ಮುಂಬೈ: ಅಮೆರಿಕ್ ಡಾಲರ್ ಮುಂದೆ ಭಾರತೀಯ ರೂಪಾಯಿ ಮೌಲ್ಯ ಇಂದು 71 ರೂ.ಗಳಿಗೆ ನಿಲ್ಲುವ ಮೂಲಕ ಐತಿಹಾಸಿಕ ಕುಸಿತ ಕಂಡಿದೆ.
ನಿನ್ನೆ 70.74 ರೂಗಳಿದ್ದ ರೂಪಾಯಿದ ದರ ಇಂದು ಮುಂಜಾನೆ 22 ಪೈಸೆ ಅಂದರೆ 70.95 ರೂಗಳಿಗೆ ನಿಲ್ಲುವ ಮೂಲಕ ಡಾಲರ್ ಎದುರು ಭಾರೀ ಪ್ರಮಾಣದಲ್ಲಿ ಕುಸಿದಿದೆ.
ಈ ಬೆಳವಣಿಗೆ ಕಚ್ಚಾತೈಲ ಆಮದಿನ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಜಾಗತಿಕ ಕಚ್ಚಾತೈಲ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದ್ದು, ವಿದೇಶಿ ಕರೆನ್ಸಿಯ ಪರಿಣಾಮ ಸ್ವದೇಶಿ ಈಕ್ವಿಟಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
Discussion about this post