Sunday, January 29, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ಡಾ. ಸುದರ್ಶನ್ ಆಚಾರ್
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಉದಯವಾಗುವ ಮುನ್ನ ಮರೆಯಾದ ರವಿ ಬೆಳ(ಗು)ಗೆರೆ

November 13, 2020
in Special Articles
0 0
0
Share on facebookShare on TwitterWhatsapp
Read - 4 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

2001ನೆಯ ಇಸವಿಯಲ್ಲಿ ಆಗಿನ್ನೂ ಐದು ವರ್ಷ ತುಂಬಿ ದಾಪುಗಾಲು ಹಿಡುತ್ತಿದ್ದ ಹಾಯ್ ಬೆಂಗಳೂರು ಪತ್ರಿಕೆ ಹೆಸರು ಕೇಳಲಿಕ್ಕೆ ಒಂದ್ ತರ ವಿಬಿನ್ನವಾಗಿತ್ತು. ಎಂಟನೇಯ ತರಗತಿ ಹುಡುಗ ನೀನು ಈ ರವಿ ಬೆಳಗೆರೆಯ ಪತ್ರಿಕೆ ಓದಬಾರದು ಅಂತ ಬಿಡಿಸಿದ್ರು ನಮ್ಮ ಹೈಸ್ಕೂಲ್ ಮೇಷ್ಟ್ರು. ಆದರೆ ಅವತ್ತು ಅಷ್ಟಕ್ಕೆ ಸುಮ್ಮನಾಗಲಿಲ್ಲ ಮೇಷ್ಟ್ರು ಆತ ಬ್ಲಾಕ್ ಮೇಲ್ ಮಾಡಿ ಡೀಲ್ ಮಾಡ್ತಾನಂತೆ. ಪತ್ರಿಕೇಲಿ ಬರೆಯೋ ಮುಂಚೆ ಅವರಿಗೆಲ್ಲ ವಾರ್ನ್ ಮಾಡಿ ಬಗ್ಗಿಲ್ಲ ಅಂದರೆ ಚಿತ್ರ-ವಿಚಿತ್ರವಾಗಿ ವೈಭವಿಕರಿಸಿ ಬರೆಯುತ್ತಾನೆ.

