No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Friday, August 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

19.70 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದ ಶಿಕಾರಿಪುರ ಪುರಸಭೆ

kalpa News by kalpa News
March 8, 2019
in Small Bytes, ಶಿಕಾರಿಪುರ
0
19.70 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದ ಶಿಕಾರಿಪುರ ಪುರಸಭೆ
Share on FacebookShare on TwitterShare on WhatsApp

ಶಿಕಾರಿಪುರ: ವಿವಿಧ ಮೂಲಗಳಿಂದ ಪಟ್ಟಣದ ಪುರಸಭೆ ಪ್ರಸಕ್ತ ಸಾಲಿನಲ್ಲಿ 9.42 ಕೋಟಿ ಅಂದಾಜು ಆದಾಯ ಸಂಗ್ರಹಿಸಿ 9.22 ಕೋಟಿ ಯನ್ನು ವಿವಿಧ ಅಭಿವೃದ್ದಿ ಕಾಮಗಾರಿಗೆ ವಿನಿಯೋಗಿಸಿ 19.70 ಲಕ್ಷ ಉಳಿತಾಯದ ಬಜೆಟನ್ನು ಪುರಸಭಾಧ್ಯಕ್ಷೆ ಪದ್ಮಾ ಗಜೇಂದ್ರ ಮಂಡಿಸಿದರು.

ಪುರಸಭೆಯ ಸಭಾಂಗಣದಲ್ಲಿ ನಡೆದ 2019-20 ನೆಯ ಸಾಲಿನ ಬಜೆಟ್ ಮಂಡಿಸಿದ ಪುರಸಭಾಧ್ಯಕ್ಷೆ ಪದ್ಮಾ, ಸರ್ಕಾರದ ಅನುದಾನ, ಸಿಬ್ಬಂದಿ ವೇತನ, ಎಸ್‌ಟಿಪಿ ಟಿಎಸ್‌ಪಿ, ಸ್ಥಳೀಯ ವಾಣಿಜ್ಯ ಮಳಿಗೆ, ಕರ ಸಂಗ್ರಹ ಮತ್ತಿತರ ವಿವಿಧ ಮೂಲಗಳಿಂದ ಪ್ರಸಕ್ತ ಸಾಲಿನಲ್ಲಿ ಅಂದಾಜು 9.42 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ರಸ್ತೆ, ಕಲ್ಲುಹಾಸು, ಪಾದಚಾರಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ದುರಸ್ತಿಗೆ 3 ಕೋಟಿ, ಬೀದಿ ದೀಪ ನಿರ್ವಹಣೆ ಹಾಗೂ ದುರಸ್ತಿಗೆ 66 ಲಕ್ಷ, ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕಾಗಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ 12 ಲಕ್ಷ, ನೈರ್ಮಲ್ಯ ಘನ ತ್ಯಾಜ್ಯ ವಸ್ತು ನಿರ್ವಹಣೆ ಯಂತ್ರೋಪಕರಣ ಇತರೆ ಸ್ಥಿರಾಸ್ತಿಗಳಿಗೆ 1 ಕೋಟಿ, ನೀರು ಸರಬರಾಜು ಮತ್ತಿತರ ಅಗತ್ಯ ನಾಗರಿಕ ಸೌಲಭ್ಯಕ್ಕಾಗಿ 1.80 ಕೋಟಿ, ಉದ್ಯಾನವನ ತೋಟ ನಿರ್ವಹಣೆಗೆ 45 ಲಕ್ಷ, ನಗರ ಬಡನತ ನಿರ್ಮೂಲನೆ ಮತ್ತು ಸಮಾಜ ಕಲ್ಯಾಣ, ಪ.ಜಾತಿ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಯೋಜನೆಯಡಿ ಸಮುದಾಯ ಭವನ, ಕಾಂಪೌಂಡ್ ನಿರ್ಮಾಣಕ್ಕೆ 40 ಲಕ್ಷ ಸಹಿತ 9.22 ಕೋಟಿ ಹಣವನ್ನು ವಿನಿಯೋಗಿಸಿ ಅಂದಾಜು 19.70 ಲಕ್ಷ ಉಳಿತಾಯದ ಗುರಿಯನ್ನು ಹೊಂದಲಾಗಿದೆ ಎಂದು ಘೋಷಿಸಿದರು.

