ಕಲ್ಪ ಮೀಡಿಯಾ ಹೌಸ್ | ಸಾಗರ |
ಸಂಸ್ಕೃತ ಭಾಷೆ (Sanskrit) ಕೇವಲ ಮಂತ್ರೋಚ್ಚಾರಣೆ ಅಥವಾ ಪೂಜಾ ವಿಧಿವಿಧಾನಗಳಿಗೆ ಸೀಮಿತವಾಗಿರದೆ, ಜ್ಞಾನ, ವಿಜ್ಞಾನ, ಸಂಸ್ಕೃತಿ ಸೇರಿದಂತೆ ರ‍್ವ ವಿಷಯಗಳನ್ನು ಒಳಗೊಂಡಿರುವ ಸಮೃದ್ಧ ಭಾಷೆಯಾಗಿದೆ ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ್ ಜಿ. ಭಟ್ ಸಾಗರದಲ್ಲಿ (Sagara) ಹೇಳಿದರು.
ಸಾಗರದ ಎಲ್. ಬಿ. ಕಾಲೇಜಿನಲ್ಲಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ, ಶಿವಮೊಗ್ಗ ಇವರ ಸಹಯೋಗದಲ್ಲಿ ಕಳೆದ ಹತ್ತು ದಿನಗಳಿಂದ ಆಯೋಜಿಸಲಾಗಿದ್ದ ‘ಅಂಕುರ’ ಹೆಸರಿನ ಸರಳ ಸಂಸ್ಕೃತ ಸಂಭಾಷಣ ಶಿಬಿರದ ಸಮಾರೋಪ ಸಮಾರಂಭ ಹಾಗೂ ವಿಶ್ವ ಸಂಸ್ಕೃತ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಸ್ಕೃತ ಭಾಷೆಯ ಮಹತ್ವವನ್ನು ವಿವರಿಸಿದ ರವೀಂದ್ರನಾಥ್ ಜಿ. ಭಟ್, “ಸಂಸ್ಕೃತ ಎಂದರೆ ಸರಸ್ವತಿಯಂತೆ ರ‍್ವ ವಿಷಯಗಳನ್ನು ಒಳಗೊಂಡಿರುವ ಭಾಷೆ. ಮಧುರ, ಸುಂದರ, ದಿವ್ಯ ಹಾಗೂ ಸಂಸ್ಕೃತಿಯನ್ನು ಒಳಗೊಂಡಿರುವ ಭಾಷೆಯೇ ಸಂಸ್ಕೃತ” ಎಂದು ಅಭಿಪ್ರಾಯಪಟ್ಟರು.
‘ಭಾರತಿ’ ಎಂದರೆ ಜ್ಞಾನ ಎಂಬ ರ‍್ಥವಿದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಸರಸ್ವತಿಯ ಪುತ್ರರು ಎಂದ ಅವರು, ಸಂಸ್ಕೃತ ಭಾಷೆ ಜ್ಞಾನವನ್ನು ಅರಿಯಲು ಪ್ರಮುಖ ಮರ‍್ಗವಾಗಿದೆ ಎಂದು ತಿಳಿಸಿದರು. ಸಂಸ್ಕೃತವನ್ನು ಕೇವಲ ಪೂಜೆ, ಮಂತ್ರೋಚ್ಚಾರಣೆ ಹಾಗೂ ಧರ‍್ಮಿಕ ಆಚರಣೆಗಳ ಭಾಷೆ ಎಂದು ಸೀಮಿತಗೊಳಿಸದೆ, ಅದರಲ್ಲಿರುವ ಅಪಾರ ಜ್ಞಾನ ಸಂಪತ್ತನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.