ಭೂಗತ ಲೋಕದ ದುರಂತ ನಾಯಕರ ಬಗ್ಗೆ ವಿಜೃಂಭಿಸಿ ಸಿನಿಮಾ ನಾಯಕನಂತೆ ಬಿಲ್ಡ್ ಆಫ್ ಕೊಟ್ಟು ಭೂಗತ ಜಗತ್ತಿನ ದೊರೆಯೆಂದು ಬಿಂಬಿಸ್ತಾನೆ. ಪತ್ರಿಕೆ ಅಂದ್ರೆ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ. ಸಮಾಜದ ಸ್ವಾಸ್ಥ್ಯ ಕಾಪಾಡುವಂತೆ ಸುದ್ದಿ ಸಮಾಚಾರಗಳನ್ನು ಬಿತ್ತರಿಸಬೇಕು ಅಂತ್ತೇಲ್ಲ ಉಪದೇಶ ನೀಡಿ, ಕೈಯಲ್ಲಿದ್ದ ಹಾಯ್ ಬೆಂಗಳೂರು ಪತ್ರಿಕೆಯನ್ನು ಕಸಿದುಕೊಂಡು ಹೋದ ಅದೇ ಮೇಷ್ಟ್ರು ಒಂದು ಪುಟವನ್ನು ಉಳಿಸದೇ ಲೀಸರ್ ಸಮಯದಲ್ಲಿ ಅ ಪತ್ರಿಕೆಯನ್ನು ಓದಿದ್ದು ಇತಿಹಾಸ. ಇಲ್ಲಿ ವಿಷಯ ಏನ್ ಅಂದರೆ ಲ್ಯಾಡ್ ಲೈನ್ ಕಾಲದಲ್ಲಿ ಯಾರ್ ಹೇಳ್ತಿದ್ರೋ ಗೊತ್ತಿಲ್ಲ. ರವಿ ಬೆಳಗೆರೆ ಬಗ್ಗೆ ಆಗಲೇ ಅಂತೆ ಕಂತೆಗಳ ಸೂರಿಮಳೆ ಕೇಳಲಿಕ್ಕೆ ರೋಚಕವೆನಿಸುತಿತ್ತು.ಹೈಸ್ಕೂಲ್ ಮುಗಿಸಿ ಕಾಲೇಜು ಸೇರುವ ತನಕ ತೇಜಸ್ವಿಯವರ ಬರಹಗಳೇ ಹೆಚ್ಚು ಇಷ್ಟ ಆಗ್ತಾ ಇತ್ತು. ಓ ಮನಸೇ ಓದಲು ಶುರುವಾದ ನಂತರ ಯಾವಪ್ಪ ಹೇಳಿದ್ರು ರವಿ ಬೆಳಗೆರೆ ಬಗ್ಗೆ ಒಂದಿಚ್ಚು ಕೋಪ ದ್ವೇಷ, ಉದಾಸೀನಾ ಹುಟ್ಟಲೇ ಇಲ್ಲ. ಓ ಮನಸೇ ಈ ಸಂಚಿಕೆ ಸಿಕ್ಕಿಲ್ಲ ಎಂದಾಗ ಈಗಿನ ಮಕ್ಕಳಿಗೆ ಕೈಯಲ್ಲಿ ಮೋಬೈಲ್ ಫೇಸ್ ಬುಕ್ ವಾಟ್ಸಫ್ ಇಲ್ಲದಾಗ ಆಗುವ ತಲ್ಲಣಗಳು ಅಂದು ನಾವು ಅನುಭವಿಸಬೇಕಾಗಿತ್ತು. ಒಂದೇ ವಠಾರದ, ಒಂದೇ ಸಮೂದಾಯವರ ಬಂದು-ಬಾಂದವರರಲ್ಲಿ ಉಂಟಾಗುವ ಗಟ್ಟಿ ಅನುಬಂಧ ಓ ಮನಸೇ ಅಲ್ಲಿನ ಓದುಗ ಹಾಗು ಬರಹಗಾರನ ನಡುವಿನ ಸಂಬಂಧದಲ್ಲಿ ಬೇರು ಬಿಟ್ಟಿತ್ತು. ಅವರ ಬರವಣಿಗೆಯನ್ನು ಓದಿದರೆ ರವಿಗೆ ತೀರ ವಯಸ್ಸಾಗಿದೆ ಎಂದು ಹದಿನೆಂಟು ವರ್ಷದ ಹುಡುಗರಿಗೂ ಅನಿಸಲ್ಲ. ವಾಸ್ತವದ ಓದುಗನ ತಲ್ಲಣಗಳನ್ನು ಓದುಗನೇ ವ್ಯಕ್ತಪಡಿಸುತ್ತಿರುವನೆಂಬ ಭಾವ ಪ್ರತಿ ಓದುಗನಿಗೂ ಉಕ್ಕಿ ಬರಬೇಕು ಅಂತ ಆಕ್ರಮಣಕಾರಿ ಬರಹಗಾರ ಬೆಳಗೆರೆ.

