,888 ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಡಿಕೆ ಸುರೇಶ್ ಹೊಂದಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post