Also read>> ಕರಾವಳಿ ಜನರಿಗೆ ಗುಡ್ ನ್ಯೂಸ್: ಸೆ.18ರಂದು ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ
Sagara : ಸಂಸ್ಕೃತ ಕಲಿಕೆ ಸುಲಭ: ಪ್ರಾಂಶುಪಾಲ ಡಾ. ಲಕ್ಷ್ಮೀಶ್
ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ್ ಮಾತನಾಡಿ, ಸಂಸ್ಕೃತ ಭಾಷೆಯನ್ನು ಕಲಿಯುವುದು ಸುಲಭವಾಗಿದ್ದು, ಇದರಲ್ಲಿರುವ ವೈಜ್ಞಾನಿಕ ಮತ್ತು ವ್ಯವಸ್ಥಿತ ಸ್ವರೂಪದಿಂದಾಗಿ ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಸಂಸ್ಕೃತದ ಬಗ್ಗೆ ಆಸಕ್ತಿ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಗಣಕಯಂತ್ರಕ್ಕೆ ಸುಲಭವಾಗಿ ರ‍್ಥವಾಗುವ ಭಾಷೆಗಳ ಪೈಕಿ ಸಂಸ್ಕೃತವೂ ಪ್ರಮುಖವಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ವಿದೇಶಿಗರು ಕೂಡ ಸಂಸ್ಕೃತ ಭಾಷೆಯನ್ನು ಆಸಕ್ತಿಯಿಂದ ಕಲಿಯುತ್ತಿದ್ದಾರೆ ಎಂದರು.
ಹತ್ತು ದಿನಗಳ ಕಾಲ ನಡೆದ ಶಿಬಿರದಲ್ಲಿ ಭಾಗವಹಿಸಿ ಸರಳ ಸಂಸ್ಕೃತ ಸಂಭಾಷಣೆಯನ್ನು ಕಲಿತ ವಿದ್ಯರ‍್ಥಿಗಳು ಹಾಗೂ ಇತರ ಶಿಬಿರರ‍್ಥಿಗಳಿಗೆ ಶುಭ ಹಾರೈಸಿದ ಅವರು, ಕಲಿತಿರುವುದನ್ನು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಬಳಸುವಂತೆ ಸಲಹೆ ನೀಡಿದರು.
ಸಂಸ್ಕೃತ ನಮ್ಮ ಭಾಷಾ ಪರಂಪರೆಯ ಮೂಲ: ವಿದುಷಿ ರೇವತಿ ಭಟ್
ಸಂಸ್ಕೃತ ಶಿಕ್ಷಕಿ ವಿದುಷಿ ರೇವತಿ ಭಟ್ ಮಾತನಾಡಿ, ಸಂಸ್ಕೃತವು ಭಾರತದ ಭಾಷಾ ಪರಂಪರೆಯ ಪ್ರಮುಖ ಮೂಲವಾಗಿದ್ದು, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಜೀವನಶೈಲಿಯೊಂದಿಗೆ ಆಳವಾಗಿ ಬೆಸೆದುಕೊಂಡಿದೆ ಎಂದು ಹೇಳಿದರು.
ಸಂಸ್ಕೃತವನ್ನು ‘ಸಾವಿಲ್ಲದ ಭಾಷೆ’ ಎಂದು ಬಣ್ಣಿಸಿದ ಅವರು, ಭಾರತದ ಹಲವು ಭಾಷೆಗಳ ಬೆಳವಣಿಗೆಯಲ್ಲಿ ಸಂಸ್ಕೃತದ ಕೊಡುಗೆ ಮಹತ್ವದ್ದಾಗಿದೆ ಎಂದರು. ನಮ್ಮ ಜೀವನದ ಬೇರುಗಳಂತೆ ಸಂಸ್ಕೃತವು ನಮ್ಮೊಂದಿಗೆ ಬೆಸೆದುಕೊಂಡಿದ್ದು, ಭಾಷೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ತಿಳಿಸಿದರು.
ಕಲಿಯಲು ವಯಸ್ಸು ಮುಖ್ಯವಲ್ಲ, ಕಲಿಯುವ ಹಂಬಲ ಮುಖ್ಯ
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಡಿಎಫ್‌ನ ಪ್ರಧಾನ ಕರ‍್ಯರ‍್ಶಿ ಡಾ. ಎಚ್. ಎಂ. ಶಿವಕುಮಾರ ಮಾತನಾಡಿ, ಸಂಸ್ಕೃತದಿಂದ ಸಂಸ್ಕೃತಿ ವೃದ್ಧಿಯಾಗುತ್ತದೆ. ಭಾಷೆಯ ಕಲಿಕೆಗೆ ವಯಸ್ಸಿನ ಮಿತಿ ಇಲ್ಲ; ಕಲಿಯುವ ಹಂಬಲ ಮತ್ತು ಆಸಕ್ತಿ ಮುಖ್ಯ ಎಂದು ಹೇಳಿದರು.