ರವಿ ಬೆಳಗೆರೆಯ ಕಾದಂಬರಿಗಳನ್ನು ಹದಿಹರೆಯದ ವಯಸ್ಸಿನಲ್ಲಿ ಓದಬಾರದು ಅಂತ ಸ್ವತಃ ಅನಿಸಿದೆ. ಕಾರಣ ಕಾದಂಬರಿ ಓದಿ ಮುಗಿಸಿದ ಮೇಲೆ ಅಮಲಿನಲ್ಲಿ ತೇಲಿದಂತ್ತಾಗುವ ಅ ದಿನಗಳು ನೆನೆದರೇ ಬೇಕಿತ್ತು. ಆ ಭಾವಗಳ ವೈಪರಿತ್ಯ ಆಗ ಎಂದು ಸ್ಪಷ್ಟವಾಗುತ್ತೆ. ಚಿವುಟಿದಷ್ಟು ಚಿಗುರು ಕವಲೊಡೆದಾಗೆ ಓದಿದಷ್ಟು ಓದುಗನಿಗೆ ನವ ಉಲ್ಲಾಸವನ್ನೊದಗಿಸುವ ಅಕ್ಷರ ಪುಂಜಗಳು ಪುಂಕಾನುಪುಂಕವಾಗಿ ಜೋಡಿಸುವ ನುಡಿ ಬ್ರಹ್ಮನ ಕೈಚಳಕಕ್ಕೆ ಮನಸೋಲದವರಿಲ್ಲ. ಇಂದಿಗೂ ಕಾಡುವ ಕಾದಂಬರಿಗಳಾದ ಹೇಳಿ ಹೋಗು ಕಾರಣ, ನೀ ಹಾಂಗೆ ನೋಡ ಬೇಡ ನನ್ನ ಮತ್ತು ಹಿಮಾಲಯನ್ ಬ್ಲಂಡರ್, ಟೈಮ್ ಪಾಸ್, ಬಾಟಮ್ ಐಟಂ ಹೀಗೆ ಹಲವು ಬಗೆಯ ಬರವಣಿಗೆಯ ಪ್ರಕಾರಗಳು ಪ್ರತಿ ಕ್ಷಣ ನಮ್ಮೊಂದಿಗೆ ರವಿ ಇದ್ದಾರೆ ಅನಿಸುವ ಸಂಗಾತ್ಯ ನೀಡುತ್ತವೆ.
ಅವರ ಸುಮಾರು ಒಂದು ಗಂಟೆಯ ಧ್ವನಿ ಮದ್ರಣವಾದ ಓ ಮನಸೇ ಕರ್ನಾಟಕದ ಅರ್ಧದಷ್ಟು ಜನ ಕೇಳಿರಬಹುದು. ನಾವು 2007 ರಲ್ಲಿ ಡಿಗ್ರಿ ಓದುವಾಗ ರವಿ ಬೆಳಗೆರೆಯ ಧ್ವನಿಯಲ್ಲಿ… ಪ್ರೀಯ ಸ್ನೇಹಿತರೇ ರವಿ ಬೆಳಗೆರೆ ನಮಸ್ಕಾರಗಳು, ವೃತ್ತಿಯಿಂದ ನಾನೊಬ್ಬ ಪತ್ರಕರ್ತ, ಬರವಣಿಗೆ ನನ್ನ ಫಸ್ಟ್‌ ಲವ್, ಉಳಿದಾಗೆ ಟಿವಿ ಮತ್ತು ರೇಡಿಯೋದಲ್ಲಿ ಮಾತಾಡ್ತೀನಿ, ಕಾರ್ಯಕ್ರಮಗಳನ್ನು ನಡೆಸಿಕೊಡ್ತೀನಿ, ಸಿನಿಮಾಗಳಲ್ಲಿ ಸೀರಿಯಲ್’ಗಳಲ್ಲಿ ಆಗೊಂದು-ಈಗೊಂದು ಪಾತ್ರ ಮಾಡ್ತಾ ಇರ್ತಿನಿ. ಪ್ರಾಥನಾ ಅಂತ ಒಂದು ನಡೆಸ್ತೀನಿ. ಕಾರ್ಗಿಲ್ ಅಲ್ಲಿ ಯುದ್ಧ, ಗುಜರಾತ್ ಅಲ್ಲಿ ಭೂಕಂಪ, ಒರಿಸ್ಸಾದಲ್ಲಿ ಚಂಡಮಾರುತ, ಆಫ್ಘಾನಿಸ್ತಾನದಲ್ಲಿ ಸಮರ ಹೀಗೆ ಎಲ್ಲೆಲ್ಲಿ ಮನುಷ್ಯ ಸಂಕುಲ ಸಂಕಟಕ್ಕೆ ಬಿತ್ತೋ ಅಲ್ಲಿಗೆಲ್ಲಾ ಹೋಗಿ ಮಾನವನ ಆರ್ತನಾದವನ್ನು ಕೇಳಿಸಿಕೊಂಡು ಬಂದು ಪ್ರಪಂಚಕ್ಕೆ ತಿಳಿಸೋ ಪ್ರಯತ್ನ ಮಾಡಿದ್ದೀನಿ ಅಂತ ತನ್ನ ಜೀವಮಾನದ ಸಾಧನೆಯ ಬಯೋಡಾಟ ನೀಡುತ್ತಿದದ್ದು ಇಂದಿಗೂ ಗುನುಗುನಿಸುತ್ತದೆ. ನಾವೆಲ್ಲ ನಮ್ಮ ಸಿವಿಯಲ್ಲಿ ಮೇಲಿನ ಒಂದರಲ್ಲಿ ಪ್ರಾವೀಣ್ಯತೆ ಪಡೆದಿರಬಹುದು ಅಥವಾ ಪಡೆದರೇ ಧನ್ಯರು. ಆದರೆ ಬೆಳಗೆರೆ ಬಹುಮುಖ ವ್ಯಕ್ತಿತ್ವದ ದುಬಾರಿ ಮನುಷ್ಯ. ಚಿಕ್ಕಪುಟ್ಟದಾಗೆ ಕೈಗೆಟುವವರೇ ಅಲ್ಲ.