ಪಟ್ಟಣದ ವಿವಿದೆಡೆ ಚರಂಡಿ ಭರ್ತಿಯಾಗಿ ಮ್ಯಾನ್‌ಹೋಲ್’ಗಳಿಂದ ತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿದ್ದು ಈ ಬಗ್ಗೆ ಸಂಬಂದಿಸಿದ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದರೆ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ನಾಗರಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ ಎಂದು ಸದಸ್ಯ ನಾಗರಾಜಗೌಡ ಆರೋಪಿಸಿ ತುರ್ತು ಅಗತ್ಯ ಕಾಮಗಾರಿ ಬಗ್ಗೆ ಟೆಂಡರ್ ಮತ್ತಿತರ ನೆಪ ಹೇಳದಂತೆ ತಾಕೀತು ಮಾಡಿ ಕ್ರಮ ಕೈಗೊಳ್ಳಲು ಅಸಾದ್ಯವಾದಲ್ಲಿ ಮ್ಯಾನ್‌ಹೋಲ್‌ಗಳನ್ನು ಖಾಯಂ ಮುಚ್ಚುವಂತೆ ಸಲಹೆ ನೀಡಿದರು.

ಕೂಡಲೇ ಮುಖ್ಯಾಧಿಕಾರಿ ಸುರೇಶ್ ಮ್ಯಾನ್‌ಹೋಲ್ ಹಾಳಾದ ಬಗ್ಗೆ ಫೋಟೋ ತೆಗೆದು ಸಂಬಂದಿಸಿದ ಇಲಾಖೆಯ ಎಇಇ ಗೆ ರವಾನಿಸಿ ಕೂಡಲೇ ಸರಿಪಡಿಸುವುದಾಗಿ ಬರವಸೆ ನೀಡಿದರು.

ಬೇಸಿಗೆ ಆರಂಭವಾಗುತ್ತಿದ್ದು ಈಗಾಗಲೇ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ ಕೂಡಲೇ ಮುಖ್ಯ ಪೈಪ್‌ನಲ್ಲಿ ದುರಸ್ತಿ, ಮುಚ್ಚಳ ಮತ್ತಿತರ ಸಮಸ್ಯೆ ಬಗ್ಗೆ ಹೆಚ್ಚಿನ ನಿಗಾವಹಿಸಿ ಜನತೆ ನೀರಿನ ತೊಂದರೆಯಿಂದ ಬಳಲದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸದಸ್ಯ ರವಿ ದೂಪದಹಳ್ಳಿ ಸೂಚಿಸಿದರು.