ಈ ಶಿಬಿರದಲ್ಲಿ ವಿವಿಧ ವಯೋಮಾನದವರು ಭಾಗವಹಿಸಿರುವುದು ಸಂತಸದ ಸಂಗತಿ. ವಿದ್ಯರ‍್ಥಿಗಳು ಶಿಬಿರದಿಂದ ಪಡೆದ ಪ್ರೇರಣೆಯನ್ನು ಮುಂದುವರಿಸಿಕೊಂಡು ಸಂಸ್ಕೃತವನ್ನು ಮಾತನಾಡಬೇಕು, ಕಲಿಯಬೇಕು ಹಾಗೂ ಬೆಳೆಸಬೇಕು ಎಂದು ಕರೆ ನೀಡಿದರು.
ಸಂಸ್ಕೃತ ಕಲಿತು ಸಂಸ್ಕೃತಿ ಉಳಿಸಿ
ಸಾಗರ ನಗರಸಭೆಯ ನಿಕಟಪರ‍್ವ ಅಧ್ಯಕ್ಷೆ ಶ್ರೀಮತಿ ಮೈತ್ರಿ ಪಾಟೀಲ್ ಮಾತನಾಡಿ, ಸಂಸ್ಕೃತ ಭಾಷೆಯನ್ನು ಕಲಿಯುವುದರ ಮೂಲಕ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕರ‍್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಕರ‍್ಯಕ್ರಮದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಗೌತಮ ಎಂ. ಎ. ಉಪಸ್ಥಿತರಿದ್ದರು.
ವಿಶೇಷವೆಂದರೆ, ಸಮಾರಂಭದ ಸಂಪರ‍್ಣ ಕರ‍್ಯಕ್ರಮವನ್ನು ಸಂಸ್ಕೃತ ಭಾಷೆಯಲ್ಲಿಯೇ ನಡೆಸಲಾಯಿತು. ಇದು ಶಿಬಿರರ‍್ಥಿಗಳಿಗೆ ಸಂಸ್ಕೃತವನ್ನು ಪ್ರಾಯೋಗಿಕವಾಗಿ ಬಳಸುವ ಉತ್ತಮ ಅವಕಾಶವಾಗಿತ್ತು.
ಕರ‍್ಯಕ್ರಮದಲ್ಲಿ ಕು. ಅಮೂಲ್ಯ ಸ್ವಾಗತಿಸಿದರು. ಸುವೆಧಾ ಹೆಗಡೆ ಅತಿಥಿಗಳನ್ನು ಪರಿಚಯಿಸಿದರು. ಶ್ರೀನಂದ ಕರ‍್ಯಕ್ರಮ ನರ‍್ವಹಿಸಿದರು. ಅಖಿಲಾ ವಂದಿಸಿದರು. ಶಿಬಿರರ‍್ಥಿಗಳಾದ ಕು. ದೀಪಿಕಾ, ವೇಣುಗೋಪಾಲ ಹಾಗೂ ನೇಚರ್ ಶಿಬಿರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಹತ್ತು ದಿನಗಳ ಕಾಲ ನಡೆದ ‘ಅಂಕುರ’ ಸರಳ ಸಂಸ್ಕೃತ ಸಂಭಾಷಣ ಶಿಬಿರವು ಭಾಗವಹಿಸಿದವರಿಗೆ ಸಂಸ್ಕೃತವನ್ನು ಕೇವಲ ಓದುವ ಮತ್ತು ಕೇಳುವ ಭಾಷೆಯಾಗಿ ಮಾತ್ರವಲ್ಲದೆ, ದೈನಂದಿನ ಬದುಕಿನಲ್ಲಿ ಸರಳವಾಗಿ ಮಾತನಾಡಬಹುದಾದ ಭಾಷೆಯಾಗಿ ಪರಿಚಯಿಸುವಲ್ಲಿ ಯಶಸ್ವಿಯಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