ಸುದ್ದಿ ಮಾಧ್ಯಮಗಳ ಹಾವಳಿ ಹೆಚ್ಚುತ್ತಾ ಬಂದ ಸಂದರ್ಭ 2012ರಲ್ಲಿ ಭೀಮಾ ತೀರದಲ್ಲಿ ಎಂಬ ಸಿನಿಮಾ ವಿಷಯವಾಗಿ ಅವಶ್ಯಕತೆ ಮೀರಿ ಸಿನಿಮಾ ಮಂದಿ ರವಿ ಅವರನ್ನು ಟಾರ್ಗೆಟ್ ಮಾಡಿ ಬಿಟ್ಟರು. ಆದಾದ ಮೇಲೆ ಸುನೀಲ್ ಹೆಗ್ಗರವಳ್ಳಿ ಎಂಬ ಪತ್ರಕರ್ತ ಸಹ ರವಿ ಅವರನ್ನು ಜೈಲಿಗೆ ಕಳಿಸುವಷ್ಟು ಹುನ್ನಾರಗಳನ್ನು ಮಾಡಿದ. ಇದೆಲ್ಲವನ್ನು ತನ್ನದೇ ಆದ ಶೈಲಿಯಲ್ಲಿ ಎದುರಿಸಿ ಕೊಡಬೇಕಾದ ಜಾಗದಲ್ಲಿ ಕೊಟ್ಟ ಉತ್ತರದಿಂದ ಸಮಸ್ಯೆಯಿಂದ ಹೊರಬರುವ ಸುಳಿವು ಹುಡುಕಿಕೊಂಡ ರೀತಿ ನಿಜಕ್ಕೂ ಅದ್ಬುತವೇ ಸರಿ.

