ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ರೇಣುಕಾಸ್ವಾಮಿ ಕೊಲೆ ಪ್ರಕರಣದ #RenukaswamyMurderCase ಎ2 ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ರಾಜ್ಯ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಈ ಕುರಿತಂತೆ ಎ2 ದರ್ಶನ್’ನನ್ನು ಬಳ್ಳಾರಿ #Ballary ಜೈಲಿಗೆ ಶಿಫ್ಟ್ ಮಾಡುವಂತೆ ಆದೇಶ ನೀಡಲಾಗಿದ್ದು, ಎ2 ಪವಿತ್ರಾ ಹೊರತುಪಡಿಸಿ ಉಳಿದ ಎಲ್ಲ ಆರೋಪಿಗಳನ್ನು ಬೇರೆ ಜಿಲ್ಲಾ ಜೈಲುಗಳಿಗೆ ಸ್ಥಳಾಂತರ ಮಾಡುವಂತೆ ಸೂಚಿಸಿದೆ.
ಯಾರ‍್ಯಾರು ಯಾವ ಜೈಲಿಗೆ?
- ನಟ ದರ್ಶನ್ ಹಾಗೂ ಪ್ರದೋಷ್: ಬಳ್ಳಾರಿ ಕೇಂದ್ರ ಕಾರಾಗೃಹ
- ಪವನ್, ರಾಘವೇಂದ್ರ, ನಂದೀಶ್: ಮೈಸೂರು ಕಾರಾಗೃಹ
- ಜಗದೀಶ್ ಮತ್ತು ಲಕ್ಷö್ಮಣ್: ಶಿವಮೊಗ್ಗ ಕಾರಾಗೃಹ
- ಧನರಾಜ್: ಧಾರವಾಡ ಕಾರಾಗೃಹ
- ವಿನಯ್: ವಿಜಯಪುರ ಕಾರಾಗೃಹ
- ನಾಗರಾಜ್: ಗುಲ್ಬರ್ಗಾ (ಕಲಬುರಗಿ) ಕಾರಾಗೃಹ
- ಎ1 ಪವಿತ್ರಾ, ಅನುಕುಮಾರ್, ರವಿಶಂಕರ್, ದೀಪಕ್ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಮುಂದುವರಿಕೆ
- ಈಗಾಗಲೇ ತುಮಕೂರು ಜೈಲಿನಲ್ಲಿ 4 ಜನ ಇದ್ದಾರೆ
ಪರಪ್ಪನ ಅಗ್ರಹಾರದಲ್ಲಿ ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ, ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ, ಧರ್ಮ ಹಾಗೂ ದರ್ಶನ್ ಆಪ್ತ ನಾಗರಾಜ್ ಟೇಬಲ್ ಹಾಕಿ ಕುಳಿತುಕೊಂಡು ಪಾರ್ಟಿ ಮಾಡುತ್ತಿರುವಂತೆ ಟೀ ಮತ್ತು ಸಿಗರೇಟ್ ಸೇದುತ್ತಿದ್ದ ಫೋಟೋ ಮತ್ತು ಜೈಲಿನಿಂದ ದರ್ಶನ್ , ಕುಟುಂಬದವರು ಮತ್ತು ಇತರರಿಗೆ ವಿಡಿಯೋ ಕಾಲ್ ಮಾಡಿರುವುದು ಬಹಿರಂಗವಾದ ಬಳಿಕ ಜೈಲಿನ ಅವ್ಯವಸ್ಥೆ ಬೆಳಕಿಗೆ ಬಂದಿತ್ತು.
ಈ ಘಟನೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದು, ಎಲ್ಲರನ್ನೂ ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಲಯದ ಆದೇಶವನ್ನು ಪಡೆದುಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post