ಪಟ್ಟಣದ ಹಲವೆಡೆ ಭೂಗತ ವಿದ್ಯುತ್ ತಂತಿ ಅಳವಡಿಕೆ ಕಾಮಗಾರಿಗೆ ಪುರಸಭೆಯ ಗಮನಕ್ಕೆ ಬಾರದಂತೆ ಕಾಂಕ್ರೀಟ್ ರಸ್ತೆ, ಇಂಟರ್‌ಲಾಕ್ ಟೈಲ್ಸ್‌ ಕಿತ್ತುಹಾಕಿ ಸಂಬಂದಿಸಿದ ಏಜೆನ್ಸಿ ಕೋಟ್ಯಾಂತರ ಆಸ್ತಿಯನ್ನು ಹಾಳುಗೆಡವಿದ್ದಾರೆ. ಅರೆಬರೆ ಕಾಮಗಾರಿಯಿಂದಾಗಿ ಜನತೆ ತೀವ್ರವಾಗಿ ಪರಿತಪಿಸುವಂತಾಗಿದೆ ಈ ಬಗ್ಗೆ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಮೆಸ್ಕಾಂ ಹಾಗೂ ಏಜೆನ್ಸಿ ಮಾಲಿಕರನ್ನು ಕರೆಯಿಸಿ ಎಚ್ಚರಿಕೆಯನ್ನು ನೀಡುವಂತೆ ಸದಸ್ಯ ಮಹೇಶ್ ಹುಲ್ಮಾರ್, ನಾಗರಾಜ ಗೌಡ ಮತ್ತಿತರು ಆಗ್ರಹಿಸಿದಾಗ ಏಜೆನ್ಸಿ ಮಾಲಿಕ ಪುರಸಭೆಯ ಸದಸ್ಯರಿಗೆ ಲಕ್ಷಾಂತರ ಹಣ ನೀಡಿ ಕಾಮಗಾರಿಯನ್ನು ವಹಿಸಿಕೊಂಡಿರುವುದಾಗಿ ಸದಸ್ಯರ ಗೌರವಕ್ಕೆ ಚ್ಯುತಿ ತಂದಿದ್ದಾರೆ ಕೂಡಲೇ ಸಭೆಗೆ ಕರೆಯಿಸಿ ನಿಖರವಾದ ಮಾಹಿತಿಯನ್ನು ಪಡೆದು ಸತ್ಯ ಸಂಗತಿಯನ್ನು ಬಹಿರಂಗಪಡಿಸುವಂತೆ ಸದಸ್ಯ ಗೋಣಿ ಮಾಲತೇಶ್, ಟಿ.ಎಸ್ ಮೋಹನ್ ಮತ್ತಿತರರು ಪಟ್ಟು ಹಿಡಿದರು. ಮುಖ್ಯಾಧಿಕಾರಿ ಸುರೇಶ್ ಏಜೆನ್ಸಿ ಮಾಲಿಕರು, ಮೆಸ್ಕಾಂ ಎಇಇ ಅವರನ್ನು ಕರೆಯಿಸಿ ಸಮಜಾಯಿಷಿ ಪಡೆಯುವುದಾಗಿ ಭರವಸೆ ನೀಡಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕಾಗಿ ಪುರಸಭೆಯ ಹಲವು ವಾಣಿಜ್ಯ ಮಳಿಗೆಗಳನ್ನು ಖಾಲಿಗೊಳಿಸಿ ಮುಂಗಡ ಹಣ ವಾಪಾಸು ನೀಡದಿರುವುದರಿಂದ ಹಲವರು ತೀವ್ರ ತೊಂದರೆಗೊಳಗಾಗಿದ್ದಾರೆ ಎಂದು ಸದಸ್ಯೆ ರೂಪಕಲಾ ಹೆಗ್ಡೆ ಸಭೆಯ ಗಮನ ಸೆಳೆದಾಗ ಮುಖ್ಯಾಧಿಕಾರಿ, ಹಲವರು ಮುಂಗಡ ಹಣಕ್ಕಿಂತ ಅಧಿಕ ಬಾಡಿಗೆ ಬಾಕಿ ಉಳಿಸಿಕೊಂಡಿದ್ದು ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಅಂಗಡಿ ಪರವಾನಿಗೆ ನವೀಕರಣ ಬಗ್ಗೆ ಸಂಬಂದಿಸಿದ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದು ಇದರಿಂದಾಗಿ 1.5 ಸಾವಿರಕ್ಕಿಂತ ಅಧಿಕವಾಗಿರುವ ಅಂಗಡಿಗಳಲ್ಲಿ ಕೇವಲ 625 ಅಂಗಡಿಗಳಲ್ಲಿ ಮಾತ್ರ ಕರ ಸಂಗ್ರಹಿಸಲಾಗುತ್ತಿದೆ ಎಂದು ಸದಸ್ಯ ಪಾಲಾಕ್ಷಪ್ಪ ಆರೋಪಿಸಿ ತುರ್ತು ಕ್ರಮದ ಮೂಲಕ ಪುರಸಭೆಯ ಆದಾಯ ಹೆಚ್ಚಳಕ್ಕೆ ನಿಗಾವಹಿಸುವಂತೆ ತಿಳಿಸಿದರು.

ಯೋಧರ ಕುಟುಂಬದ ಕಲ್ಯಾಣ ನಿಧಿಗೆ ಬಾಕಿಯುಳಿದ ಅವಧಿಯ ಸದಸ್ಯರ ವೇತನವನ್ನು ಹಸ್ತಾಂತರಿಸಲು ಸಭೆಯಲ್ಲಿ ಸದಸ್ಯ ಟಿ.ಎಸ್. ಮೋಹನ್ ಮನವಿಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಸದಸ್ಯ ಎಲ್ಲಪ್ಪ, ಮಧು, ನಿಜಲಿಂಗಪ್ಪ, ಅಂಗಡಿ ಜಗದೀಶ, ಸೈಯದ್‌ಪೀರ್, ರತ್ನಮ್ಮ, ಶಭಾನಾ ಭಾನು, ವೀಣಾ, ಜಬೀನಾ, ಗೌರಮ್ಮ, ಫಯಾಜ್, ಸಂಗಮೇಶ್ ಮತ್ತಿತರರು ಉಪಸ್ಥಿತರಿದ್ದರು.

(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)

Tags: Kannada NewsLocal NewsMalnad NewsShikaripuraShikaripura BudgetShikaripura MunicipalityShivamogggaಪುರಸಭೆಶಿಕಾರಿಪುರ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿಕಾರಿಪುರ; ಸದೃಢ ಸಮಾಜ ನಿರ್ಮಾಣದಲ್ಲಿ ಕ್ರೀಡೆ ಪಾತ್ರ ಮಹತ್ವದ್ದು: ರಾಘವೇಂದ್ರ

Next Post

ಭದ್ರಾವತಿ-ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

kalpa News

kalpa News

Next Post
ಭದ್ರಾವತಿ-ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

ಭದ್ರಾವತಿ-ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL