ಕಲ್ಪ ಮೀಡಿಯಾ ಹೌಸ್ | ಸಾಗರ |
ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ ಹೊಡೆದ ಪರಿಣಾಮ, ಧರ್ಮದರ್ಶಿಗಳ ವಾಹನ ಜಖಂಗೊಂಡು ದೇವಸ್ಥಾನದ ಕಾಂಪೌಂಡ್ ಹಾನಿಯಾದ ಘಟನೆ ಹುಲಿಕಲ್ ಘಾಟಿ, ಬಾಳೆಬರೆಯಲ್ಲಿ ನಡೆದಿದೆ.
ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನದ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
Also read: ಸೊರಬ | ಹಿಡಿರಿ ಹೋರಿ, ಹರಿ ಕೊಬ್ಬರಿ, ಹೊಡಿರಿ ಕೇಕೆ.. ಹೇಗಿತ್ತು ನೋಡಿ ಹೋರಿ ಬೆದರಿಸುವ ಹಬ್ಬ
ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದ ಧರ್ಮದರ್ಶಿ ಮೋಹನ್ ನಂಬಿಯಾರ್ ಅವರ ಬೊಲೆರೋ ವಾಹನ ಜಖಂಗೊಂಡಿದೆ. ಅಲ್ಲದೇ ಕಾಂಪೌಂಡ್ ಗೂ ಹಾನಿಯಾಗಿದೆ. ಕ್ಯಾಂಟರ್ ಚಾಲಕ ಪದ್ದಿಲೇಟಿ ಬಿನ್ ನಾರಾಯಣಪ್ಪ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ನಿವಾಸಿಯಾಗಿದ್ದು, ಅವರ ಎಡಗಾಲು ಹಾಗೂ ಎಡ ಕೈಗೆ ಪೆಟ್ಟಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post