ಬೆಂಗಳೂರು: ಐದು ವರ್ಷಗಳ ಕಾಲ ದೇಶಕ್ಕೆ ದಕ್ಷ, ಪ್ರಾಮಾಣಿಕ ಹಾಗೂ ಸಮರ್ಥ ಆಡಳಿತ ನೀಡಿದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಕೋಟ್ಯಂತರ ಮಂದಿ ಪ್ರಯತ್ನಿಸುತ್ತಿದ್ದಾರೆ. ಇಂತಹ ಸಾಲಿನಲ್ಲಿ ನಿಜವಾದ ಕನ್ನಡಿಗ ಎಂದು ಹೆಸರು ಮಾಡಿರುವ ಪ್ರಶಾಂತ್ ಸಂಬರಗಿ ಪ್ರಮುಖರು.
ಪ್ರಧಾನಿ ನರೇಂದ್ರ ಮೋದಿಯವರು ಅಪ್ಪಟ ಅಭಿಮಾನಿಯಾಗಿರುವ ಪ್ರಶಾಂತ್ ಅವರು ವೃತ್ತಿಯಲ್ಲಿ ಚಿತ್ರ ವಿತರಕರು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಸ್ತರು. ಇಂತಹ ವ್ಯಕ್ತಿ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂಬ ತಮ್ಮ ಪ್ರಯತ್ನದ ಭಾಗವಾಗಿ ವಿಶೇಷ ಗೀತೆಯೊಂದನ್ನು ರೂಪಿಸಿದ್ದಾರೆ.
ಮತ್ತೊಮ್ಮೆ ಮೋದಿ ಎಂಬ ಗೀತೆಯನ್ನು ರೂಪಿಸಲಾಗಿದ್ದು, ವಿ. ನಾಗೇಂದ್ರ ಪ್ರಸಾದ್ ರಚನೆ ಮಾಡಿದ್ದು, ಸ್ಯಾಮ್ ಸಂಗೀತ ನೀಡಿದ್ದಾರೆ. ಗಾಯನ ಹಾಗೂ ಪ್ರದರ್ಶನವನ್ನು ಸಂಬರಗಿ ಅವರು ನಿರ್ವಹಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವಿದೆ. ಅದೇನೆಂದರೆ, ಯಾವುದೇ ರೀತಿ ಸಂಗೀತದ ಹಿನ್ನೆಲೆಯಿಲ್ಲದ, ರಾಗ, ತಾಳ ಹಾಗೂ ಲಯದ ಪರಿಚಯ ಹೆಚ್ಚು ಇಲ್ಲದ ಪ್ರಶಾಂತ್ ಸಂಬರಗಿ ಅವರೇ ಸ್ವತಃ ಈ ಗೀತೆಯನ್ನು ಹಾಡಿರುವುದು ವಿಶೇಷವಾದ ಅಂಶವಾಗಿದೆ.
ಹೊಸ ಹೊಸ ಕಲಿಕೆ ಹಾಗೂ ಪ್ರಯತ್ನಗಳ ಚಾಲೆಂಜ್ ತೆಗೆದುಕೊಳ್ಳಲು ಬಯಸುವ ಸಂಬರಗಿ ಹಾಡಿರುವ ಈ ಹಾಡು ಅತ್ಯಂತ ಸುಂದರವಾಗಿ ಮೂಡಿ ಬಂದಿದ್ದು, ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗಿದೆ.
ವೀಡಿಯೋ ನೋಡಿ:
Discussion about this post