ಓ ಮನಸೇ ಓದುವಾಗ ರವಿ ಬೆಳಗೆರೆ ತುಂಬ ಭಾವಜೀವಿ ಎಂದು ತಿಳಿದಿತ್ತು. ವೀಣಾಧರಿ ಎಂಬ ಎಚ್’ವಿ ಸೋಂಕಿತೆಯನ್ನು ವೀಣಾಕ್ಕ ಎಂದು ಆಕೆಯ ಕೊನೆಯುಸಿರಿನ ತನಕ ಕಾಪಾಡಿ ಯೋಗ್ಯ ಬದುಕನ್ನು ರೂಪಿಸಿಕೊಟ್ಟರು. ತಾನು ಒಬ್ಬನೇ ಮಗ ಆದರೂ ಆತ ತಂಗಿ-ತಮ್ಮ, ಅಕ್ಕ-ಅಣ್ಣ, ಅಜ್ಜಿ-ಅಮ್ಮನಂತಹ ಸಾಮಾಜಿಕ ಸ್ತರದ ಎಲ್ಲ ಸಂಬಂಧಗಳನ್ನು ಸೃಷ್ಟಿಸಿಕೊಂಡು ಜೀವಿಸುವ ಮಾನವೀಯ ಮಾರ್ತಿ. ನಾವೆಲ್ಲ ನೋಡಿರ್ತಿವಿ ಒಬ್ಬ ವ್ಯಕ್ತಿ ಬೆಳೆದ ಅಂದ್ ಕೂಡಲೇ ಯಾವನೂ ನಿಯತ್ತಾಗಿ ದುಡಿದ್ರೆ ಉದ್ದಾರ ಆಗೋಕೆ ಸಾಧ್ಯ ಇಲ್ಲ ನಂಬರ್-2 ದಂದೆ ಮಾಡಿದ್ರೇ ಮಾತ್ರ ಬೆಳೆಯೋಕೆ ಸಾಧ್ಯ ಅಂತ ಹೇಳೊದನ್ನ ಕೇಳಿರ್ತಿವಿ. ಹೇಗಾದರೂ ಬೇಳಿಲಿ, ವ್ಯಾಖ್ಯಾನಗಳು ಆಯಾಯ ಕಾಲಕ್ಕೆ ಬದಲಾಗಬಹುದು ಸರಿ ತಪ್ಪುಗಳ ಸ್ವರೂಪ ನಿರಂತರ ರೂಪಾಂತರವಾಗಬಹುದು. ಇದೆಲ್ಲಕ್ಕಿಂತ ಹೆಚ್ಚಿನದು ತನಗೆ ಶಕ್ತಿ ಸಾಮಾರ್ಥ್ಯಗಳು ಇದ್ದಾಗ ಅವಕಾಶಗಳು ಸಿಕ್ಕಾಗ ಬಳಸಿಕೊಂಡು ಕೈಲಿ ಆದಷ್ಟು ಒಳ್ಳೆಯದನ್ನು ಮಾಡಿದವರು ರವಿ ಬೆಳಗೆರೆ.ಕೆಲವು ವ್ಯಕ್ತಿಗಳನ್ನು ದ್ವೇಷಿಸಬಹುದು ಅಥವಾ ಪ್ರೀತಿಸಬಹುದು ಆದರೆ ತತ್ಸಾರ ಮಾಡೊಕೆ ಸಾಧ್ಯವಿಲ್ಲ ಅಂತ ಕ್ಯಾಟಗರಿಯ ವ್ಯಕ್ತಿತ್ವ ಇವರದ್ದು. ಯಾವುದೇ ವರ್ಗದ ಜನಗಳಾಗಿರಲಿ ಪರಿಚಯವಿದೆ. ಯಾವುದೇ ಕ್ಷೇತ್ರದ ಬಗ್ಗೆ ಕೇಳಿ ಅಲ್ಲಿ ತನ್ನದೇ ಚಾಪು ಮೂಡಿಸುವಂತಹ ಅಸಾಧಾರಣ ಅಸಲಿ ಪ್ರತಿಭೆ. ಪೋಲಿಸ್ ಇಲಾಖೆಯಲ್ಲಿ ತನಿಖಾ ಸಂದಂರ್ಭದಲ್ಲಿ ಮತ್ತು ತನಿಖೆಯ ನಂತರದ ಪ್ರಕ್ರಿಯೆಯಲ್ಲಿ ಪೋಲಿಸ್ ಅಧಿಕಾರಿಗಳ ಚಟುವಟಿಕೆಗಳನ್ನು ಮತ್ತು ಅಧಿಕಾರದ ವ್ಯಾಪ್ತಿಯನ್ನು ಸಾಮಾನ್ಯ ಜನಕ್ಕೆ ತಿಳಿಸಿಕೊಡುವ ಕಾರ್ಯ ಇವರ ತನಿಖಾ ಲೇಖನಗಳಿಂದ ಆಗಿದೆ.

ನಾವೆಲ್ಲ ನೋಡಿರುವಂತೆ ಸಾಹಿತಿ ಅಂದರೆ ಜುಬ್ಬ ಹಾಕಿರಬೇಕು. ಯಾವಾಗಲೂ ಕನ್ನಡದ ಪರವಾಗಿ ಮಾತಾಡ್ತಾ ಇರಬೇಕು. ಕನ್ನಡ ನಾಡು-ನುಡಿ ಬಗ್ಗೆ ಭಾಷಣ ಮಾಡಬೇಕು. ಸಾಹಿತಿಗಳಿಗೆ ಬಡತನ ಕುಂಚವಾದರೂ ಇರಬೇಕು. ಸಾಹಿತಿ ಅಂದರೆ ದುಡ್ಡಿನ ಬಗ್ಗೆ ವೈರಾಗ್ಯ ಬಂದವರಂತಿರಬೇಕು. ಎಡಕ್ಕೊ – ಬಲಕ್ಕೋ ವಾಲಿರಬೇಕು. ಬ್ಯುಸಿನೆಸ್ ಕಡೆ ಅಸಕ್ತಿ ಇರಲೇಬಾರದು. ಪ್ರಶಸ್ತಿ ಬಂದಾಗ ತಿರಸ್ಕಾರಿಸಿ ಸುದ್ದಿ ಆಗಿ ಅದೇ ಪ್ರಶಸ್ತಿಯ ಪುರಸ್ಕಾರಗಳನ್ನು ಮನೆಗೆ ತರಿಸಿಕೊಳ್ಳಬೇಕು. ಸಾಹಿತಿ ಜನಸಾಮಾನ್ಯರು ಬದುಕುವಂತೆ ದಿನನಿತ್ಯದ ಗೋಜಲಿನಿಂದ ಮೀರಿ ಹಸಿವಿದ್ದರೂ ಹೊಟ್ಟೆ ಹಸಿವಿಲ್ಲವೆಂಬಂತೆ ಅಭಿನಯಿಸಬೇಕು. ಇವೆಲ್ಲವನ್ನೂ ಮೀರಿದ ರವಿ ಬೆಳಗೆರೆ ತನಗೆ ಹೇಗೆ ಬೇಕು ಹಾಗೆ ಬದುಕಿದ ಅಜಾತ ಶತ್ರು. ಕೇವಲ 62 ವರ್ಷ ಬದುಕಿದ ಬೆಳಗೆರೆ ವೈಯಕ್ತಿಕ ಜೀವನವನ್ನು ರೋಚಕವಾಗಿ ಕುತೂಹಲಕಾರಿಯಾಗಿ ಬದುಕಿ ತೋರಿಸಿದ್ದಾರೆ.

ಆತ ತಾನು ಉಪನ್ಯಾಸಕ, ಹೊಟೇಲ್ ಮಾಣಿ, ಪತ್ರಕರ್ತ, ಸಂಪಾದಕ ಅಂತ್ತೆಲ್ಲ ಅನಿಸೋಲ್ಲ. ಮಾನವೀತೆಯನ್ನು ಅರ್ಥೈಯಿಸಿಕೊಂಡು ಮನುಷ್ಯ ಸಂಬಂಧಗಳನ್ನು ಅರಿತು ಸಾಧ್ಯವಾದ ಕಡೆ ಸ್ಪಂದಿಸಿದ ಹುಂಬನಂತೆ ಕಾಣುತ್ತಾರೆ. ಜನ ಏನ್ ಅನ್ಕೊತಾರೆ ಅನ್ನೊ ಚೌಕಟ್ಟಿನಲ್ಲಿ ಪ್ರತಿ ಮನಷ್ಯ ತನ್ನ ತನವನ್ನು ಕಳೆದುಕೊಂಡು ಬದುಕಿ ವ್ಯರ್ಥ ಜೀವನ ಸಾಗಿಸಿದ್ದಾರೆ. ಭಾರತದಲ್ಲಿ ಮುಂದೆಯೂ ಬೇರೆಯವರು ಏನು ಅಂದುಕೊಳ್ಳುತ್ತಾರೆಂದುಕೊಳ್ಳುವುದರಲ್ಲಿ ಕಳೆದುಹೋಗುತ್ತದೆ ಬಹುಸಂಖ್ಯಾತರ ಜೀವನ.

ಅನಿಸಿದನ್ನು ಮಾಡಿ ಬೇಡವಾದದ್ದನ್ನು ಖಂಡಿಸಿ ಸಾತ್ವಿಕರಿಗೂ ಒಳಗೊಳಗೆ ಭಯ ಹುಟ್ಟಿಸಿ ಬದುಕಿನ ಪಯಾಣವನ್ನು ಮುಗಿಸಿದರು ರವಿ. ಉದಯವಾಗುವ ಮುನ್ನ ಅಸ್ತಂತ ಎಂಬ ಸುದ್ದಿ ಕೇಳಿ ಮನಸ್ಸಿಗೆ ಶೋಕ ಸಾಗರದ ಅಲೆ ಅಬ್ಬಳಿಸಿವೆ. ರವಿ ಬೆಳಗೆರೆಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಕಾಣದ ದೇವರಿಗೆ ಅನಂತ ಅನಂತ ಮನವಿ…


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Hai BengaluruKannada News WebsiteLatest News KannadaNews PaperRavi BelagereSpecial Articleರವಿ ಬೆಳಗೆರೆ
Previous Post

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ಇಳಿಕೆ

Next Post

ಬೆಳಕಿನ ರಾಜನಿಗೆ ಇದೊ ನಮನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Internet Image

ಬೆಳಕಿನ ರಾಜನಿಗೆ ಇದೊ ನಮನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

2023ರ ಮೊದಲ ಮನ್ ಕಿ ಬಾತ್: ನಳಿನ್ ಕುಮಾರ್ ಕಟೀಲ್, ಸಂಸದ ರಾಘವೇಂದ್ರ ವೀಕ್ಷಣೆ

January 29, 2023

ಸಾಗರ ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ ಶಾಸಕ ಹಾಲಪ್ಪ ಭೇಟಿ, ವಿಶೇಷ ಪೂಜೆ ಸಲ್ಲಿಕೆ

January 29, 2023

ನಟ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಶಿವರಾಜ್‌ಕುಮಾರ್ ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ

January 29, 2023

ರಥಸಪ್ತಮಿಯಂದು ಸಾಮೂಹಿಕ 108 ಸೂರ್ಯ ನಮಸ್ಕಾರ ಸಂಪನ್ನ

January 29, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ. ಸುದರ್ಶನ್ ಆಚಾರ್
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

2023ರ ಮೊದಲ ಮನ್ ಕಿ ಬಾತ್: ನಳಿನ್ ಕುಮಾರ್ ಕಟೀಲ್, ಸಂಸದ ರಾಘವೇಂದ್ರ ವೀಕ್ಷಣೆ

January 29, 2023

ಸಾಗರ ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ ಶಾಸಕ ಹಾಲಪ್ಪ ಭೇಟಿ, ವಿಶೇಷ ಪೂಜೆ ಸಲ್ಲಿಕೆ

January 29, 2023

ನಟ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಶಿವರಾಜ್‌ಕುಮಾರ್ ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ

January 29, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ಡಾ. ಸುದರ್ಶನ್ ಆಚಾರ್
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!